ETV Bharat / state

ಹೊಸ ವರ್ಷಕ್ಕೆ ಮದ್ಯ ಸಾಗಾಟ: ಪ್ರತ್ಯೇಕ ಪ್ರಕರಣ, ಕೋಟ್ಯಂತರ ಮೌಲ್ಯದ ಮಾಲು ವಶ - ಟ್ರಕ್​​ನಲ್ಲಿ ಅಕ್ರಮ ಮದ್ಯ ಪತ್ತೆ

ಹೊಸ ವರ್ಷಾಚರಣೆಯ ಸಂತೋಷ ಕೂಟಗಳಿಗೆ ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Liquor worth crores seized
ಕೋಟ್ಯಾಂತರ ಮದ್ಯ ವಶ
author img

By

Published : Dec 30, 2022, 6:30 PM IST

ಹೊಸ ವರ್ಷಕ್ಕೆ ಅಕ್ರಮ ಮದ್ಯ ಸಾಗಾಟ ಪ್ರಕರಣ

ಕಾರವಾರ: ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 1 ಕೋಟಿ ರೂ ಮೌಲ್ಯದ ಗೋವಾ, ಕರ್ನಾಟಕದ ಮದ್ಯ ಜಪ್ತಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಘಟನೆ ನಡೆದಿದೆ. ಕರ್ನಾಟಕದ ಬಡ್‌ವೈಸರ್ ಮ್ಯಾಗ್ನಮ್, ಅಮೆರಿಕನ್ ವಿಸ್ಕಿ ಬಾಟಲ್‌ಗಳು ಗೋವಾದಲ್ಲಿ ತಯಾರಾಗಿದ್ದು, ಅಲ್ಲಿಂದ ಕರ್ನಾಟಕಕ್ಕೆ ಪೂರೈಕೆಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕರ್ನಾಟಕ ಸ್ಟೇಟ್ ಬೆವರೇಜಸ್ ಕಾರ್ಪೋರೇಶನ್ ಲಿಮಿಟೆಡ್ ನೀಡಿದ ಬೇಡಿಕೆಯಂತೆ ಗೋವಾದಿಂದ ಗೂಡ್ಸ್ ಟ್ರಕ್‌ಗಳಲ್ಲಿ ಆಗಾಗ ಮದ್ಯದ ಬಾಕ್ಸ್‌ಗಳನ್ನು ಕಳುಹಿಸಿ ಕೊಡಲಾಗುತ್ತದೆ. ಕರ್ನಾಟಕದಲ್ಲಿ ಒಂದು ಬಾಟಲ್‌ಗೆ ಸುಮಾರು 2,500 ರೂ. ಹೊಂದಿರುವ 4,800 ಬಾಟಲ್‌ಗಳನ್ನು, ಅಂದ್ರೆ 400 ಬಾಕ್ಸ್ ಮದ್ಯವನ್ನು ಪರವಾನಗಿಸಮೇತ ಟ್ರಕ್‌ನಲ್ಲಿ ಬೆಂಗಳೂರಿಗೆ ತರಲಾಗುತ್ತಿತ್ತು.

ಲಾರಿ ಚಾಲಕ ಇದರೊಂದಿಗೆ ಅಕ್ರಮವಾಗಿ 9 ಬಾಕ್ಸ್‌ಗಳಲ್ಲಿ 108 ಬಾಟಲ್ ಗೋವಾ ರಾಜ್ಯದ ಪರವಾನಗಿಯ ಮ್ಯಾನ್ಶನ್ ಹೌಸ್ ಫ್ರೆಂಚ್ ವಿಸ್ಕಿ ಸಾಗಿಸುತ್ತಿದ್ದ. ಟ್ರಕ್‌ನಲ್ಲಿ ಮೊದಲು ಈ ಅಕ್ರಮ ಮದ್ಯಗಳ ಬಾಕ್ಸ್‌ಗಳನ್ನಿಟ್ಟು, ಬಳಿಕ ಪರವಾನಗಿ ಇದ್ದ 1 ಕೋಟಿ 19 ಲಕ್ಷ ರೂಪಾಯಿ ಮೌಲ್ಯದ ಸಕ್ರಮ ಮದ್ಯವನ್ನು ಜೋಡಿಸಿಕೊಂಡು ಸಾಗಿಸಲು ಮುಂದಾಗಿದ್ದಾನೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಖುದ್ದು ತಾವೇ ಗೋವಾ-ಕರ್ನಾಟಕ ಗಡಿ ಮಾಜಾಳಿ ಚೆಕ್‌ಪೋಸ್ಟ್‌ಗೆ ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪಹರೆ ಕಾಯುತ್ತಿದ್ದರು. ಎಂದಿನಂತೆ ವಾಹನಗಳ ತಪಾಸಣೆ ನಡೆಸುವಾಗ ಟ್ರಕ್ ಬಂದಿದ್ದು, ಅಕ್ರಮ ಮದ್ಯಗಳಿರುವುದು ಪತ್ತೆಯಾಗಿದೆ.

ಮದ್ಯ, ಟ್ರಕ್​ ವಶಕ್ಕೆ: ಅಬಕಾರಿ ಕಾಯ್ದೆ ಪ್ರಕಾರ, ಸಕ್ರಮ ಮದ್ಯಗಳೆಷ್ಟೇ ಇರಲಿ, ಅದರೊಂದಿಗೆ ಅಕ್ರಮ ಮದ್ಯಗಳು ಕಡಿಮೆ ಪ್ರಮಾಣದಲ್ಲಿದ್ದರೂ ಎರಡೂ ಮದ್ಯಗಳನ್ನು ಜಪ್ತಿ ಪಡಿಸಿಕೊಳ್ಳಲಾಗುತ್ತದೆ. ಅದರಂತೆ ಅಬಕಾರಿ ಅಧಿಕಾರಿಗಳು 29 ಸಾವಿರ ರೂ ಮೌಲ್ಯದ ಅಕ್ರಮ ಮದ್ಯದ ಜೊತೆಗೆ 1.19 ಕೋಟಿಯ ಸಕ್ರಮ ಮದ್ಯ ಹಾಗೂ 19.50 ಲಕ್ಷ ಮೌಲ್ಯದ ಈಚರ್ ಟ್ರಕ್ಕನ್ನೂ ವಶಕ್ಕೆ ಪಡೆದಿದ್ದಾರೆ. ಟ್ರಕ್ ಚಾಲಕ ನರಸಿಂಹರಾಜುವನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಅಬಕಾರಿ ಪೊಲೀಸರ ದಾಳಿ: 20 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ಜಪ್ತಿ, ಒಬ್ಬನ ಬಂಧನ

ಇನ್ನೊಂದು ಪ್ರಕರಣದಲ್ಲಿ, ಹೊಸ ವರ್ಷದ ಪಾರ್ಟಿಗಾಗಿ ಮದ್ಯ ಸಾಗಿಸುತ್ತಿದ್ದಾಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳು 8 ಸಾವಿರ ರೂಪಾಯಿ ಮೌಲ್ಯದ 27 ಬಾಟಲ್ ಗೋವಾ ಮದ್ಯವನ್ನ ಸಾಗಿಸಲು ಮುಂದಾಗಿದ್ದರು. ಈ ವೇಳೆ 12 ಲಕ್ಷ ಮೌಲ್ಯದ ಕಾರಿನೊಂದಿಗೆ ಅಬಕಾರಿ ಅಧಿಕಾರಿಗಳು ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.

ಮೂವರ ವಿರುದ್ಧ ಪ್ರಕರಣ: ಗೋವಾದಲ್ಲಿ ಕಡಿಮೆ ದರದಲ್ಲಿ ಸಿಗುವ ಕಾರಣಕ್ಕೆ ಹೊಸ ವರ್ಷದ ಪಾರ್ಟಿಗಾಗಿ ಮದ್ಯ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಈ ಪ್ರಕರಣದಲ್ಲಿ ಕುಮಟಾ ಮೂಲದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.