ETV Bharat / state

Video - ಗೋಕರ್ಣದಲ್ಲಿ ಲವರ್ಸ್​ ರಂಪಾಟ.. ಅಡ್ಡಾದಿಡ್ಡಿ ಬೈಕ್ ಚಾಲನೆ, ಪೊಲೀಸರೊಂದಿಗೂ ವಾಗ್ವಾದ! - couple argues with gokarna police

ಹೈದರಾಬಾದ್‌ ಮೂಲದ ಯುವ ಜೋಡಿಯೊಂದು ಗೋಕರ್ಣದಲ್ಲಿ ರಂಪಾಟ ನಡೆಸಿದೆ. ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಜನರಲ್ಲಿ ಭಯ ಹುಟ್ಟಿಸಿದೆ. ಪೊಲೀಸರೊಂದಿಗೂ ವಾಗ್ವಾದ ನಡೆಸಿರುವುದು ಬೆಳಕಿಗೆ ಬಂದಿದೆ.

couple argues with gokarna police
ಗೋಕರ್ಣದಲ್ಲಿ ಯುವ ಜೋಡಿ ರಂಪಾಟ
author img

By

Published : Jan 23, 2022, 3:02 PM IST

Updated : Jan 23, 2022, 3:09 PM IST

ಕಾರವಾರ (ಉತ್ತರ ಕನ್ನಡ): ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ತೆಲಂಗಾಣ ರಾಜ್ಯದ ಪ್ರೇಮಿಗಳು ಜನರಲ್ಲಿ ಭಯ ಹುಟ್ಟಿಸಿದ ಘಟನೆ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಎಚ್ಚರಿಕೆ ನೀಡಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದ್ದಾರೆ.

ಜನನಿಬಿಡ ರಸ್ತೆಯಲ್ಲಿ ಬೈಕ್​ನಲ್ಲಿ ಯುವತಿ ಮುಂದೆ ಕುಳಿತು, ಹಿಂದಿನ ಸೀಟ್​ನಲ್ಲಿ ಯುವಕ ಕುಳಿತು ಬೈಕ್​ ಅನ್ನು ಅತ್ತಿತ್ತ ಚಲಾಯಿಸುತ್ತಾ ಭಯ ಉಂಟುಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಬೈಕ್ ನಿಲ್ಲಿಸಿ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಪೊಲೀಸರ ಮೇಲೆ ಇಬ್ಬರು ಹರಿಹಾಯ್ದು ರಂಪಾಟ ನಡೆಸಿ ಮತ್ತೆ ಬೈಕ್​ ಚಲಾಯಿಸಲು ಮುಂದಾದಾಗ ಕೆಳಕ್ಕೆ ಬಿದ್ದಿದ್ದಾರೆ. ನಂತರ ಪುನಃ ವಾದಕ್ಕೆ ಇಳಿದಿದ್ದಾರೆ.

ಗೋಕರ್ಣದಲ್ಲಿ ಯುವ ಜೋಡಿ ರಂಪಾಟ

ಬಳಿಕ ಪೊಲೀಸ್ ತುರ್ತು ಸೇವಾ ವಾಹನ 112 ಸ್ಥಳಕ್ಕಾಗಮಿಸಿ ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪಿ.ಐ. ವಸಂತ ಆಚಾರ ದಂಡ ವಿಧಿಸಿ ಎಚ್ಚರಿಕೆ ಜೊತೆ ತಿಳಿಹೇಳಿ ಆ ಜೋಡಿಯನ್ನು ಕಳುಹಿಸಿದ್ದಾರೆ. ಬೈಕ್​ ಬೀಳಿಸಿಕೊಂಡು ಸಣ್ಣಪುಟ್ಟ ಗಾಯ ಮಾಡಿಕೊಂಡ ಯುವತಿಯನ್ನು ಪೊಲೀಸರೇ ಆರೋಗ್ಯ ಕೇಂದ್ರಕ್ಕೆ ಕೆರದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಅಪರೂಪದ 'ಕಣಜ ಗೂಬೆ' ರಕ್ಷಣೆ

ಈ ಯುವ ಜೋಡಿ ರೆಸಾರ್ಟ್​ವೊಂದರಲ್ಲಿ ತಂಗಿದ್ದರು ಎನ್ನಲಾಗಿದ್ದು, ಇಬ್ಬರು ಮದ್ಯ ಅಥವಾ ಇನ್ನಾವುದೋ ಅಮಲು ಪದಾರ್ಥ ಸೇವಿಸಿರುವ ಸಂದೇಹ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಪೊಲೀಸರು ಹೇಳಿದರೆ, ಈ ಪ್ರೇಮಿಗಳು ಮಾತ್ರ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು. ರಾತ್ರಿ 8 ಗಂಟೆಗೆ ಬೆಂಗಳೂರಿಗೆ ತೆರಳುವ ಬಸ್ ಬುಕ್ ಮಾಡಿದ್ದು, ದಯವಿಟ್ಟು ಬಿಟ್ಟು ಬಿಡಿ ಎಂದು ಕ್ಷಮೆಯಾಚಿಸಿ ದಂಡ ಕಟ್ಟಿ ತರಾತುರಿಯಲ್ಲಿ ಪೊಲೀಸ್​ ಠಾಣೆಯಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 23, 2022, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.