ಕಾರವಾರ: ಮೀನು ಸಾಗಣೆ ಕಂಟೇನರ್ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಹಿನ್ನೆಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ವಶಕ್ಕೆ ಪಡೆಸಿದ್ದಾರೆ.
ತಾಲೂಕಿನ ಮಾಜಾಳಿ ಗಡಿಯಲ್ಲಿ ತಡರಾತ್ರಿ ಈ ಘಟನೆ ಜರುಗಿದೆ. ಆಂಧ್ರಪ್ರದೇಶ ನೋಂದಣಿ ಹೊಂದಿರುವ ಮೀನು ಸಾಗಣೆಯ ಕಂಟೈನರ್ನಲ್ಲಿ 45 ಲೀ. ಗೋವಾ ಮದ್ಯ ಹಾಗೂ 36 ಲೀ. ಬಿಯರ್ ಅನ್ನು ಸಾಗಿಸಲಾಗುತ್ತಿತ್ತು. ಗೋವಾ ಚೆಕ್ ಪೋಸ್ಟ್ ನಲ್ಲಿ ದಾಟಿ ಬಂದಿದ್ದ ವಾಹನವನ್ನು ಮಾಜಾಳಿಯ ಗಡಿಯಲ್ಲಿ ಮತ್ತೆ ತಪಾಸಣೆ ನಡೆಸಿದಾಗ ಅಕ್ರಮವಾಗಿ ಗೋವಾ ಮದ್ಯ ತರುತ್ತಿದ್ದದ್ದು ಕಂಡು ಬಂದಿದೆ.
ತಕ್ಷಣ ಕಂಟೇನರ್ ಸಹಿತ ಮದ್ಯ ವಶಕ್ಕೆ ಪಡೆದ ಅಬಕಾರಿ ಹಾಗೂ ಪೊಲೀಸ್ ಸಿಬ್ಬಂದಿ, ಆರೋಪಿ ವಿ.ಪರಶುರಾಮಣ್ಣ ಎನ್ನುವವರನ್ನ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್.ಎನ್.ನಾಯ್ಕ, ಅಬಕಾರಿ ಸಬ್ ಇನ್ಸ್ಫೆಕ್ಟರ್ ಸುವರ್ಣ ಹಾಗೂ ಸಿಬ್ಬಂದಿ ಇದ್ದರು.