ETV Bharat / state

ಕೈಗಾ ಅಣು ವಿದ್ಯುತ್ ಘಟಕ ವಿರೋಧಿ ಕಾರ್ಯಾಗಾರದಲ್ಲಿ ಕುರ್ಚಿಗಳು ಖಾಲಿ ಖಾಲಿ..

ಕೈಗಾದಲ್ಲಿ ಸ್ಥಾಪನೆಯಾಗಲಿರುವ ಹೆಚ್ಚುವರಿ 5 ಮತ್ತು 6 ನೇ ಅಣು ವಿದ್ಯುತ್‌ ಸ್ಥಾವರ ವಿರೋಧಿಸಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಜನಬೆಂಬಲ ಸಿಗದೆ ಖಾಲಿ ಕುರ್ಚಿಗಳ ಮಧ್ಯೆ ಮುಕ್ತಾಯಗೊಂಡಿದೆ.

ಕೈಗಾ ಅಣು ವಿದ್ಯುತ್ ಘಟಕ ವಿರೋಧಿ ಕಾರ್ಯಾಗಾರ
author img

By

Published : Oct 5, 2019, 8:02 PM IST

ಕಾರವಾರ: ಕೈಗಾದಲ್ಲಿ ಸ್ಥಾಪನೆಯಾಗಲಿರುವ ಹೆಚ್ಚುವರಿ 5 ಮತ್ತು 6 ನೇ ಅಣು ವಿದ್ಯುತ್‌ ಸ್ಥಾವರ ವಿರೋಧಿಸಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಜನಬೆಂಬಲ ಸಿಗದೆ ಖಾಲಿ ಕುರ್ಚಿಗಳ ಮಧ್ಯೆ ಮುಕ್ತಾಯಗೊಂಡಿದೆ.

ಕೈಗಾ ಅಣು ವಿದ್ಯುತ್ ಘಟಕ ವಿರೋಧಿ ಕಾರ್ಯಾಗಾರ

ಕೈಗಾ ಬಳಿ ಸ್ಥಾಪನೆಯಾಗಲಿರುವ ಹೆಚ್ಚುವರಿ ಘಟಕ ವಿರೋಧಿಸಿ, ಸ್ಥಾವರದ 5 ಮತ್ತು 6 ನೇ ಘಟಕ ವಿರೋಧಿ ಹೋರಾಟ ಸಮಿತಿ ಇಂದು ನಗರದ ದೈವಜ್ಞ ಭವನದಲ್ಲಿ ಜಿಲ್ಲಾಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿತ್ತು. ನೂರಾರು ಜನರು ಸೇರುವ ನಿರೀಕ್ಷೆಯಿತ್ತು. ಆದರೆ ಕೆಲವೇ ಕೆಲವು ಜನ ಮಾತ್ರ ಕಾರ್ಯಾಗಾರಕ್ಕೆ ಆಗಮಿಸಿದ್ದರು.

ಕಾರವಾರದ ಕೈಗಾದಲ್ಲಿ ಹೆಚ್ಚುವರಿಯಾಗಿ ಸ್ಥಾಪಿಸಲು ಮುಂದಾಗಿರುವ 5 ಮತ್ತು 6 ನೇ ಘಟಕ ಸ್ಥಾಪನೆಗೆ ಯೋಜನೆ ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಳೆದ ವರ್ಷ ಯೋಜನೆ ವಿರೋಧದ ನಡುವೆಯೂ ಘಟಕ ಸ್ಥಾಪನೆ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಸಭೆ ಕರೆದಾಗ, ಪಕ್ಷಾತೀತವಾಗಿ ಅಹವಾಲು ಸಭೆಯನ್ನೆ ಬಹಿಷ್ಕರಿಸಲಾಗಿತ್ತು. ಆದರೆ ಇತ್ತೀಚೆಗೆ ಪರಿಸರ, ಹವಮಾನ ಸಚಿವಾಲಯವು ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಿತ್ತು. ಇದರ ವಿರುದ್ಧ ಆಯೋಜಿಸಿದ್ದ ಕಾರ್ಯಾಗಾರ ಕೆಲವೇ ಕೆಲವು ಮಂದಿಗೆ ಸಿಮಿತವಾಗುವಂತಾಯಿತು.

ಈ ನಡುವೆ ಕಾರ್ಯಗಾರವನ್ನು ಉದ್ಘಾಟಿಸಿದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ಪರಿಸರ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುವ ಹೆಚ್ಚುವರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪರಿಸರವಾದಿ ಅನಂತ್ ಹೆಗಡೆ ಅಶಿಸರ ಮಾತನಾಡಿ, ಅಣುವಿದ್ಯುತ್ ಸ್ಥಾವರ ಸ್ಥಾಪನೆಗೆ ನಾಲ್ಕು ದಶಕಗಳಿಂದ ವಿರೋಧಿಸಲಾಗುತ್ತಿದೆ. ಆದರೂ ನಾಲ್ಕು ಘಟಕಗಳನ್ನು ಸ್ಥಾಪಿಸಿ ಇದೀಗ ಹೆಚ್ಚುವರಿ ಎರಡು ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಈಗಾಗಲೇ ಸ್ಥಾವರ ಕುಸಿತ, ವಿಜ್ಞಾನಿಗಳ ಕಣ್ಮರೆ, ಕ್ಯಾನ್ಸರ್ ನಂತಹ ಕಾಯಿಲೆಗಳು ಹರಡುತ್ತಿದ್ದು, ಈ ಬಗ್ಗೆ ಅಧ್ಯಯನ ಮತ್ತು ಸಮೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಇಂತಹ ವರದಿಗಳನ್ನು ಅಣು ವಿದ್ಯುತ್ ಸ್ಥಾವರದವರು ಬಹಿರಂಗಪಡಿಸುತ್ತಿಲ್ಲ. ಆದರೆ ಪರಿಸರ, ಪ್ರಾಣಿ, ಪಕ್ಷಿ, ನೀರು ಸೇರಿದಂತೆ ಮನುಕುಲಕ್ಕೆ ಹಾನಿಕಾರಕವಾಗಿರುವ ಅಣು ವಿದ್ಯುತ್ ಘಟಕ ಸ್ಥಾಪನೆಗೆ ಮುಂದಾಗಿರುವುದು ಈ ಭಾಗದ ಸುತ್ತಮುತ್ತಲಿನ ಜನರಲ್ಲಿ ಆಘಾತ ತಂದಿದೆ. ಈಗಾಗಲೇ ಸ್ಥಾಪನೆಯಾಗಿರುವ ಘಟಕಗಳಿಂದ ಸ್ಥಳೀಯವಾಗಿ ಏನು ಅಭಿವೃದ್ಧಿಯಾಗಿಲ್ಲ. ಇಷ್ಟಾದರೂ ಈ ಹಾನಿಕಾರಕ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಇದೀಗ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಮತ್ತೊಮ್ಮೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಕೈಗಾ ವ್ಯಾಪ್ತಿಯ ಕಾರವಾರ, ಅಂಕೋಲಾ, ಯಲ್ಲಾಪುರ ಹಾಗೂ ಜೋಯಿಡಾ ತಾಲ್ಲೂಕುಗಳಿಗೆ ಅಣುವಿದ್ಯುತ್ ಘಟಕದಿಂದ ಸಾಕಷ್ಟು ಹಾನಿ ಉಂಟಾಗುತ್ತಿದೆ. ಕೈಗಾ ಸುತ್ತಲಿನ ಅರಣ್ಯ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಸಾಕಷ್ಟು ಬಗೆಯ ಬುಡಕಟ್ಟು ಹಾಗೂ ವನವಾಸಿ ಜನಾಂಗಗಳು ವಾಸವಾಗಿವೆ. ಹೀಗಾಗಿ ಕೈಗಾ ವಿಸ್ತರಣೆಯಿಂದಾಗಿ ಜನ ಜೀವನದ ಜೊತೆಗೆ ಸುತ್ತಲಿನ ಪರಿಸರಕ್ಕೂ ವ್ಯತಿರಿಕ್ತ ಪ್ರಭಾವ ಬೀರಲಿದೆ. ನೂತನ ಘಟಕ ಯಾವುದೇ ಕಾರಣಕ್ಕೂ ಸ್ಥಾಪಿಸದಂತೆ ವನವಾಸಿ ಕಲ್ಯಾಣ ಸಮಿತಿ ಸದಸ್ಯ ಶಾಂತಾರಾಮ ಸಿದ್ಧಿ ಆಗ್ರಹಿಸಿದರು.

ಸದ್ಯ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನೂತನ 5 ಮತ್ತು 6ನೇ ಘಟಕಗಳು ತಲಾ 700 ಮೆಗಾವ್ಯಾಟ್ ಸಾಮರ್ಥ್ಯವನ್ನ ಹೊಂದಿದ್ದು, 1400 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿವೆ. ಈಗಾಗಲೇ ಕೈಗಾ ಸುತ್ತಲಿನ ಪ್ರದೇಶದಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿರುವುದರಿಂದ ಯಾವುದೇ ಕಾರಣಕ್ಕೂ ನೂತನ ಘಟಕಗಳು ಬೇಡ ಎಂದಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Intro:Body:ಖಾಲಿ ಕುರ್ಚಿಗಳ ಮಧ್ಯೆ ಕಾರ್ಯಾಗಾರ... ಕೈಗಾ ಘಟಕಕ್ಕೆ ವಿರೋಧ

ಕಾರವಾರ:  ಕೈಗಾದಲ್ಲಿ ಸ್ಥಾಪನೆಯಾಗಲಿರುವ ಹೆಚ್ಚುವರಿ ೫ ಮತ್ತು ೬ನೇ ಅಣು ವಿದ್ಯುತ್‌ ಸ್ಥಾವರ ವಿರೋಧಿಸಿ ಹಮ್ಮಿಕೊಂಡಿದ್ದ ಕಾರ್ಯಗಾರವೊಂದು ಜನಬೆಂಬಲ ಸಿಗದೆ ಖಾಲಿ ಕುರ್ಚಿಗಳ ಮಧ್ಯೆ ಮುಕ್ತವಾಗಿದೆ.
ಹೌದು, ಕೈಗಾ ಬಳಿ ಸ್ಥಾಪನೆಯಾಗಲಿರುವ ಹೆಚ್ಚುವರಿ ಘಟಕ ವಿರೋಧಿಸಿ ಕೈಗಾ ಅಣುವಿದ್ಯುತ್ ಸ್ಥಾವರದ ೫ ಮತ್ತು ೬ ಘಟಕ ವಿರೋಧಿ ಹೋರಾಟ ಸಮಿತಿ ಇಂದು ನಗರದ ದೈವಜ್ಞ ಭವನದಲ್ಲಿ ಜಿಲ್ಲಾಮಟ್ಟದ ಕಾರ್ಯಗಾರವೊಂದನ್ನು ಹಮ್ಮಿಕೊಂಡಿತ್ತು. ನೂರಾರು ಜನರು ಸೇರುವ ನಿರೀಕ್ಷೆಯಲ್ಲಿ ಹಾಲ್ ತುಂಬ ಕುರ್ಚಿಗಳನ್ನು ಹಾಕಿದ್ದರಾದರು ಕೆಲವೇ ಕೆಲವು ಜನ ಆಗಮಿಸಿದ್ದರು. 
ಕಾರವಾರದ ಕೈಗಾದಲ್ಲಿ ಹೆಚ್ಚುವರಿಯಾಗಿ ಸ್ಥಾಪಿಸಲು ಮುಂದಾಗಿರುವ ೫ ಮತ್ತು ೬ ನೇ ಘಟಕ ಸ್ಥಾಪನೆಗೆ ಯೋಜನೆ ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಳೆದ ವರ್ಷ ಯೋಜನೆ ವಿರೋಧದ ನಡುವೆಯೂ ಘಟಕ ಸ್ಥಾಪನೆ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಸಭೆ ಕರೆದಾಗ ಪಕ್ಷಾತೀತವಾಗಿ ಅಹವಾಲು ಸಭೆಯನ್ನೆ ಬಹಿಷ್ಕರಿಸಲಾಗಿತ್ತು. ಆದರೆ ಇತ್ತೀಚೆಗೆ ಪರಿಸರ, ಹವಮಾನ ಸಚಿವಾಲಯವು ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಿತ್ತು. ಇದರ ವಿರುದ್ಧ ಮತ್ತೆ ಎತ್ತಲು ಅಯೋಜಿಸಿದ್ದ ಕಾರ್ಯಗಾರ ಕೆಲವೇ ಕೆಲವು ಮಂದಿಗೆ ಸಿಮಿತವಾಗುವಂತಾಯಿತು.
ಈ ನಡುವೆ ಕಾರ್ಯಗಾರವನ್ನು ಉದ್ಘಾಟಿಸಿದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಪರಿಸರ ಹಾಗೂ ಜನಸಮಾನ್ಯರಿಗೆ ತೊಂದರೆಯಾಗುವ ಹೆಚ್ಚುವರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಪರಿಸರವಾದಿ ಅನಂತ್ ಹೆಗಡೆ ಅಶಿಸರ ಮಾತನಾಡಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಗೆ ನಾಲ್ಕು ದಶಕಗಳಿಂದ ವಿರೋಧಿಸಲಾಗುತ್ತಿದೆ. ಆದರೂ ನಾಲ್ಕು ಘಟಕಗಳನ್ನು ಸ್ಥಾಪಿಸಿ ಇದೀಗ ಹೆಚ್ಚುವರಿ ಎರಡು ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಈಗಾಗಲೇ ಸ್ಥಾವರ ಕುಸಿತ, ವಿಜ್ಞಾನಿಗಳ ಕಣ್ಮರೆ, ಕ್ಯಾನ್ಸರ್ ನಂತಹ ಕಾಯಿಲೆಗಳು ಹರಡುತ್ತಿದ್ದು ಈ ಬಗ್ಗೆ ಅಧ್ಯಯನ, ಸಮೀಕ್ಷೆಗಳನ್ನು ನಡೆಸಲಾಗಿದೆ. ಅದರೆ ಇಂತಹ ವರದಿಗಳನ್ನು ಅಣು ವಿದ್ಯುತ್ ಸ್ಥಾವರದವರು ಬಹಿರಂಗಪಡಿಸುತ್ತಿಲ್ಲ. ಆದರೆ ಪರಿಸರ, ಪ್ರಾಣಿ, ಪಕ್ಷಿ, ನೀರು ಸೇರಿದಂತೆ ಮನುಕುಲಕ್ಕೆ ಹಾನಿಕಾರಕವಾಗಿರುವ ಅಣು ವಿದ್ಯುತ್ ಘಟಕ ಸ್ಥಾಪನೆಗೆ ಮುಂದಾಗಿರುವುದು ಈ ಭಾಗದ ಸುತ್ತಮುತ್ತಲಿನ ಜನರಲ್ಲಿ ಆಘಾತ ತಂದಿದೆ. ಈಗಾಗಲೇ ಸ್ಥಾಪನೆಯಾಗಿರುವ ಘಟಕಗಳಿಂದ ಸ್ಥಳೀಯವಾಗಿ ಏನು ಅಭಿವೃದ್ಧಿಯಾಗಿಲ್ಲ. ಇಷ್ಟಾದರೂ ಈ ಹಾನಿಕಾರಕ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವುದು ಖೇಧಕರ. ಈ ಬಗ್ಗೆ ಇದೀಗ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಮತ್ತೊಮ್ಮೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಾಮರ್ಥ್ಯ ಸವನ್ನಇನ್ನು ಕೈಗಾ ವ್ಯಾಪ್ತಿಯ ಕಾರವಾರ, ಅಂಕೋಲಾ, ಯಲ್ಲಾಪುರ ಹಾಗೂ ಜೋಯಿಡಾ ತಾಲ್ಲೂಕುಗಳಿಗೆ ಅಣುವಿದ್ಯುತ್ ಘಟಕದಿಂದ ಸಾಕಷ್ಟು ಹಾನಿ ಉಂಟಾಗುತ್ತಿದೆ. ಕೈಗಾ ಸುತ್ತಲಿನ ಅರಣ್ಯ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು ಸಾಕಷ್ಟು ಬಗೆಯ ಬುಡಕಟ್ಟು ಹಾಗೂ ವನವಾಸಿ ಜನಾಂಗಗಳು ವಾಸವಾಗಿವೆ. ಹೀಗಾಗಿ ಕೈಗಾ ವಿಸ್ತರಣೆಯಿಂದಾಗಿ ಜನ ಜೀವನದ ಜೊತೆಗೆ ಸುತ್ತಲಿನ ಪರಿಸರಕ್ಕೂ ವ್ಯತಿರಿಕ್ತ ಪ್ರಭಾವ ಬೀರಲಿದ್ದು ನೂತನ ಘಟಕ ಯಾವುದೇ ಕಾರಣಕ್ಕೂ ಸ್ಥಾಪಿಸದಂತೆ ವನವಾಸಿ ಕಲ್ಯಾಣ ಸಮಿತಿ ಸದಸ್ಯ ಶಾಂತಾರಾಮ ಸಿದ್ಧಿ ಆಗ್ರಹಿಸಿದರು.
ಸದ್ಯ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಒಟ್ಟೂ 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನೂತನ 5 ಮತ್ತು 6ನೇ ಘಟಕಗಳು ತಲಾ 700 ಮೆಗಾವ್ಯಾಟ್ ಸಾಮರ್ಥ್ಯವನ್ನ ಹೊಂದಿದ್ದು 1400 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ನನ್ನ ಹೊಂದಿರಲಿವೆ. ಈಗಾಗಲೇ ಕೈಗಾ ಸುತ್ತಲಿನ ಪ್ರದೇಶದಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿರುವುದರಿಂದ ಯಾವುದೇ ಕಾರಣಕ್ಕೂ ನೂತನ ಘಟಕಗಳು ಬೇಡ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ಬೈಟ್ ೧ ಅನಂತ್ ಹೆಗಡೆ ಅಶಿಸರ, ಪರಿಸರವಾದಿ (ಎರಡು ಲೋಗೊ ಇರುವುದು)

ಬೈ೨ ಶಾಂತಾರಾಮ ಸಿದ್ಧಿ, ವನವಾಸಿ ಕಲ್ಯಾಣ ಸಮಿತಿ ಸದಸ್ಯ (ಕಪ್ಪಗಿದ್ದವರು)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.