ETV Bharat / state

ಸಿಕ್ಕ ಸಿಕ್ಕ ಕಡೆ ಕಾರು ನುಗ್ಗಿಸಿ ತಪ್ಪಿಸಿಕೊಳ್ಳಲು ಯತ್ನ: ಸಿನಿಮೀಯವಾಗಿ ಚೇಸ್ ಮಾಡಿ ಹಿಡಿದ ಪೊಲೀಸರು

ಬಂಧಿಸಲು ಹೋದ ವೇಳೆ ಎಸ್ಕೇಪ್ ಆಗಲು ಯತ್ನಿಸಿದ ಖದೀಮನೋರ್ವನನ್ನು ಕಾರವಾರ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ.

Karwar police arrested theft accused
ಕಾರವಾರದಲ್ಲಿ ಖದೀಮನ ಬಂ
author img

By

Published : May 26, 2021, 2:37 PM IST

Updated : May 26, 2021, 4:22 PM IST

ಕಾರವಾರ: ಬಂಧಿಸಲು ಹೋದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿರುವ ಘಟನೆ ನಗರದಲ್ಲಿ ನಡೆದಿದೆ.

ಕಾರವಾರದ ಸಿದ್ದರದ ಸಂದೀಪ್​ ಗಾಂವ್​ಕರ್​ (40) ಎಂಬಾತ ತನ್ನ ತಾಯಿಗೆ ಹೊಡೆದು ಗಲಾಟೆ ಮಾಡಿಕೊಂಡಿದ್ದ. ಈ ಬಗ್ಗೆ ವಿಚಾರಿಸಲು ಪಿಎಸ್​ಐ ರೇವಣ್ಣ ಸಿದ್ದಪ್ಪ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಕಳ್ಳತನ ಪ್ರಕರಣದಲ್ಲಿ ಬೇಕಾಗಿರುವುದನ್ನು ಗಮನಿಸಿದ ಪೊಲೀಸರು, ತಕ್ಷಣ ಆತನ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಆತ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಪೊಲೀಸರು ಆತನನ್ನು ಬೆನ್ನಟ್ಟಿ ಸೆರೆ ಹಿಡಿಯಲು ಮುಂದಾಗಿದ್ದರು. ಈ ವೇಳೆ ಸಿಕ್ಕ ಸಿಕ್ಕ ವಾಹನಗಳು, ಕಾಪೌಂಡ್​ಗೆ ಗುದ್ದಿ, ಎಲ್ಲೆಂದರಲ್ಲಿ ಗಾಡಿ ಓಡಿಸಿ ಆರೋಪಿ ಪರಾರಿಯಾಗಲು ಯತ್ನಿಸಿದ್ದ.

ಈ ಬಗ್ಗೆ ಮಾಹಿತಿ ಪಡೆದ ನಗರ ಪಿಎಸ್ಐ ಸಂತೋಷ್ ಕುಮಾರ್, ಗೀತಾಂಜಲಿ ಚಿತ್ರಮಂದಿರದ ಬಳಿ ಸಿಬ್ಬಂದಿಯೊಂದಿಗೆ ಬ್ಯಾರಿಕೇಡ್ ಹಾಕಿ ಆರೋಪಿಯನ್ನು ತಡೆಯಲು ಯತ್ನಿಸಿದ್ದರು. ಅಲ್ಲಿಯೂ ಕಾರು ನಿಲ್ಲಿಸದ ಆರೋಪಿ ಸಂದೀಪ್, ವೇಗವಾಗಿ ತೆರಳಿದ್ದ. ಆದರೂ ಬಿಡದ ಪೊಲೀಸರು ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದರು. ಕೊನೆಗೆ ಕಾಳಿ ನದಿ ತೀರದ ಖಾಪ್ರಿಯ ದೇವಸ್ಥಾನ ಹಿಂಬದಿಯ ಕೃಷ್ಣಾನಂದ ಜೋಶಿ ಎಂಬವವ ಮನೆಯ ಕಂಪೌಂಡ್​ಗೆ ಕಾರು ಗುದ್ದಿದ ಆರೋಪಿ, ಅಲ್ಲಿಂದಲೂ ಓಡಿ ಹೋಗಲು ಯತ್ನಿಸಿದ್ದ. ಆದರೆ, ಈ ವೇಳೆ ಅಲರ್ಟ್ ಆದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನ ಎರಡು ಕೈಗೆ ಹಗ್ಗ ಬಿಗಿದು ಠಾಣೆಗೆ ಕರೆದೊಯ್ದಿದ್ದಾರೆ.

ಓದಿ : ಪೋಲಿಸ್ ಠಾಣೆಯಿಂದ ಚಿನ್ನ ಕದ್ದ ಪ್ರಕರಣ: ನಕಲಿ ಐಡಿ ತೋರಿಸಿ ಓಡಾಡಿದ್ದನಾ ಕಿಂಗ್​ ಪಿನ್​?

ಆರೋಪಿ ಸಂದೀಪ್ ಗಾಂವ್​ಕರ್​ 2019ರಲ್ಲಿ ಬ್ರಾಹ್ಮಣ ಗಲ್ಲಿಯ ವಕೀಲ ವಿವೇಕ ಪ್ರಭು ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದಾಗ ಕಾರು ಕದ್ದು ತಲೆಮರೆಸಿಕೊಂಡಿದ್ದ. ಇಂದು ಆತ ಕಾರವಾರದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಮುಂದಾಗಿದ್ದರು. ಲಾಕ್​ಡೌನ್ ಆಗಿದ್ದರಿಂದ ರಸ್ತೆಯಲ್ಲಿ ಜನರ ಓಡಾಟವಿರಲಿಲ್ಲ. ಹಾಗಾಗಿ, ಆರೋಪಿ ಸಂದೀಪ್​​ನ ಅವಾಂತರದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Last Updated : May 26, 2021, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.