ETV Bharat / state

ಬೇಳೂರ್​​​ಗೆ ಸರ್ಕಾರ ಪತನದ ಬಗ್ಗೆ ಸ್ವಪ್ನ ಬಿದ್ದಿರಬೇಕು: ಸಚಿವ ಹೆಬ್ಬಾರ್ ವ್ಯಂಗ್ಯ - Minister Shivarama hebbar latest news

ಕಾಂಗ್ರೆಸ್​ ಮುಖಂಡ ಬೇಳೂರು ಗೋಪಾಲಕೃಷ್ಣ ಅವರಿಗೆ ನಾವು ಅಧಿಕಾರ ಕಳೆದುಕೊಂಡು ಶೀಘ್ರದಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಹಾಗಾಗಿ ಕನಸು ಕಂಡವರಂತೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

minister-shivarama-hebbar
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್
author img

By

Published : Aug 23, 2021, 5:21 PM IST

ಶಿರಸಿ: ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರ ಬೀಳುವ ಕುರಿತು ಸ್ವಪ್ನ ಬಿದ್ದಿರಬೇಕು. ಆದರೆ, ಯಾವುದೇ ಕಾರಣಕ್ಕೂ ಸರ್ಕಾರ ಒಂದು ದಿನ ಮುಂಚಿತವಾಗಿಯೂ ಪತನವಾಗಲ್ಲ. ಅವಧಿ ಪೂರೈಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗೋಪಾಲಕೃಷ್ಣ ಅವರಿಗೆ ಅಧಿಕಾರ ಕಳೆದುಕೊಂಡು ಶೀಘ್ರದಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಆದ ಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಳೂರು ಅವರ ಸರ್ಕಾರ ಪತನ ಹೇಳಿಕೆಗೆ ತಿರುಗೇಟು ನೀಡಿದರು.

119 ಶಾಸಕರನ್ನು ಹೊಂದಿರುವ ಸರ್ಕಾರ ಇದಾಗಿದೆ. ಇದು ಗ್ರಾಮ ಪಂಚಾಯಿತಿಯಲ್ಲ. ಯಾರಾದರೂ ಸರ್ಕಾರ ಬೀಳುವ ಭ್ರಮೆಯಲ್ಲಿದ್ದರೇ ಅದು ಭ್ರಮೆ ಮಾತ್ರ. ಆ ಭ್ರಮೆಯಲ್ಲಿಯೇ ಇನ್ನೂ ಒಂದು ವರ್ಷ ದಿನ ದೂಡಬೇಕಾಗುತ್ತದೆ ಎಂದು ಟೀಕಿಸಿದರು.

ಶಾಲೆಗೆ ಬರಲು ಅನುಕೂಲ ಆಗುವ ನಿರ್ಧಾರ: ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿದೆ. ಈಗಾಗಲೇ ಯಲ್ಲಾಪುರ ಶಾಲೆಗೆ ಭೇಟಿ ನೀಡಿದ್ದೇನೆ. ಮಕ್ಕಳು ಉತ್ಸಾಹದಿಂದ, ಏನೋ ಕಳೆದುಕೊಂಡಿದ್ದು ಸಿಕ್ಕಿದೆ ಎಂಬ ಆಶಯದಲ್ಲಿ ಶಾಲೆಗೆ ಬಂದಿದ್ದಾರೆ. ಪರಿಸ್ಥಿತಿ ನೋಡಿ ಉಳಿದ ಮಕ್ಕಳಿಗೂ ಶಾಲೆಗೆ ಬರಲು ಅನುಕೂಲ ಆಗುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.‌

ಓದಿ: ಬಿಜೆಪಿ ಜನಾಶೀರ್ವಾದ ಯಾತ್ರೆ ಹಾರ-ತುರಾಯಿಗೆ ಮಾತ್ರ ಸೀಮಿತ : ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.