ಜಮ್ಮು: ಕಣಿವೆ ರಾಜ್ಯದಲ್ಲಿ ತೀವ್ರ ಚಳಿ ವಾತಾವರಣ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅಥವಾ ಹಿಮವಾಗುತ್ತಿಲ್ಲ. ಬದಲಾಗಿ ಒಣ ಹವೆ ಮುಂದುವರಿದಿದ್ದು, ಗುರುವಾರ ಈ ಋತುಮಾನದ ಅತ್ಯಂತ ಚಳಿ ರಾತ್ರಿಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಸದ್ಯ ರಾಜ್ಯದಲ್ಲಿ -6.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಭಾರೀ ಗಾಳಿಯಿಂದ ಕೂಡಿದ ಥರಗುಟ್ಟುವ ಚಳಿ ಮುಂದುವರೆದಿದೆ. ಕಾಶ್ಮೀರ ಕಣಿವೆ ಸೇರಿದಂತೆ ಲಡಾಖ್ನಲ್ಲಿ ಕನಿಷ್ಠ ತಾಪಮಾನ ಮುಂದುವರೆದಿದ್ದು, ಇಲ್ಲಿ -24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಜೊಜಿಲಾ ಹೊರತಾಗಿ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ -6.2, ಕ್ವಾಜಿಗುಂಡ್ನಲ್ಲಿ -7.6, ಪಾಲ್ಗಾಮ್ನಲ್ಲಿ -8.2, ಕುಪ್ವಾರದಲ್ಲಿ -6.5, ಕೊಕೆರ್ನಾಗ್ನಲ್ಲಿ -5.8, ಸೋನ್ಮರ್ಗ್ನಲ್ಲಿ -9, ಬಂಡಿಪೂರದಲ್ಲಿ -7.3, ಬಾರಾಮುಲ್ಲಾದಲ್ಲಿ -5.9, ಬುಡ್ಗಾಮ್ನಲ್ಲಿ -7.6, ಗಂಡೆರ್ಬಲ್ನಲ್ಲಿ -6.4, ಪುಲ್ವಾಮಾದಲ್ಲಿ -9.5, ಅನಂತ್ನಾಗ್ನಲ್ಲಿ -9.9, ಖುಡ್ವಾನಿಯಲ್ಲಿ -8.5, ಕುಲ್ಗಾಮ್ನಲ್ಲಿ -6.8, ಶೋಪಿಯಾನ್ನಲ್ಲಿ -10 ಮತ್ತು ಲರ್ನೊದಲ್ಲಿ -9.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ -6.9, ಬನಿಹಾಲ್ನಲ್ಲಿ -3.8, ಬಟೊಟೆ 1, ಕತ್ರಾದಲ್ಲಿ 6, ಭಡೆರ್ವಾದಲ್ಲಿ -1.6, ಕಿಸ್ತ್ವಾರ್ನಲ್ಲಿ 1, ಪಡ್ಡೆರ್ನಲ್ಲಿ 8.5, ಪೂಂಜ್ನಲ್ಲಿ 1.2, ರಜೌರಿಯಲ್ಲಿ 0.3, ಸಾಂಬಾದಲ್ಲಿ 2.1, ಕಥುವಾದಲ್ಲಿ 6.6, ರೆಸಯ್ನಲ್ಲಿ 2.4, ಉದಮ್ಪುರ್ನಲ್ಲಿ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ -11.8 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕಾರ್ಗಿಲ್ನಲ್ಲಿ ಕನಿಷ್ಠ ತಾಪಮಾನ ಮೈನಸ್ 13.8 ಡಿಗ್ರಿ ದಾಖಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ 5 ಡಿಗ್ರಿ ಉಷ್ಣಾಂಶ ದಾಖಲು; ತೀವ್ರ ಮಾಲಿನ್ಯದಿಂದ ಮತ್ತಷ್ಟು ಹೆಚ್ಚಿದ ಆರೋಗ್ಯ ಸಮಸ್ಯೆ