ETV Bharat / sports

ಕ್ರಿಕೆಟ್​ನಲ್ಲಿ ಅಂಪೈರ್ ಆಗುವುದು ತುಂಬಾ ಸುಲಭ: ಈ ಕ್ವಾಲಿಟಿ ಇದ್ದರೆ ನೀವೂ ಟ್ರೈಮಾಡಿ! - How to Become an umpire

ಹೆಚ್ಚಿನವರು ಕ್ರಿಕೆಟಿಗರಾಗಲು ಬಯಸುತ್ತಾರೆ. ಆದರೆ, ಅವಕಾಶ ಸಿಗುವುದಿಲ್ಲ. ಅಂಥವರು ಅಂಪೈರಿಂಗ್ ಆಗಿ ಕೂಡ ಕ್ರಿಕೆಟ್​ನಲ್ಲಿ ನೆಲೆ ಕಂಡುಕೊಳ್ಳಬಹುದು​. ಹಾಗಾದ್ರೆ ಅಂಪೈರ್ ಆಗಲು ಏನೆಲ್ಲ ಅರ್ಹತೆ ಇರಬೇಕು ಮತ್ತು ಅವರ ಪಡೆಯುವ ಸಂಬಳ ಎಷ್ಟೆಂದು ತಿಳಿಯಿರಿ.

author img

By ETV Bharat Sports Team

Published : 3 hours ago

ಕ್ರಿಕೆಟ್ ಅಂಪೈರ್‌ನ ಸಂಬಳ ಮತ್ತು ಅರ್ಹತೆಗಳು
ಕ್ರಿಕೆಟ್ ಅಂಪೈರ್‌ನ ಸಂಬಳ ಮತ್ತು ಅರ್ಹತೆಗಳು (AFP)

ಹೈದರಾಬಾದ್​: ಭಾರತದಲ್ಲಿ ಕ್ರಿಕೆಟ್​ಗಿರುವ ಕ್ರೇಜ್ ಮತ್ಯಾವ ಕ್ರೀಡೆಗಳಿಗಿಲ್ಲ. ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕ್ರಿಕೆಟ್ ಆಡುವ ಮತ್ತು ನೋಡುವ ಆಸಕ್ತಿ ಹೊಂದಿದವರೇ ಹೆಚ್ಚು. ಅದರಲ್ಲೂ ಇಂದಿನ ಯುವಕರು ಒಳ್ಳೆಯ ಕ್ರಿಕೆಟಿಗನಾಗಿ ದೇಶವನ್ನು ಪ್ರತಿನಿಧಿಸಬೇಕೆಂಬ ಮಹದಾಸೆಯನ್ನು ಹೊಂದಿರುತ್ತಾರೆ. ಆದರೆ, ಸದ್ಯ ಕ್ರಿಕೆಟ್​ನಲ್ಲಿರುವ ಕಾಂಪಿಟೇಶನ್​ನಿಂದಾಗಿ ಅವಕಾಶ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಇದೇ ಕಾರಣದಿಂದಾಗಿ ಹಲವಾರು ಯುವಕರು ಹಿಂದೆ ಸರೆಯುತ್ತಾರೆ. ನಿಮಗೆ ಗೊತ್ತಾ ಕ್ರಿಕೆಟ್‌ನಲ್ಲಿ ವೃತ್ತಿಜೀವನ ಬಯಸುವವರಿಗೆ ಕೇವಲ ಆಟಗಾರನಾಗಿ ಮಾತ್ರವಲ್ಲದೇ ಇನ್ನೂ ಹಲವು ಆಯ್ಕೆಗಳಿವೆ.

ಹೌದು, ಆಟಗಾರನಾಗಿ ಅವಕಾಶ ಸಿಗದಿದ್ದರೆ ಕ್ರಿಕೆಟ್​ನಲ್ಲಿ ಅಂಪೈರ್ ಆಗಿ ಕೂಡ ನೆಲೆ ಕಂಡುಕೊಳ್ಳಬಹುದಾಗಿದೆ. ಕ್ರಿಕೆಟ್​ನಲ್ಲಿ ಆಟಗಾರರಷ್ಟೇ ಅಂಪೈರ್​ ಕೂಡ ಮುಖ್ಯವಾಗಿರುತ್ತಾರೆ. ಪಂದ್ಯದ ಫಲಿತಾಂಶ ಹೊರ ಬರಲು ಅಂಪೈರ್​ಗಳು ಪಾತ್ರ ಬಹುಮುಖ್ಯವಾಗಿರುತ್ತದೆ. ಜತೆಗೆ ಅಂಪೈರ್​ ತೀರ್ಮಾನವೇ ಅಂತಿಮವಾಗಿರುತ್ತದೆ. ಕ್ರಿಕೆಟ್‌ನಲ್ಲಿ ಎರಡು ರೀತಿಯ ಅಂಪೈರ್‌ಗಳಿರುತ್ತಾರೆ. ಆನ್​ - ಫೀಲ್ಡ್​ ಅಂಪೈರ್‌ ಮತ್ತು ಮೂರನೇ ಅಂಪೈರ್​. ಮೈದಾನದಲ್ಲಿ ನಿಂತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಆನ್ ​ - ಫೀಲ್ಡ್​ ಅಂಪೈರ್​ ಒಂದೆಡೆಯಾದರೇ, ವಿಡಿಯೋ ತಂತ್ರಜ್ಞಾನವನ್ನು ಬಳಸಿ ಚೆಂಡನ್ನು ಟ್ರ್ಯಾಕ್​ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಮೂರನೇ ಅಂಪೈರ್. ಇದು ಅಂತಿಮ ನಿರ್ಣಾಯಕ ಕೂಡ ಹೌದು.

ಇಷ್ಟೆಲ್ಲ ಪ್ರಮುಖ ಪಾತ್ರವಹಿಸುವ ಅಂಪೈರ್​ಗಳಿಗೆ ಕಡಿಮೆ ಸಂಬಳ ಇರುತ್ತದೆ ಎಂದು ಭಾವಿಸಬೇಡಿ. ಇವರು ಪ್ರತಿ ಪಂದ್ಯಕ್ಕೆ ಪಡೆಯುವ ಸಂಬಳ ಕೇಳಿದರೇ ನೀವೂ ಕೂಡ ಬೆರಾಗಾಗ್ತೀರಾ. ಹಾಗಾದರೆ ಬನ್ನಿ ನೀವೂ ಅಂಪೈರ್ ಆಗಲು ಬಯಸಿದರೆ, ನಿಮ್ಮಲ್ಲಿ ಯಾವೆಲ್ಲ ಅರ್ಹತೆಗಳಿರಬೇಕು ಮತ್ತು ಅಂಪೈರ್​ ಪಡೆಯುವ ಸಂಬಳ ಎಷ್ಟು ಎಂಬ ನಿಮ್ಮಲ್ಲ ಪ್ರಶ್ನೆಗಳಿಗೆ ಈ ಸುದ್ದಿಯಲ್ಲಿ ಉತ್ತರ ತಿಳಿಯಿರಿ.

ಅಂಪೈರ್ ಆಗಲು ಯಾವ ಕೌಶಲ್ಯಗಳಿರಬೇಕು: ಅಂಪೈರ್ ಆಗಲು ಕ್ರಿಕೆಟ್ ಆಡಿದ ಅನುಭವ ಬೇಕಿಲ್ಲ. ಬದಲಿಗೆ ನೀವು ಆಟದ ನಿಯಮಗಳನ್ನು ಚೆನ್ನಾಗಿ ಅರಿತಿರಬೇಕು. ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವಷ್ಟು ಚುರುಕಾಗಿರಬೇಕು. ಜತೆಗೆ ಉತ್ತಮ ಸಂವಹನ, ದೈಹಿಕ ಸಾಮರ್ಥ್ಯ (ದೀರ್ಘ ಕಾಲ ನಿಲ್ಲುವ)ಕೂಡ ಅಗತ್ಯವಿದೆ. ಅಲ್ಲದೇ ಪಂದ್ಯದ ಎಲ್ಲ ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸಲು ಕಣ್ಣಿನ ದೃಷ್ಟಿ ಕೂಡ ಉತ್ತಮವಾಗಿರಬೇಕು. ಈ ಎಲ್ಲಾ ಕ್ವಾಲಿಟಿ ನಿಮ್ಮಲ್ಲಿದ್ದರೇ ನೀವು ಮೊದಲ ಹಂತ ಪೂರ್ಣಗೊಳಿಸಿದಂತೆ.

ಬಳಿಕ ಮಾಡಬೇಕಾಗಿದ್ದು, ಮೊದಲು ನಿಮ್ಮ ರಾಜ್ಯ ಕ್ರಿಕೆಟ್ ಅಸೋಸೆಸಿಯನ್​ ಸದಸ್ಯರಾಗಿ ಸೇರಿಕೊಳ್ಳಿ. ರಾಜ್ಯ ಸಂಘದ ಪ್ರಾಯೋಜಕತ್ವವನ್ನು ಪಡೆದುಕೊಳ್ಳಿ ಮತ್ತು ಅಂಪೈರ್ ಪ್ರಮಾಣೀಕರಣ ಪತ್ರ ಪಡೆಯಲು ಬಿಸಿಸಿಐ ಅಂಪೈರ್ ಅಕಾಡೆಮಿಯೊಂದಿಗೆ ನಿಮ್ಮ ಹೆಸರನ್ನು ನೋಂದಾಯಿಸಿ. ಬಳಿಕ ಬಿಸಿಸಿಐ ಅಂಪೈರ್ ಅಕಾಡೆಮಿ ನಡೆಸುವ ಅಂಪೈರಿಂಗ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ. ಅದಾದ ಬಳಿಕ ನಿಮ್ಮ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸುವ ಪಂದ್ಯಗಳಲ್ಲಿ ಭಾಗವಹಿಸಿ ಮತ್ತು ಅಂಪೈರಿಂಗ್ ಪ್ರಮಾಣಪತ್ರವನ್ನು ಪಡೆಯಿರಿ. ಈ ಎಲ್ಲಾ ಹಂತಗಳು ಪೂರ್ಣಗೊಂಡ ಬಳಿಕ ರಾಜ್ಯ ಮಟ್ಟದಲ್ಲಿ ಎರಡರಿಂದ ಮೂರು ವರ್ಷಗಳ ಅಂಪೈರಿಂಗ್ ಅನುಭವ ಪಡೆಯಿರಿ. ಬಳಿಕ ಬಿಸಿಸಿಐ ನಡೆಸುವ ಲೆವೆಲ್ 1 ಪರೀಕ್ಷೆಗೆ ಅರ್ಜಿ ಸಲ್ಲಿಸಿ ಉತ್ತೀರ್ಣರಾಗಬೇಕು.

ಲೆವೆಲ್​ 1 ಪರೀಕ್ಷೆಗೂ ಮುನ್ನ ಬಿಸಿಸಿಐ 3 ದಿನಗಳ ಕಾಲ ತರಬೇತಿ ಆಯೋಜಿಸುತ್ತದೆ. ಬಳಿಕ ಅಭ್ಯರ್ಥಿಗಳ ಮೆರಿಟ್ ಪಟ್ಟಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂಡಕ್ಷನ್ ಕೋರ್ಸ್ ಅನ್ನು ನೀಡಲಾಗುತ್ತದೆ, ಇದರಲ್ಲಿ ಅವರಿಗೆ ಅಂಪೈರಿಂಗ್ ಕುರಿತು ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಸಂದರ್ಶನ ನಡೆಸಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದರೇ ಲೆವೆಲ್ 2 ಪರೀಕ್ಷೆಗೆ ಅರ್ಹತೆ ಪಡೆಯುತ್ತೀರಿ.

ಇದರಲ್ಲಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದೆಲ್ಲಾ ಕ್ಲೀಯರ್​ ಆದರೇ ಸೆರ್ಟಿಫೈಡ್​ ಅಂಪೈರ್​ ಆಗಿ ಪ್ರಮಾಣಪತ್ರ ನೀಡಲಾಗುತ್ತದೆ. ಉತ್ತಮವಾಗಿ ಅಂಪೈರಿಂಗ್​ ಮಾಡಿದರೇ ಬಿಸಿಸಿಐ ಶಿಫಾರಸಿನೊಂದಿಗೆ ನೀವು ಅಂತಾರಾಷ್ಟ್ರೀಯ ಅಂಪೈರ್ ಕೂಡ ಆಗಬಹುದಾಗಿದೆ.

ಬಿಲ್ಲಿ ಬೌಡೆನ್, ರಿಚರ್ಡ್ ಕೆಟಲ್ಬರೋ ಮತ್ತು ನಿತಿನ್ ಮೆನನ್
ಬಿಲ್ಲಿ ಬೌಡೆನ್, ರಿಚರ್ಡ್ ಕೆಟಲ್ಬರೋ ಮತ್ತು ನಿತಿನ್ ಮೆನನ್ (AFP)

ಅಂಪೈರ್‌ ಸಂಬಳ ಎಷ್ಟು?: ಅಂತಾರಾಷ್ಟ್ರೀಯ ಅಂಪೈರ್​ ಆಗಿದ್ದರೆ ಪಂದ್ಯಗಳ ಸಂಖ್ಯೆಯನ್ನು ಆಧರಿಸಿ ವಾರ್ಷಿಕ ರೂ.66 ಲಕ್ಷದಿಂದ 1.67 ಕೋಟಿ ರೂ ವರೆಗೆ ಸಂಬಳ ಪಡೆಯುತ್ತಾರೆ. ಉದಾಹರಣೆಗೆ, ಅಂಪೈರ್‌ಗಳು ಪ್ರತಿ ಟೆಸ್ಟ್ ಪಂದ್ಯಕ್ಕೆ ಸುಮಾರು ರೂ.3.33 ಲಕ್ಷ, ಏಕದಿನ ಪಂದ್ಯಗಳಿಗೆ ರೂ.2.26 ಲಕ್ಷ ಮತ್ತು T20 ಪಂದ್ಯಗಳಿಗೆ ರೂ.1.25 ಲಕ್ಷ ವರೆಗೆ ಸಂಬಳ ಪಡೆಯುತ್ತಾರೆ.

ದೇಶೀಯ ಅಂಪೈರ್‌ಗಳು: ದೇಶೀಯ ಪಂದ್ಯಗಳಲ್ಲಿ, ಬಿಸಿಸಿಐ ಅಂಪೈರ್‌ಗಳಿಗೆ ಅವರ ಗ್ರೇಡ್‌ಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಉನ್ನತ ದರ್ಜೆಯ ಅಂಪೈರ್‌ಗಳು ಪಂದ್ಯವೊಂದಕ್ಕೆ 40,000 ರೂ. ಗಳಿಸುತ್ತಾರೆ. ಕಡಿಮೆ ಗ್ರೇಡ್​ನ ಅಂಪೈರ್​ಗಳು ಪಂದ್ಯವೊಂದಕ್ಕೆ 30,000 ರೂ ವರೆಗೆ ಸಂಬಳ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: 17 ವರ್ಷಗಳಲ್ಲಿ ಐಪಿಎಲ್​ ಫ್ರಾಂಚೈಸಿಗಳ ಪರ್ಸ್​ ಮಿತಿ ಶೇಕಡಾ 600ರಷ್ಟು ಹೆಚ್ಚಳ: ಮೊದಲ ಋತುವಿನಲ್ಲಿ ಎಷ್ಟಿತ್ತು, ಈಗ ಎಷ್ಟಾಗಿದೆ ಗೊತ್ತಾ? - IPL franchises purse limit increase

ETV Bharat Logo

Copyright © 2024 Ushodaya Enterprises Pvt. Ltd., All Rights Reserved.