ಶಿರಸಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರು ಶಿರಸಿ ಮಾರ್ಗ ಮಧ್ಯೆ ನಡೆದಿದೆ.
ಡಿಸೆಂಬರ್ 21ರ ಶನಿವಾರ ರಾತ್ರಿ ಸುಮಾ ಶಿವರಾಜ ಭಟ್ ಎಂಬ ಮಹಿಳೆ ಬೆಂಗಳೂರಿನಿಂದ ಶಿರಸಿಗೆ ಶ್ರೀ ಕುಮಾರ ಹೆಸರಿನ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಮೈಮೇಲೆ ಇದ್ದ ಬಂಗಾರವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ತನ್ನಲ್ಲಿರುವ ಲ್ಯಾಪ್ಟಾಪ್ ಬ್ಯಾಗ್ನಲ್ಲಿ ಇಟ್ಟಿದ್ದರು. ಶಿರಸಿಗೆ ಬಂದು ಮನೆಗೆ ಹೋದ ಮೇಲೆ ಬ್ಯಾಗ್ ಪರಿಶೀಲಿಸಿ ನೋಡಿದರೆ ಬಂಗಾರ ಮಾಯವಾಗಿತ್ತು.
ಬ್ಯಾಗ್ನಲ್ಲಿ 190 ಗ್ರಾಂ ಬಂಗಾರದ ಆಭರಣ ಇತ್ತು ಎನ್ನಲಾಗಿದ್ದು, ಒಟ್ಟು ಮೌಲ್ಯ 5.70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.