ETV Bharat / state

ಶ್ರೀರಾಮ ನವಮಿ ರ‍್ಯಾಲಿ: ಸ್ಕೂಟಿ ಓಡಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕಿ - ಸ್ಕೂಟಿ ಓಡಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕಿ ರೂಪಾಲಿ ನಾಯ್ಕ

ಶ್ರೀರಾಮ ನವಮಿ ಅಂಗವಾಗಿ ಕಾರವಾರದಲ್ಲಿ ಹಿಂದೂ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ಬೈಕ್‌ ರ‍್ಯಾಲಿಗೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು.

MLA Rupali Naik participated rama navami celebration
ರಾಮ ನವಮಿ ಆಚರಣೆ: ಶಾಸಕಿ ರೂಪಾಲಿ ನಾಯ್ಕ್ ಭಾಗಿ
author img

By

Published : Apr 11, 2022, 10:57 AM IST

ಕಾರವಾರ: ಶ್ರೀ ರಾಮ ನವಮಿ ಅಂಗವಾಗಿ ಹಿಂದೂ ಸಂಘಟನೆಗಳು ಆಯೋಜಿಸಿದ್ದ ಬೈಕ್‌ ರ‍್ಯಾಲಿಗೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಬಳಿಕ ಸ್ವತಃ ತಾವೇ ಸ್ಕೂಟಿ ಓಡಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರದ ಮಾಲಾದೇವಿ ಮೈದಾನದಿಂದ ಹಮ್ಮಿಕೊಂಡ ಬೈಕ್ ರ‍್ಯಾಲಿ ಹಾಗೂ ಶೋಭಾ ತಿರಂಗಾ ಯಾತ್ರೆಗೂ ಮೊದಲು ಮಾಲಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಾಮ ನವಮಿ: ಸ್ಕೂಟಿ ಓಡಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕಿ ರೂಪಾಲಿ ನಾಯ್ಕ

ಬಳಿಕ ನಗರದ ಕೋಡಿಬೀರ ದೇವಸ್ಥಾನದ ಮಾರ್ಗವಾಗಿ, ಸುಭಾಷ್ ವೃತ್ತ, ಗ್ರೀನ್‌ ಸ್ಟ್ರೀಟ್ ಮೂಲಕ ಕೋಡಿಬಾಗ ಕಾಳಿ ರೀವರ್‌ ಗಾರ್ಡನ್‌ ಬಳಿ ಶ್ರೀ ರಾಮಚಂದ್ರ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ರ‍್ಯಾಲಿ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ಎಸ್.ನಾಯ್ಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಮೋದಿ ಅವರು ರಾಮ ರಾಜ್ಯದ ಕನಸು ನನಸಿಗಾಗಿ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಪಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ, ಆರೋಗ್ಯ ನೀಡಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಇದನ್ನೂ ಓದಿ: ಬೆಂಗಳೂರು-ಎಲ್ಲೆಡೆ ಶ್ರೀರಾಮ ನವಮಿ ಸಡಗರ: ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.