ಕಾರವಾರ: ಬಸ್ ಹತ್ತುವಾಗ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣ ಮತ್ತು ಹಣ ಕದ್ದಿದ್ದ ಮೂವರು ಚಾಲಾಕಿ ಕಳ್ಳಿಯರನ್ನು ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಮಟಾದ ಬಸ್‌ನಿಲ್ದಾಣದಲ್ಲಿ ಜೂನ್ 21 ರಂದು ಮಂಗಲಾ ರಾಮಚಂದ್ರ ಎಂಬುವವರು ಬಸ್ ಹತ್ತುವಾಗ ಅವರ ಬ್ಯಾಗಿನಲ್ಲಿದ್ದ 124 ಗ್ರಾಂ ಬಂಗಾರದ ಆಭರಣ, 50 ಸಾವಿರ ನಗದು ಕಳ್ಳತನವಾಗಿತ್ತು. ವಿಷಯ ತಿಳಿದ ಕೂಡಲೇ ಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಾರ್ಯಾಚರಣೆ ವೇಳೆ ಮೂವರು ಮಹಿಳಾ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳು ಬೆಂಗಳೂರಿನ ಅತ್ತಿಬೆಲೆ ಮೂಲದ ಆದಿಯಮ್ಮ ತಿರುಪತಿ, ವೆಂಕ್ಟಮ್ಮ ತಿರುಪತಿ, ಲಲಿತಾ ಅಲಿಯಾಸ್ ಭಾಗ್ಯ ನಾಗರಾಜ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ದ ಐಪಿಸಿ ಕಲಂ 379ರ ಅಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೌಡಿ ಶೀಟರ್ಗಳ ಮನೆ ಮೇಲೆ ಪೊಲೀಸರ ದಿಢೀರ್ ದಾಳಿ: ಮಾರಕಾಸ್ತ್ರ ವಶ