ETV Bharat / state

ಶಿರಸಿಯಲ್ಲಿ ಜಾನುವಾರುಗಳ ಅಕ್ರಮ ಸಾಗಣೆ: ಇಬ್ಬರ ಬಂಧನ

ಗೂಡ್ಸ್​​​​ ವಾಹನದಲ್ಲಿ ನಾಲ್ಕು ಜಾನುವಾರುಗಳನ್ನು ಶಿರಸಿಯಿಂದ ಹಾನಗಲ್​​​​ಗೆ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

author img

By

Published : Jun 26, 2020, 7:51 AM IST

Updated : Jun 26, 2020, 7:58 AM IST

ಅಕ್ರಮ ಜಾನುವಾರು ಸಾಗಾಟ
ಅಕ್ರಮ ಜಾನುವಾರು ಸಾಗಾಟ

ಶಿರಸಿ : ಯಾವುದೇ ಅನುಮತಿ ಪಡೆಯದೇ ನಾಲ್ಕು ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಜಾನುವಾರುಗಳನ್ನು ರಕ್ಷಿಸಿದ ಘಟನೆ ಶಿರಸಿ ತಾಲೂಕಿನ ಲಂಡಕನಹಳ್ಳಿ ರಸ್ತೆಯ ಕಾಮತ್ ಫಾರ್ಮ್​​​ ಬಳಿ ನಡೆದಿದೆ.

ಶಿರಸಿ ತಾಲೂಕು ಹೊಸೂರಿನ ಗಿಡ್ಡಪ್ಪ ವಡ್ಡರ್ (65) ಹಾಗೂ ಹಾನಗಲ್ ತಾಲೂಕಿನ ಚಿಕ್ಕಾಂಸಿಯ ಇರ್ಫಾನ್ ಬಾಷಾಸಾಬ್ (29) ಬಂಧಿತ ಆರೋಪಿಗಳಾಗಿದ್ದಾರೆ. ಇವರು ತಮ್ಮ ಗೂಡ್ಸ್​​​ ವಾಹನದಲ್ಲಿ ( ಕೆಎ 15, ಎ 3975) ನಾಲ್ಕು ಜಾನುವಾರುಗಳನ್ನು ಶಿರಸಿಯಿಂದ ಹಾನಗಲ್​​​ಗೆ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತರಿಂದ 1.75 ಲಕ್ಷ ರೂ. ಮೌಲ್ಯದ ಗೂಡ್ಸ್​​​​​ ವಾಹನ ವಶಪಡಿಸಿಕೊಂಡಿದ್ದು, ನಾಲ್ಕು ಜಾನುವಾರುಗಳನ್ನು ರಕ್ಷಿಸಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 26, 2020, 7:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.