ETV Bharat / state

ಕಾರವಾರದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ.. ಸಮುದ್ರದ ಅಲೆಗೆ ಕೊಚ್ಚಿಹೋದ ತಡೆಗೋಡೆ!

ಕಾರವಾರ ತಾಲೂಕಿನ ಅಂಬಿಗವಾಡದ ಬಳಿ ಸಮುದ್ರದಿಂದ ನುಗ್ಗಿ ಬರುತ್ತಿರುವ ಅಲೆಗಳಿಂದಾಗಿ ಕಡಲತೀರದ ಅಂಚಿನಲ್ಲಿ ಹಾಕಿದ್ದ ಅಲೆ ತಡೆಗೋಡೆಗಳು ಕೊಚ್ಚಿಕೊಂಡು ಹೋಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು.

ಕಾರಾವಾರದಲ್ಲಿ ಹೆಚ್ಚುತ್ತಿರುವ ಅಲೆಯ ವೇಗ....ಸಮುದ್ರದಲ್ಲಿ ಕೊಚ್ಚಿಹೋದ ಅಲೆ ತಡೆಗೋಡೆ
author img

By

Published : Aug 3, 2019, 10:36 PM IST

ಕಾರವಾರ: ಕಾರವಾರ ತಾಲೂಕಿನ ಅಂಬಿಗವಾಡದ ಬಳಿ ಸಮುದ್ರದಿಂದ ನುಗ್ಗಿ ಬರುತ್ತಿರುವ ಅಲೆಗಳಿಂದಾಗಿ ಕಡಲತೀರದ ಅಂಚಿನಲ್ಲಿ ಹಾಕಿದ್ದ ಅಲೆ ತಡೆಗೋಡೆಗಳು ಕೊಚ್ಚಿಕೊಂಡು ಹೋಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಬಳಿಕ ಪ್ರತಿಭಟನಾ ಸ್ಥಳಕ್ಕ ಭೇಟಿ ನೀಡಿದ ಬಂದರು ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್​ ಗ್ರಾಮಸ್ಥರ ಸಮಸ್ಯೆ ಆಲಿಸಿ, ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.

ಕಾರವಾರದಲ್ಲಿ ಹೆಚ್ಚುತ್ತಿರುವ ಅಲೆಯ ವೇಗ..

ಸಮುದ್ರ ಕೊರೆತ ಮಳೆಗಾಲ ಆರಂಭದಿಂದಲೂ ಆಗುತ್ತಿದ್ದರೂ ಯಾರೂ ಕೂಡ ಗಮನ ಹರಿಸುತ್ತಿಲ್ಲ. ಅಂಬಿಗವಾಡದಲ್ಲಿ ಇದೇ ಮೊದಲ ಭಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಲ ಕೊರೆತವಾಗುತ್ತಿದೆ. ಕೂಡಲೇ ಮುಂದಾಗುವ ಅಪಾಯವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಕೊನೆಗೆ ಕಾರವಾರ ತಹಶೀಲ್ದಾರ್ ಆರ್‌ವಿ ಕಟ್ಟಿ, ಐಆರ್​ಬಿ ಅಧಿಕಾರಿಗಳು ಹಾಗೂ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.

ಬಳಿಕ ಐಆರ್​ಬಿ ಕಂಪನಿಯಿಂದ 25 ಲೋಡ್ ಕಲ್ಲು ತರಿಸಿ ಕಡಲತೀರದುದ್ದಕ್ಕೂ ಹಾಕಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಶಾಶ್ವತವಾಗಿ ಕಡಲ ಕೊರೆತ ತಪ್ಪಿಸಲು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, 65 ಲಕ್ಷ ವೆಚ್ಚದ ಯೋಜನಾ ವರದಿಯನ್ನೂ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.

Intro:

Body:ಕಾರವಾರದಲ್ಲಿ ನುಗ್ಗಿ ಬರುತ್ತಿರುವ ರಕ್ಕಸ ಅಲೆಗೆ ಬೆಚ್ಚಿಬಿದ್ದ ಜನ...ಅಲೆ ತಡೆಗೋಡೆ ಸಮುದ್ರಪಾಲು
ಕಾರವಾರ: ಒಂದೆಡೆ ಸಮುದ್ರದಿಂದ ನುಗ್ಗಿ ಬರುತ್ತಿರುವ ರಕ್ಕಸ ಅಲೆಗಳು. ಇನ್ನೊಂದೆಡೆ ಅಲೆಗಳಿಗೆ ಕೊಚ್ಚಿ ಹೋಗುತ್ತಿರುವ ಕಡಲತೀರದ ತಡೆಗೋಡೆ. ಮತ್ತೊಂದೆಡೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು. ಅರ್ರೆ ಯಾಕಪ್ಪ ಇಂತಹ ಪ್ರತಿಭಟನೆ. ಎಲ್ಲಿ ನಡೆಯುತ್ತಿರುವುದು ಅಂತೀರಾ..? ಈ ಸ್ಟೋರಿ ನೋಡಿ
ಹೌದು, ಕಾರವಾರ ತಾಲ್ಲೂಕಿನ ಅಂಬಿಗವಾಡದ ಬಳಿ ಸಮುದ್ರದಿಂದ ನುಗ್ಗಿ ಬರುತ್ತಿರುವ ರಕ್ಕಸ ಅಲೆಗಳು ಇದೀಗ ಆ ಗ್ರಾಮದ ಜನರ ನಿದ್ದೆ ಕೆಡಿಸಿದೆ. ಆಳೆತ್ತರದ ರಕ್ಕಸ ಅಲೆಗಳು ಒಂದರ ಹಿಂದೆ ಒಂದರಂತೆ ಬಂದು ಕಡಲತೀರದಂಚಿನಲ್ಲಿ ಹಾಕಿದ್ದ ಅಲೆ ತಡೆಗೊಡೆಗಳನ್ನೆ ಕೊಚ್ಚಿಕೊಂಡು ಹೋಗುತ್ತಿದ್ದು, ಎಲ್ಲಿ ಅಲೆಗಳು ಮನೆಗಳಿಗೆ ನುಗ್ಗುತ್ತವೆಯೋ ಎನ್ನುವ ಆತಂಕ ಇದೀಗ ಗ್ರಾಮಸ್ಥರನ್ನು ಕಾಡತೊಡಗಿದೆ.
ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಭಾಗದಿಂದ ಅಂಬಿಗವಾಡ ಮತ್ತು ಮಾಜಾಳಿ ವರೆಗೆ ಅಲೆಗಳಿಂದ ಕಡಲತೀರ ಸಮುದ್ರಪಾಲಾಗುತ್ತಿದೆ. ಕಳೆದ ಎಂಟು ದಿನಗಳಿಂದ ಇದೆ ಸ್ಥಿತಿ ಮುಂದುವರೆದಿದ್ದು, ಅಂಬಿಗವಾಡದಲ್ಲಿ ಅಲೆಗಳು ಅಪಾಯದ ಮಟ್ಟ ತಲುಪಿ ಆರ್ಭಟಿಸುತ್ತಿವೆ. ಇದರಿಂದ ಕಡಲತೀರದುದ್ದಕ್ಕೂ ಹಾಕಲಾಗಿದ್ದ ಕಲ್ಲಿನ ತಡೆಗೋಡೆ ಸಂಪೂರ್ಣ ಸಮುದ್ರ ಪಾಲಾಗಿದೆ. ಅಲ್ಲದೆ ಕಾರವಾರದಿಂದ ಮಾಜಾಳಿಗೆ ಸಂಪರ್ಕಿಸುತ್ತಿದ್ದ ರಸ್ತೆ ಬಂದಾಗಿದ್ದು, ನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಊರಿನವರು ಪರದಾಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ
ಇನ್ನು ಕಡಲಕೊರೆತದಿಂದಾಗಿ ಈ ಭಾಗದ ಜನರು ಭಯಬೀತರಾಗಿದ್ದಾರೆ. ಅಲೆಗಳು ರಸ್ತೆಗಳಿಗೆ ಅಪ್ಪಳಿಸುತ್ತಿದ್ದು ಎಲ್ಲಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಲಿವೆಯೋ ಎನ್ನುವ ಆತಂಕ ಕಾಡತೊಡಗಿದೆ. ಅಲ್ಲದೆ ಈ ಬಗ್ಗೆ ಕಳೆದ ಎಂಟು ದಿನದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರು ಕೂಡ ಯಾವುದೇ ಕ್ರಮವಾಗುತ್ತಿಲ್ಲ. ಅಲ್ಲದೆ ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದ್ದು, ಈ ಕಾರಣಕ್ಕೆ ಇಂದು ದೀಡೀರ್ ಪ್ರತಿಭಟನೆ ನಡೆಸಿದ್ದೇವೆ‌. ಕಡಲತೀರದುದ್ದಕ್ಕೂ ಕೂಡಲೇ ಕಲ್ಲುಗಳನ್ನು ಹಾಕಿ ನೀರು ನುಗ್ಗದಂತೆ ತಡೆಗೋಡೆ ಹಾಕಬೇಕು.‌ಒಂದೊಮ್ಮೆ ನಮ್ಮ ಬೇಡಿಕೆಗೆ ಸ್ಪಂಧಿಸದೆ ಇದ್ದಲ್ಲಿ ಇನ್ನಷ್ಟು ಉಗ್ರ ರಿತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಗ್ರಾಮದ ಮಹಿಳೆ ಎಚ್ಚರಿಸಿದ್ದಾರೆ.
ಇನ್ನು ಕಡಲಕೊರೆತದ ಗಂಭೀರತೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬಂದರು ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು. ಈ ವೇಳೆಅಧಿಕಾರಿಗಳನ್ನು ಮುತ್ತಿಗೆ ಹಾಕಿದ ಸ್ಥಳೀಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಮುದ್ರ ಕೊರೆತ ಮಳೆಗಾಲ ಆರಂಭದಿಂದಲೂ ಆಗುತ್ತಿದ್ದರು ಯಾರು ಕೂಡ ಗಮನ ಹರಿಸುತ್ತಿಲ್ಲ. ಅಂಬಿಗವಾಡದಲ್ಲಿ ಇದೇ ಮೊದಲ ಭಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಲ ಕೊರೆತವಾಗುತ್ತಿದೆ. ಕೂಡಲೇ ಮುಂದಾಗುವ ಅಪಾಯವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಕೊನೆಗೆ ಕಾರವಾರ ತಹಶೀಲ್ದಾರ್ ಆರ್.ವಿ. ಕಟ್ಟಿ ಐಆರ್ಬಿ ಅಧಿಕಾರಿಗಳು ಹಾಗೂ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣಕ್ಕೆ ಐಆರ್ ಬಿ ಕಂಪೆನಿಯಿಂದ ೨೫ ಲೋಡ್ ಕಲ್ಲು ತರಿಸಿ ಕಡಲತೀರದುದ್ದಕ್ಕೂ ಹಾಕಲು ಕ್ರಮ ಕೈಗೊಳ್ಳುವುದು. ಅಲ್ಲದೆ ಶಾಸ್ವತವಾಗಿ ಕಡಲಕೊರೆತ ತಪ್ಪಿಸಲು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು ೬೫ ಲಕ್ಷ ವೆಚ್ಚದ ಯೋಜನಾ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಇದೆ ವೇಳೆ ಭರವಸೆ ನೀಡಿದರು.
ಒಟ್ಟಿನಲ್ಲಿ ಕಡಲತೀರದಲ್ಲಿ ಅಲೆಗಳ ಆರ್ಭಟಕ್ಕೆ ಜನರು ಕಂಗಾಲಾಗಿದ್ದು, ಎಲ್ಲಿ ಅಲೆಗಳು ಮನೆಗಳಿಗೆ ನುಗ್ಗುವುದೋ ಎನ್ನುವ ಆತಂಕ ಜನರನ್ನು ಕಾಡತೊಡಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಾದ ಅಗತ್ಯತೆ ಇದೆ.

ಬೈಟ್ ೧ ದೇವರಾಜ ಯಶವಂತ ಸೈಲ್, ಸ್ಥಳೀಯ ಮೀನುಗಾರ

ಬೈಟ್ ೨ ಸಾಕ್ಷಿ ಕೊಬ್ರೇಕರ್, ಸ್ಥಳೀಯ ಮಹಿಳೆ

ಬೈಟ್ ೩ ಆರ್.ವಿ ಕಟ್ಟಿ ತಹಶೀಲ್ದಾರ ಕಾರವಾರ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.