ಶಿರಸಿ: ರಾಜ್ಯದ ಪ್ರತಿಷ್ಠಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳಲ್ಲೊಂದಾದ ಕೆನರಾ ಡಿಸಿಸಿ ಬ್ಯಾಂಕಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನ ಮುಗಿದಿದ್ದು, 4 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಯಲ್ಲಾಪುರ ಪ್ರತಿನಿಧಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಭಟ್ಕಳ ಪ್ರತಿನಿಧಿಯಾಗಿ ಮಂಕಾಳ ವೈದ್ಯ, ಹಳಿಯಾಳ ಪ್ರತಿನಿಧಿಯಾಗಿ ಎಸ್.ಎಲ್.ಘೋಟ್ನೇಕರ್ ಹಾಗೂ ಜೊಯಿಡಾ ಪ್ರತಿನಿಧಿಯಾಗಿ ಕೃಷ್ಣ ದೇಸಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 16 ಕ್ಷೇತ್ರದಲ್ಲಿ 4 ಕ್ಷೇತ್ರ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. 64 ನಾಮಪತ್ರಗಳು ಸಲ್ಲಿಕೆಯಾಗಿದ್ದು, 12 ಕ್ಷೇತ್ರಗಳಿಗೆ ನ.11 ರಂದು ಚುನಾವಣೆ ನಡೆಯಲಿದೆ.
ಕೆನರಾ ಡಿಸಿಸಿ ಚುನಾವಣೆ: ಉಸ್ತುವಾರಿ ಸಚಿವ ಹೆಬ್ಬಾರ್ ಸೇರಿ ನಾಲ್ವರು ಅವಿರೋಧ ಆಯ್ಕೆ!
ಶಿರಸಿ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಯಲ್ಲಾಪುರ ಪ್ರತಿನಿಧಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಭಟ್ಕಳ ಪ್ರತಿನಿಧಿಯಾಗಿ ಮಂಕಾಳ ವೈದ್ಯ, ಹಳಿಯಾಳ ಪ್ರತಿನಿಧಿಯಾಗಿ ಎಸ್.ಎಲ್.ಘೋಟ್ನೇಕರ್ ಹಾಗೂ ಜೊಯಿಡಾ ಪ್ರತಿನಿಧಿಯಾಗಿ ಕೃಷ್ಣ ದೇಸಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.