ETV Bharat / state

ಕಡಲ ಉಳಿವಿಗಾಗಿ ಮುಂದುವರೆದ ಪ್ರತಿಭಟನೆ: ವಾಣಿಜ್ಯ ಬಂದರು ಕಾಮಗಾರಿ ಸ್ಥಗಿತಕ್ಕೆ ಆಗ್ರಹ - ಕಾರವಾರ ಮೀನುಗಾರರ ಹೋರಾಟ ಸುದ್ದಿ

ಕಡಲ ತೀರ ಉಳಿಸಿ ಎಂದು ಕಾರವಾರದಲ್ಲಿ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಕಾರವಾರ ಬಂದ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದ ಮೀನುಗಾರರು ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯನ್ನು ತಡೆಯುವಂತೆ ಆಗ್ರಹ ವ್ಯಕ್ತಪಡಿಸಿದ್ದರು. ಆದರೆ ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಯನ್ನು ಮತ್ತೆ ಪ್ರಾರಂಭಿಸಲು ಮುಂದಾಗುತ್ತಿದ್ದಂತೆ ಕಡಲ ತೀರದಲ್ಲಿ ಮೀನುಗಾರರು ಜಮಾವಣೆಗೊಂಡು ಕಾಮಗಾರಿಯನ್ನ ಸ್ಥಗಿತಗೊಳಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

karwar fishermen protest for stop Commerce port Works
ಕಾರವಾರದಲ್ಲಿ ಮೀನುಗಾರರು
author img

By

Published : Jan 17, 2020, 10:59 PM IST

ಕಾರವಾರ : ಕಡಲ ತೀರ ಉಳಿಸಿ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದ್ದು ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ತಡೆಯುವಂತೆ ಮೀನುಗಾರರು ಒತ್ತಾಯಿಸಿದ್ದರು, ಆದರೆ ಮೀನುಗಾರರ ವಿರೋಧದ ನಡುವೆಯೂ ಅಧಿಕಾರಿಗಳು ಕಾಮಗಾರಿಯನ್ನು ಮತ್ತೆ ಪ್ರಾರಂಭಿಸಲು ಮುಂದಾಗುತ್ತಿದ್ದಂತೆ ಪ್ರತಿಭಟನೆ ಮುಂದುವರೆಸಿದ್ದಾರೆ.

ವಾಣಿಜ್ಯ ಬಂದರು ವಿಸ್ತರಣೆಯಿಂದ ಕಡಲ ತೀರಕ್ಕೆ ಹಾಗೂ ಮೀನುಗಾರರಿಗೆ ಹಾನಿಯಾಗಲಿದೆ ಎಂದು ಕಾರವಾರ ಬಂದ್ ಮಾಡುವ ಮೂಲಕ ಮೀನುಗಾರರು ಆಕ್ರೋಶವನ್ನು ಹೊರಹಾಕಿದ್ದರು. ಅಲ್ಲದೇ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಸ್ಥಗತಗೊಳಿಸುವಂತೆ ಆಗ್ರಹ ಮಾಡಿದ್ದರಿಂದ ನಿನ್ನೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಆದರೆ ಇವತ್ತು ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಗೆ ಚಾಲನೆ ನೀಡಲು ಬಂದರು ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮೀನುಗಾರರು ಜಮಾವಣೆಗೊಂಡು, ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಕುಳಿತು ಕಾಮಗಾರಿ ಮಾಡದಂತೆ ಪಟ್ಟು ಹಿಡಿದರು.

ಕಡಲ ಉಳಿವಿಗಾಗಿ ಮುಂದುವರೆದ ಪ್ರತಿಭಟನೆ

ಇತ್ತ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿ, ಕಾಮಗಾರಿ ಸಂಪೂರ್ಣ ಸ್ಥಗಿತ ಗೊಳಿಸುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದರು. ಪ್ರತಿಭಟನೆಯ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ತಿರುಗಿದ್ದು ಪ್ರತಿಭಟನೆಯ ಹಿಂದೆ ಮಾಜಿ ಶಾಸಕ ಸತೀಶ್ ಸೈಲ್ ಇದ್ದಾರೆ, ಮುಗ್ದ ಮೀನುಗಾರರನ್ನು ಸತೀಶ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

ರೂಪಾಲಿ ನಾಯ್ಕ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಸೈಲ್ ಅಡಗಿ ಕುಳಿತುಕೊಳ್ಳುವ ಬದಲು ಮೀನುಗಾರರ ಮಧ್ಯೆ ಬರಲಿ. ಸುಮ್ಮನೇ ಎಲ್ಲೋ ಕುಳಿತು ತನ್ನ ವಿರುದ್ದ ಟೀಕೆ ಮಾಡಬಾರದು ಎಂದು ಕಿಡಿಕಾರಿದ್ದಾರೆ.

Intro:Body:ಕಾರವಾರ: ಕಡಲ ತೀರ ಉಳಿಸಿ ಎಂದು ಕಾರವಾರದಲ್ಲಿ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಕಾರವಾರ ಬಂದ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದ ಮಿನುಗಾರರು ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯನ್ನು ತಡೆಯುವಂತೆ ಆಗ್ರಹ ವ್ಯಕ್ತಪಡಿಸಿದ್ದರು. ಆದರೆ ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಯನ್ನು ಮತ್ತೆ ಪ್ರಾರಂಭಿಸಲು ಮುಂದಾಗುತ್ತಿದ್ದಂತೆ  ಕಡಲ ತೀರದಲ್ಲಿ ಮೀನುಗಾರರು ಜಮಾವಣೆಗೊಂಡು ಕಾಮಗಾರಿಯನ್ನ ಸ್ಥಗಿತಗೊಳಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದು ಈ ಕುರಿತು ಓಂದು ವರದಿ ಇಲ್ಲಿದೆ ನೋಡಿ.

ವೈಸ್ ೧
ಒಂದೆಡೆ ಕಡಲ ತೀರದಲ್ಲಿ ಜಮಾವಣೆಗೊಂಡಿರುವ ಮೀನುಗಾರರು, ಮತ್ತೊಂದೆಡೆ ಮೀನು ಮಾರಾಟ ಮಾಡಲು ಬಂದವರನ್ನು ತಡೆದು ಆಕ್ರೋಶ ಹೊರಹಾಕುತ್ತಿರುವ ಮೀನುಗಾರ ಮಹಿಳೆಯರು, ಮತ್ತೊಂದೆಡೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸ್ತಾ ಇರುವ ಮೀನುಗಾರ ಮಹಿಳೆಯರು ಕಾರವಾರದಲ್ಲಿ ಕಡಲ ಮಕ್ಕಳು ನಡೆಸುತ್ತಿರುವ ಪ್ರತಿಭಟನೆಯ ದೃಶ್ಯಗಳಿದು.
ಹೌದು ಕಡಲ ತೀರ ಉಳಿಸಿ ಎಂದು ಕಾರವಾರದಲ್ಲಿ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆ ಇಂದೂ ಕೂಡ ಮುಂದುವರೆದಿದೆ. ವಾಣಿಜ್ಯ ಬಂದರು ವಿಸ್ತರಣೆಯಿಂದ ಕಡಲ ತೀರಕ್ಕೆ ಹಾನಿಯಾಗಲಿದೆ, ಜೊತೆಗೆ ಮೀನುಗಾರರಿಗೆ ಹಾನಿಯಾಗಲಿದೆ ಎಂದು ಕಾರವಾರ ಬಂದ್ ಮಾಡುವ ಮೂಲಕ ಮೀನುಗಾರರು ಆಕ್ರೋಶವನ್ನು ಹೊರಹಾಕಿದ್ದರು. ಅಲ್ಲದೇ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಸ್ಥಗತಿ ಗೊಳಿಸುವಂತೆ ಆಗ್ರಹ ಮಾಡಿದ್ದು ನಿನ್ನೆ ಕಾಮಗಾರಿ ಸ್ಥಗಿತ ಗೊಳಿಸಲಾಗಿತ್ತು. ಇವತ್ತು ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಗೆ ಚಾಲನೆ ಕೊಡಲು ಬಂದರು ಇಲಾಖೆ ಅಧಿಕಾರಿಗಳು ಮುಂದಾದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮೀನುಗಾರರು ಜಮಾವಣೆಗೊಂಡರು. ಅಲ್ಲದೇ ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಕುಳಿತು ಕಾಮಗಾರಿ ಮಾಡದಂತೆ ಪಟ್ಟು ಹಿಡಿದು ಕಾಮಗಾರಿಯನ್ನು ಸ್ಥಗಿತಗೊಳಿಸಿದರು.

ಬೈಟ್ ೧
ಸುಶಿಳಾ ಹರಿಕಂತ್ರ, ಮೀನುಗಾರ ಮಹಿಳೆ

ವೈಸ್ ೨
ಇನ್ನು ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಕಾಮಗಾರಿ ಸಂಪೂರ್ಣ ಸ್ಥಗಿತ ಗೊಳಿಸುವ ತನಕ ನಮ್ಮ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದರು. ಇನ್ನು ಪ್ರತಿಭಟನೆಯ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ತಿರುಗಿದ್ದು ಪ್ರತಿಭಟನೆಯ ಹಿಂದೆ ಮಾಜಿ ಶಾಸಕ ಸತೀಶ್ ಸೈಲ್ ಇದ್ದಾರೆ, ಮುಗ್ದ ಮೀನುಗಾರರನ್ನು ಸತೀಶ್ ಸೈಲ್ ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದರು. ಇನ್ನು ರೂಪಾಲಿ ನಾಯ್ಕ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಸೈಲ್ ರೂಪಾಲಿ ನಾಯ್ಕ ಅಡಗಿ ಕುಳಿತುಕೊಳ್ಳುವ ಬದಲು ಮೀನುಗಾರರ ಮಧ್ಯೆ ಬರಲಿ. ಸುಮ್ಮನೇ ಎಲ್ಲೋ ಕುಳಿತು ತನ್ನ ವಿರುದ್ದ ಟೀಕೆ ಮಾಡಬಾರದು ಎಂದು ಕಿಡಿಕಾರಿದ್ದಾರೆ.

ಬೈಟ್ ೨
ಸತೀಶ್ ಸೈಲ್, ಮಾಜಿ ಶಾಸಕ (ಬಿಳಿ ಅಂಗಿಧರಿಸಿದವರು)

ವೈಸ್ ೩
ಒಟ್ಟಿನಲ್ಲಿ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಕಡಲ ಮಕ್ಕಳ ಹೋರಾಟ ಮುಂದುವರೆದಿದ್ದು ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾಣ ತೆಗೆದುಕೊಳ್ಳುವವರೆಗೂ ಈ ಹೋರಾಟ ನಿಲ್ಲುವ ಸಾಧ್ಯತೆ ಬಹಳ ಕಡಿಮೆ ಎನ್ನುವುದರಲ್ಲಿ ಅನುಮಾನವಿಲ್ಲ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.