ETV Bharat / state

ಕಾಂಗ್ರೆಸ್​ನವರು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ: ಸಚಿವ ಆರ್.ಅಶೋಕ್

ಕಾಂಗ್ರೆಸ್ 50 ವರ್ಷದ ಆಡಳಿತದಲ್ಲಿ ಗರೀಬಿ ಹಟಾವೋ ಘೋಷಣೆಯೊಂದನ್ನು ಮಾಡಿರುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಬದಲಾಗಿ ಬಡವರನ್ನು ತುಳಿದಿದ್ದಾರೆ. ಇದೀಗ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಆರ್​.ಅಶೋಕ್​ ಆರೋಪಿಸಿದ್ದಾರೆ.

author img

By

Published : Apr 15, 2022, 5:51 PM IST

Minister R.Ashok talked to Press
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್​.ಅಶೋಕ್​

ಕಾರವಾರ: ಈ ವರ್ಷ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ನವರು ಬೇಕಂತಲೇ ನಿತ್ಯ ಒಂದೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದ್ದಾರೆ. ಅಂಕೋಲಾದ ಅಚವೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 50 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಅವರಿದ್ದಾಗ ಏನು ನಡೆಯಿತು ಎಂಬುದನ್ನು ಹೇಳುತ್ತಿಲ್ಲ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವ ಪಕ್ಷಕ್ಕೂ ಇಷ್ಟು ವರ್ಷ ಆಡಳಿತ ನಡೆಸುವ ಅವಕಾಶ ದೊರೆತಿಲ್ಲ. ಮಾತ್ರವಲ್ಲದೆ ಅಮೆರಿಕಾ, ಲಂಡನ್​ಗಳಲ್ಲಿಯೂ ಇಂತಹ ಅವಕಾಶ ಸಿಕ್ಕಿಲ್ಲ. ಹೀಗಿರುವಾಗ ಕಾಂಗ್ರೆಸ್ 50 ವರ್ಷದ ಆಡಳಿತದಲ್ಲಿ ಗರಿಬಿ ಹಟಾವೋ ಘೋಷಣೆಯೊಂದನ್ನು ಮಾಡಿರುವುದನ್ನು ಬಿಟ್ಟು ಬೇರೆನು ಮಾಡಿಲ್ಲ. ಬದಲಾಗಿ ಬಡವರನ್ನು ತುಳಿದಿದ್ದಾರೆ. ಇದೀಗ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಇದು ಇನ್ನು ಹೆಚ್ಚಾಗಲಿದೆ.‌ ಕಾಂಗ್ರೆಸ್​ನವರ ನಡೆ ಆಪಾದನೆಗಳ ಕಡೆ ಆಗಲಿದೆ ಎಂದರು.

ಇನ್ನು ಕಾಂಗ್ರೆಸ್​ನವರಿಗೆ ನೀವು ಏನು ಮಾಡಿದ್ರಿ ಕೇಳಿದ್ರೆ ತಾವು ತಪ್ಪು ಮಾಡಿದ್ದೇವೆ, ನೀವು ಒಳ್ಳೆದು ಮಾಡ್ರಿ ಎಂದು ನಮಗೆ ಬುದ್ದಿವಾದ ಹೇಳುತ್ತಾರೆ. ಅವರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ.‌ ಆದರೆ ನಾವು ಇದೆಲ್ಲವನ್ನು ಮೀರಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಬುರ್ಡೆಜರ್ ಸರ್ಕಾರ, ಜೆಸಿಬಿ ಸರ್ಕಾರ ಎಂದು ಟೀಕಿಸಿದರು. ಗೋವಾದಲ್ಲಿ ಬಿಜೆಪಿ ಬರುವುದಿಲ್ಲ ಅಂದ್ರು. ಕಾಂಗ್ರೆಸ್​ನವರು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದರು.‌ ಸರ್ಕಾರ ಮಾಡಲು 40 ಮಂದಿಯನ್ನು ರೆಸಾರ್ಟ್​ನಲ್ಲಿ ಕೂಡಿ ಹಾಕಿದ್ದರು. ಆದರೆ ಕಾಂಗ್ರೆಸ್ ಡಮಾರ್ ಅಂದಾಗ ವಿಶೇಷ ವಿಮಾನ ಅಲ್ಲ.‌ ರೈಲಿನ ಮೂಲಕ ಆಗಮಿಸಿದ್ದಾರೆ ಎಂದರು.

ಕಾಂಗ್ರೆಸ್​ನ ಅಧ್ಯಕ್ಷರು ಗೌರವ ಇಟ್ಟುಕೊಂಡು ಪ್ರತಿಭಟನೆ ಮಾಡಬೇಕು. ಹುಡುಗಾಟ ಮಾಡುವುದು ಒಳ್ಳೆಯದಲ್ಲ. ಮುಂದೆ ಇನ್ನು ಕೂಡ ಒಂದು ವರ್ಷ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಆಹೋರಾತ್ರಿ ಧರಣಿ ಮುಗಿಸುತ್ತಿದ್ದೇವೆ, ಸರ್ಕಾರದ ವಿರುದ್ಧದ ಹೋರಾಟ ನಿಲ್ಲಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.