ಶಿರಸಿ: ಟಾಟಾ ಏಸ್ ವಾಹನದಲ್ಲಿ ಅನಧಿಕೃತವಾಗಿ ಸಾಗುವಾನಿ, ಸೀಸಮ್ ಕಟ್ಟಿಗೆ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಬಂಧಿಸಿದ್ದಾರೆ.
ಅಂಕೋಲಾ ತಾಲೂಕಿನ ಹಿಲ್ಲೂರಿನ ಮಹಾಬಲೇಶ್ವರ ಬೀರಪ್ಪ ಹರಿಕಂತ್ರ, ಪ್ರಭಾಕರ ವೆಂಕಟ್ರಮಣ ಆಗೇರ, ವಿಷ್ಣು ನಾಗಪ್ಪ ಹರಿಕಂತ್ರ, ಅಜ್ಜಿಕಟ್ಟಾದ ಇರ್ಫಾನ್ ಮಹಮದ್ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಕಟ್ಟಿಗೆ ಸಾಗಿಸುತ್ತಿರುವಾಗ ಈ ದಾಳಿ ನಡೆದಿದೆ.
ಸದ್ಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.