ETV Bharat / state

Job fair: ಕಾರವಾರದಲ್ಲಿ ಉದ್ಯೋಗ ಮೇಳ: ನಿರೀಕ್ಷೆಗೂ ಮೀರಿ ಪಾಲ್ಗೊಂಡ ಉದ್ಯೋಗಾಕಾಂಕ್ಷಿಗಳು

author img

By

Published : Aug 6, 2023, 9:33 PM IST

Job fair: ಇಲ್ಲಿನ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. 36ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

job-fair-at-divekar-college-of-commerce-and-p-g-centre
ಕಾರವಾರದಲ್ಲಿ ಉದ್ಯೋಗ ಮೇಳ: ನಿರೀಕ್ಷೆಗೂ ಮೀರಿ ಹರಿದುಬಂದ ಉದ್ಯೋಗಾಕಾಂಕ್ಷಿಗಳು!
ಕಾರವಾರದಲ್ಲಿ ಉದ್ಯೋಗ ಮೇಳ

ಕಾರವಾರ : ನಗರದ ದಿವೇಕರ ಮಹಾವಿದ್ಯಾಲಯದಲ್ಲಿ ಭಾನುವಾರ ಉದ್ಯೋಗ ಮೇಳ ನಡೆಯಿತು. ಮೇಳಕ್ಕೆ ಸಾವಿರಾರು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಸುಮಾರು 36ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

ಕೆನರಾ ವೆಲ್‌ಫೇರ್ ಟ್ರಸ್ಟ್ ಹಾಗೂ ಮೆರಿಟ್ಯುಡ್ ಸಂಸ್ಥೆಯ ಸಹಯೋಗದಲ್ಲಿ ಉದ್ಯೋಗ ಮೇಳ ಹಮ್ಮಿಕ್ಕೊಳ್ಳಲಾಗಿತ್ತು. ಮೇಳಕ್ಕೆ ಆಯೋಜರ ನಿರೀಕ್ಷೆ ಮೀರಿ ಜಿಲ್ಲೆ ಹಾಗು ಹೊರ ಜಿಲ್ಲೆಗಳಿಂದ ಸುಮಾರು 2,600ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಈ ಪೈಕಿ 2,300 ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ನೋಂದಣಿ ಮಾಡಿದರೆ, ಉಳಿದ ಅಭ್ಯರ್ಥಿಗಳು ನೇರವಾಗಿ ಉದ್ಯೋಗ ಮೇಳದಲ್ಲಿಯೇ ನೋಂದಣಿ ಮಾಡಿಸಿದ್ದರು. ಐಸಿಐಸಿಐ ಬ್ಯಾಂಕ್, ಮುತ್ತೂಟ್ ಫೈನಾನ್ಸ್, ಮಹೀಂದ್ರಾ ಸೇರಿದಂತೆ 36ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸತೀಶ್ ಸೈಲ್, ಉದ್ಯೋಗ ಮೇಳಗಳು ವಿದ್ಯಾವಂತರ ಬಾಳಿಗೆ ಆಶಾಕಿರಣಗಳಿದ್ಧಂತೆ. ಇದರಿಂದ ಹಲವಾರು ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾರವಾರದಲ್ಲಿ ಇಂತಹ ಉದ್ಯೋಗ ಮೇಳದ ಅವಶ್ಯಕತೆ ಇತ್ತು. ಈ ಉದ್ಯೋಗ ಮೇಳದ ಮೂಲಕ ಕಾರವಾರ ಸೇರಿದಂತೆ ಜಿಲ್ಲೆಯ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಲಭಿಸಲಿದೆ. ಜತೆಗೆ ಅವರ ಜೀವನ ಕಂಡುಕೊಳ್ಳುತ್ತಾರೆ ಎಂದರು.

ಹಿರಿಯ ವಕೀಲ ದೇವದತ್ತ ಎಸ್. ಕಾಮತ್ ಮಾತನಾಡಿ, ಅಭ್ಯರ್ಥಿಗಳಲ್ಲಿ ಪದವಿಯ ಜೊತೆಗೆ ಉದ್ಯೋಗ ಪಡೆದುಕೊಳ್ಳುವ ಕೌಶಲ್ಯ ಹಾಗೂ ಚಾಣಾಕ್ಷತೆ ಇರಬೇಕು. ಮೇಳಕ್ಕೆ 500ರಿಂದ ಸಾವಿರ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಬೇರೆ ಬೇರೆ ಜಿಲ್ಲೆಗಳಿಂದ 2,600 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಕೆನರಾ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಕಾಮತ್ ಮಾತನಾಡಿ, ಉದ್ಯೋಗ ಮೇಳಕ್ಕೆ ಅನೇಕ ಕಂಪನಿಗಳು ಬಂದಿವೆ. ಉತ್ತಮ ಸಂದರ್ಶನ ನೀಡಿ ಪ್ರಯೋಜನ ಪಡೆಯಬೇಕು. ಜಿಲ್ಲೆಯ ನಿರುದ್ಯೋಗಿ ವಿದ್ಯಾರ್ಥಿಗಳು ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ದಿವೇಕರ ಕಾಲೇಜಿನ ಪ್ರಾಂಶುಪಾಲ ಡಾ. ಕೇಶವ ಕೆ.ಜಿ, ಮೆರಿಟ್ಯೂಡ್ ಸಂಸ್ಥೆಯ ಫಯಾಜ್ ಅಹಮದ್, ನಾಗರಾಜ ಮಡಿವಾಳ ಡಾ.ವಿ.ಎನ್ ನಾಯಕ, ಮುರುಳಿಧರ ಪ್ರಭು, ಡಾ.ಕೃಷ್ಣ ಪ್ರಭು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಲಿತಾ ಶೆಟ್ಟಿ, ಉಪನ್ಯಾಸಕಿ ಸ್ನೇಹಲ ರೇವಣಕರ, ಅನೀತಾ ತಿಳವೆ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : Wear Helmet: ಹೆಲ್ಮೆಟ್ ಧರಿಸದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚು: ಜಂಟಿ ಪೊಲೀಸ್ ಆಯುಕ್ತ ಅನುಚೇತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.