ಕಾರವಾರ : ರೈಲಿಗೆ ಸಿಲುಕಿ ಗಂಡು ಚಿರತೆಯೊಂದು ಸ್ಥಳದಲ್ಲಿಯೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಅಮದಳ್ಳಿ ಬಳಿ ಇಂದು ನಡೆದಿದೆ.
ಮಂಗಳೂರಿನಿಂದ ಗೋವಾ ಕಡೆ ತೆರಳುತ್ತಿದ್ದ ರೈಲಿಗೆ ವೇಗವಾಗಿ ಬಂದ ಚಿರತೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರತೆ ದೇಹ ಛಿದ್ರವಾಗಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸ್ಥಳಕ್ಕೆ ಡಿಸಿಎಫ್ ವಸಂತ್ ರೆಡ್ಡಿ ಹಾಗೂ ಎಸಿಎಫ್ ಸದರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂರು ವರ್ಷದ ಚಿರತೆ ಎಂದು ಅಂದಾಜಿಸಲಾಗಿದೆ.
ಪಶು ವೈದ್ಯ ಡಾ. ದೀಪಕ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಕಾರವಾರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.