ಶಿರಸಿ : ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ಗೆ ನಗರದಲ್ಲಿ ಅನುಮೋದನೆ ದೊರೆತು ವರ್ಷಗಳೇ ಮುಗಿದರೂ ಕಾಮಗಾರಿ ಮಾತ್ರ ಫೌಂಡೇಶನ್ ಹಂತದಲ್ಲಿಯೇ ಇದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
10 ರೂ.ಗೆ ಹಸಿವು ನೀಗಿಸುವ ಮೂಲಕ ಬಡವರ ಮನೆಮಾತಾಗಿದ್ದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಇಲ್ಲಿನ ಹೆಡ್ ಪೋಸ್ಟ್ ಆಫೀಸ್ ಹಿಂಬದಿ ಅನುಮೋದನೆ ದೊರೆತಿದ್ರೂ ಕೇವಲ ಅಡಿಪಾಯ ಮಾತ್ರ ನಿರ್ಮಾಣವಾಗಿದೆ. ಜಿಲ್ಲೆಯ ಕಾರವಾರ, ಅಂಕೋಲಾ ಸೇರಿ ವಿವಿಧ ಕಡೆಗಳಲ್ಲಿ ಉದ್ಘಾಟನೆಗೊಂಡಿದ್ರೂ, ಇಲ್ಲಿ ಮಾತ್ರ ಅರ್ಧಕ್ಕೆ ಕಾಮಗಾರಿ ನಿಂತಿದೆ. ಇದರಿಂದ ಶಿರಸಿಯಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರ ನಿರ್ಮಾಣವಾಗಲಿದೆ ಎಂಬ ಜನಪ್ರತಿನಿಧಿಗಳ ಭರವಸೆ ಹುಸಿಯಾಗಿದೆ.
ಆಟೋಡ್ರೈವರ್, ಹಮಾಲರು, ಗ್ರಾಮೀಣ ಭಾಗದ ಬಡವರ ಆಶಾ ಕಿರಣವಾಗಿದ್ದ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲಿ ಆರಂಭವಾಗಬೇಕು ಅನ್ನೋದು ಜನರ ಬೇಡಿಕೆಯಾಗಿದೆ.