ಭಟ್ಕಳ: ಹೆಬ್ಬಾವು ದಾಳಿ ಮಾಡಿದರೂ ವಿಚಲಿತರಾಗದೇ, ಹೆಬ್ಬಾವು ಹೊತ್ತುಕೊಂಡೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದು ವ್ಯಕ್ತಿಯೋರ್ವರು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಹೆಬ್ಬಾವು ದಾಳಿಗೊಳಗಾದ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇರುವ ವ್ಯಕ್ತಿಯೋರ್ವರ ಮನೆಯ ಪಕ್ಕದಲ್ಲಿ ಹೆಬ್ಬಾವೊಂದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸೀತಾರಾಮ ನಾಯ್ಕ ಮತ್ಯಾರಿಗಾದರೂ ಕಚ್ಚಿದರೆ ಅಪಾಯವಾಗುತ್ತದೆ ಎಂದು ತಿಳಿದು ತನ್ನ ಕೆಲವು ಸ್ನೇಹಿತರ ಸಹಾಯದಿಂದ ಹಾವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ.
ಹಾವನ್ನು ಸೆರೆಹಿಡಿಯುವ ವೇಳೆ ಸೀತಾರಾಮ ಅವರಿಗೆ ಹಾವು ದಾಳಿ ಮಾಡಿದೆ. ಹೆಬ್ಬಾವಿನಿಂದ ಕಚ್ಚಿಸಿಕೊಂಡ ಇವರು ವಿಚಲಿತಗೊಳ್ಳದೇ ಆರೇಳು ಅಡಿ ಉದ್ದದ ಹೆಬ್ಬಾವನ್ನು ತಮ್ಮ ಸ್ನೇಹಿತರ ಸಹಾಯದೊಂದಿಗೆ ಹಿಡಿದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಿ ಬಂದು ಅಕ್ಷತೆ ಹಾಕಿದ್ರೇ ಮಾತ್ರ ಮದುವೆಯಾಗ್ತೇನೆ: ದಾವಣಗೆರೆ ಯುವತಿ ಹಠ
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಬಂದು ಹಾವನ್ನು ಹಿಡಿದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.