ETV Bharat / state

ಠಾಗೋರ್ ಕಡಲ ತೀರದಲ್ಲಿ ಮುಗಿಲೆತ್ತರ ಹಾರಾಡಿದ ನೂರಾರು ಹಳದಿ, ಕೆಂಪು ಗಾಳಿಪಟಗಳು - Karnataka Formation Day

ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡಿದ್ದು, ಕಡಲನಗರಿ ಕಾರವಾರದಲ್ಲಿ ನೂರಾರು ಹಳದಿ ಮತ್ತು ಕೆಂಪು ಬಣ್ಣದ ಗಾಳಿಪಟಗಳನ್ನು ಹಾರಿಸಿ, ಸಂಭ್ರಮಿಸಲಾಯಿತು.

kites
ಮುಗಿಲೆತ್ತರಕ್ಕೆ ಹಾರಾಡಿದ ನೂರಾರು ಹಳದಿ ಕೆಂಪು ಗಾಳಿಪಟಗಳು
author img

By ETV Bharat Karnataka Team

Published : Nov 1, 2023, 9:17 AM IST

Updated : Nov 1, 2023, 1:04 PM IST

ಠಾಗೋರ್ ಕಡಲ ತೀರದಲ್ಲಿ ಹಾರಾಡಿದ ಹಳದಿ, ಕೆಂಪು ಗಾಳಿಪಟಗಳು

ಕಾರವಾರ : ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿವೆ. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ರಾಜ್ಯ ಸರ್ಕಾರ ಪ್ರತಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಪ್ರಸಿದ್ಧ ರವೀಂದ್ರನಾಥ​ ಠಾಗೋರ್ ಕಡಲ ತೀರದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ನೂರಾರು ಗಾಳಿಪಟಗಳನ್ನು ಇಂದು ಬೆಳಿಗ್ಗೆ ಹಾರಿಸಲಾಯಿತು. ಈ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.

ಒಂದೆಡೆ ನೂರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಸೇರಿರುವ ಜನರು, ಮತ್ತೊಂದೆಡೆ ಗಾಳಿಪಟವನ್ನು ಕೈಯಲ್ಲಿ ಹಿಡಿದು ಕಡಲ ತೀರದಲ್ಲಿ ಹಾರಿಸುತ್ತಾ ಖುಷಿ ಪಡುತ್ತಿರುವ ಪ್ರವಾಸಿಗರು, ಇನ್ನೊಂದೆಡೆ ಜಿಲ್ಲಾಧಿಕಾರಿ ಸಹ ಗಾಳಿಪಟ ಹಾರಿಸುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂತು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆಗಮಿಸಿ ಕನ್ನಡ ಬಾವುಟದ ಹಳದಿ ಹಾಗೂ ಕೆಂಪು ಬಣ್ಣದ ನೂರಾರು ಗಾಳಿಪಟಗಳನ್ನು ಪ್ರವಾಸಿಗರಿಗೆ ವಿತರಿಸಿ, ಏಕಕಾಲಕ್ಕೆ ಹಾರಿಸಿದರು.

ಇದನ್ನೂ ಓದಿ: ಕರುನಾಡಿಗೆ 50ರ ಸಂಭ್ರಮ : 21 ಕೋಟಿಯಿಂದ 3.27 ಲಕ್ಷ ಕೋಟಿವರೆಗಿನ ವಿಕಾಸದ ರಾಜ್ಯ ಬಜೆಟ್ ಇತಿಹಾಸ

ಗಾಳಿಪಟ ಹಾರಿಸುವುದಕ್ಕೆ ಕೇವಲ ಜಿಲ್ಲೆಯವರು, ರಾಜ್ಯದವರು ಮಾತ್ರವಲ್ಲದೇ ಹೊರ ರಾಜ್ಯದ ಪ್ರವಾಸಿಗರು ಸಹ ಆಗಮಿಸಿ 'ಜೈ ಕರ್ನಾಟಕ ಮಾತೆ' ಎನ್ನುವ ಮೂಲಕ ಸಂಭ್ರಮದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ಕರ್ನಾಟಕಕ್ಕೆ 50ರ ಸಂಭ್ರಮವಾದ್ರೂ, ಕನ್ನಡ ಭಾಷೆ ಮಾತ್ರ ಬೆಳವಣಿಗೆಯಾಗಿಲ್ಲ: ಮುಖ್ಯಮಂತ್ರಿ ಚಂದ್ರು

ಈ ಬಾರಿ ವಿಶೇಷ ರಾಜ್ಯೋತ್ಸವ ಸಂಭ್ರಮ : ಮೈಸೂರು ರಾಜ್ಯ 1973ರ ಅಕ್ಟೋಬರ್‌ 20ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು 50 ವರ್ಷ ಪೂರೈಸಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ವರ್ಷವಿಡೀ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇದನ್ನೂ ಓದಿ: 'ಕನ್ನಡಕ್ಕೆ ಮಾನ್ಯತೆ ಸಿಗಲಿ, ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳಲಿ': ಹಿರಿಯ ಸಾಹಿತಿಗಳ ಸಂದರ್ಶನ

Last Updated : Nov 1, 2023, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.