ETV Bharat / state

ಕಚ್ಚಿದ ಹಾವನ್ನೇ ಕಿಸೆಯಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ವೃದ್ಧ!

ವೈದ್ಯರು ಕೇಳಿದಾಗ ಹೇಳಲು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಅಂಕೋಲಾದಲ್ಲಿ ವೃದ್ಧನೋರ್ವ ತನಗೆ ಕಚ್ಚಿದ ಹಾವನ್ನೇ ಪ್ಲಾಸ್ಟಿಕ್​ ಕವರ್​​ನಲ್ಲಿ ಕಟ್ಟಿ ಜೇಬಲ್ಲಿಟ್ಟುಕೊಂಡು ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

man admitted in hospital with snake
ಕಾರವಾರ
author img

By

Published : Sep 22, 2020, 5:33 PM IST

ಕಾರವಾರ: ವೃದ್ಧನೋರ್ವ ಕೆಲಸದ ವೇಳೆ ತನಗೆ ಕಚ್ಚಿದ ಹಾವನ್ನೇ ಪ್ಲಾಸ್ಟಿಕ್ ಕವರ್​​ನಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಕಚ್ಚಿದ ಹಾವಿನ ಮರಿಯನ್ನು ಜೇಬಲ್ಲಿಟ್ಟುಕೊಂಡು ಬಂದ ವೃದ್ಧ

ಅಂಕೋಲಾ ತಾಲೂಕಿನ ಅಂಬಾರಕೊಡ್ಲಿನ ಬಲೀಂದ್ರ ಗೌಡ ಕೊಟ್ಟಿಗೆಗೆ ಸೊಪ್ಪು ತರಲು ತೆರಳಿದ್ದ ವೇಳೆ ಹಾವಿನ ಮರಿ ಕಚ್ಚಿದೆ. ಇದರಿಂದ ಆತಂಕಗೊಂಡ ಅವರು ಹಾವನ್ನು ಜೊತೆಯಲ್ಲೇ ತೆಗೆದುಕೊಂಡು ಬಂದು ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ದೊರೆತ ಬಳಿಕ ಕಾರವಾರದ ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

ವೈದ್ಯರು ಕೇಳಿದಾಗ ಹಾವು ಯಾವುದು ಎಂದು ಹೇಳಲು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಕಚ್ಚಿದ ಹಾವಿನ ಮರಿಯನ್ನು ಕವರ್​​ನಲ್ಲಿ ತುಂಬಿಕೊಂಡು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದರು. ಬಳಿಕ ವೈದ್ಯರು ತಕ್ಷಣ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದ್ದು, ವಿಷದ ಹಾವಾಗಿರುವ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ದಾಖಲಾಗುವಂತೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.