ಮಂಗಳೂರು: ಮಳಲಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು ಮಂಗಳೂರು ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಲಯ ನೀಡಿರುವ ತೀರ್ಪನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ ಎಂದು ಹೇಳಿದರು.
ಮಳಲಿ ಮಸೀದಿ ನವೀಕರಣ ವೇಳೆ ದೇವಾಲಯ ಪತ್ತೆಯಾಗಿತ್ತು ಈ ಸಂದರ್ಭದಲ್ಲಿ ಕಟ್ಟಡವನ್ನು ಕೆಡವದಂತೆ ನ್ಯಾಯಾಲಯ ಮೋರೆ ಹೋಗಿದ್ದೆವು ನ್ಯಾಯಾಲಯ ಮಸೀದಿ ಆಡಳಿತ ಕಮಿಟಿಯ ಅರ್ಜಿಯನ್ನು ವಜಾ ಮಾಡಿ, ವಿಶ್ವ ಹಿಂದೂ ಪರಿಷತ್ ಅರ್ಜಿಯನ್ನು ಎತ್ತಿ ಹಿಡಿದಿದೆ. ಇದು ಹಿಂದೂಗಳಿಗೆ ಸಿಕ್ಕಿರುವ ಮೊದಲ ಹಂತದ ಜಯ ಎಂದು ಹೇಳಿದರು.
ಮುಂದೆ ಮಸೀದಿ ಜಾಗದಲ್ಲಿ ಭವ್ಯವಾದ ಮಂದಿರ ನಿರ್ಮಾಣ ಮಾಡಲಿದ್ದೇವೆ. ತಾಂಬೂಲ ಪ್ರಶ್ನೆಯಲ್ಲಿ ಅಲ್ಲಿ ಮಂದಿರ ಕಟ್ಟದಿದ್ದರೆ ಊರಿಗೆ ತೊಂದರೆ ಎಂದು ಬಂದಿದೆ. ಇದಕ್ಕೆ ದಾರಿ ಕೊಡದಿದ್ದರೆ ದೇಶದ ಇತರೆಡೆಯಂತೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಹಾಗೂ ಸಂಘರ್ಷ ಇಲ್ಲದೇ ಇದನ್ನು ಮುಂದೆ ತೆಗೆದುಕೊಂಡು ಹೋಗದೇ ಇತ್ಯರ್ಥ ಮಾಡೋಣ ಎಂದು ಮಸೀದಿಯ ಸಮುದಾಯಕ್ಕೆ ಆಗ್ರಹ ಮತ್ತು ವಿನಂತಿ ಮಾಡಿದರು. ಮುಂದಿನ ದಿನಗಳಲ್ಲಿ ಅಷ್ಟಮಂಗಳವನ್ನು ಇರಿಸಿ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲಿದ್ದೇವೆ. ಜಿಲ್ಲಾಡಳಿತವು ಪುರಾತತ್ತ್ವ ಇಲಾಖೆಯಿಂದ ಸರ್ವೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮಳಲಿಯ ದೇವಸ್ಥಾನವನ್ನು ಕಾನೂನು ಮೂಲಕವೇ ಪಡೆಯುತ್ತೇವೆ: ಮುತಾಲಿಕ್