ETV Bharat / state

ಎರಡು ಲಾರಿಗಳ ಮಧ್ಯೆ ಸಿಲುಕಿ ಬೊಲೆರೋ ವಾಹನ ಅಪ್ಪಚ್ಚಿ: ಇಬ್ಬರು ಮಹಿಳೆಯರು ಸಾವು, 6 ಮಂದಿಗೆ ಗಾಯ - ಲಾರಿ ಬೊಲೇರೊ ನಡುವೆ ಅಪಘಾತ

ಹೊಸ ಬೊಲೆರೋ ಖರೀದಿಸಿ ಪೂಜೆಗಾಗಿ ಧರ್ಮಸ್ಥಳಕ್ಕೆ ಹೋಗುವಾಗ ಟಿಪ್ಪರ್ ಮತ್ತು ಲಾರಿ ಮಧ್ಯೆ ಸಿಲುಕಿ ಬೊಲೆರೋ ವಾಹನವೊಂದು ಅಪ್ಪಚ್ಚಿಯಾಗಿರುವ ಘಟನೆ ಯಲ್ಲಾಪುರ ತಾಲೂಕಿನ‌ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

Accident
ಅಪಘಾತ
author img

By

Published : Mar 23, 2021, 4:34 PM IST

ಕಾರವಾರ: ಟಿಪ್ಪರ್ ಮತ್ತು ಲಾರಿ ಮಧ್ಯೆ ಸಿಲುಕಿದ ಬೊಲೆರೋ ವಾಹನವೊಂದು ಅಪ್ಪಚ್ಚಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಮಕ್ಕಳು ಸೇರಿ ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ‌ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ರಾಜೇಶ್ವರಿ (35), ಚಿಕ್ಕಮ್ಮ ಪಾಟೇಲ್ (28) ಮೃತಪಟ್ಟ ಮಹಿಳೆಯರು. ವಾಹನದಲ್ಲಿದ್ದ ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶೃತಿ, ಆಕಾಶ, ಅಪೇಕ್ಷ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಭೀಕರ ಅಪಘಾತ

ಒಟ್ಟು ಏಂಟು ಮಂದಿ ಹೊಸ ಬೊಲೆರೋ ವಾಹನದ ಮೂಲಕ ಹುಬ್ಬಳ್ಳಿಯಿಂದ ಅಂಕೋಲಾ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ವಾಹನದ ಹಿಂಬದಿಯಲ್ಲಿದ್ದ ಲಾರಿ ಬ್ರೇಕ್ ಫೇಲ್ ಆಗಿ ಬೊಲೆರೋ ವಾಹನಕ್ಕೆ ಗುದ್ದಿದ್ದು, ಬಳಿಕ ಬೊಲೆರೋ ವಾಹನ ಸಹಿತ ಎದುರಿಗಿದ್ದ ಲಾರಿಗೆ ಡಿಕ್ಕಿಯಾಗಿದೆ. ಇದರಿಂದ ಎರಡು ಲಾರಿಗಳ ಮಧ್ಯೆ ಸಿಲುಕಿದ ಬೊಲೆರೋ ಅಪ್ಪಚ್ಚಿಯಾಗಿದೆ.

ವಾಹನದಲ್ಲಿ ಸಿಲುಕಿ ಒದ್ದಾಡುತ್ತಿದ್ದವರನ್ನು ಸ್ಥಳೀಯರು ಹೊರ ತೆಗೆಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಕ್ರೇನ್ ಮೂಲಕ ಹೊರ ತೆಗೆಯಲಾಗಿದೆ. ಗಾಯಗೊಂಡವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.