ಸಿದ್ದಾಪುರ(ಉತ್ತರ ಕನ್ನಡ) : ಕೌಟುಂಬಿಕ ಕಲಹದ ಹಿನ್ನೆಲೆ ಹೆಂಡತಿಯನ್ನು ಗಂಡ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಹೆಗ್ಗೋಡ್ಮನೆಯಲ್ಲಿ ಶುಕ್ರವಾರ ನಡೆದಿದೆ. ಇಲ್ಲಿಯ ನಿವಾಸಿ ಮಂಜುಳಾ ಚನ್ನಯ್ಯ (46) ಕೊಲೆಯಾದ ಗೃಹಿಣಿ ಎಂದು ಗುರುತಿಸಲಾಗಿದೆ.
![Husband killed his wife in UttaraKannada, Husband killed his wife in Sirsi, Karawar crime news, ಉತ್ತರಕನ್ನಡದಲ್ಲಿ ಹೆಂಡ್ತಿಯನ್ನು ಕೊಂದ ಪತಿ, ಶಿರಸಿಯಲ್ಲಿ ಹೆಂಡ್ತಿಯನ್ನು ಕೊಂದ ಪತಿ, ಕಾರವಾರ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-srs-01-hendati-kole-photoaropi-ka10005_20052022165505_2005f_1653045905_894.jpg)
ಮೃತಳ ಗಂಡ ಮಂಜುನಾಥ ಚನ್ನಯ್ಯ ಮತ್ತು ಮಂಜುಳಾ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಮಂಜುನಾಥ ತನ್ನ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಹೆದರಿ ಪರಾರಿಯಾಗಿದ್ದಾನೆ.
ಓದಿ: ಬೀದರ್ನಲ್ಲಿ ಯುವಕನ ಬರ್ಬರ ಕೊಲೆ: ಚಾಕುವಿನಿಂದ ಇರಿದು ಕೊಂದ ವ್ಯಕ್ತಿ
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಮಂಜುನಾಥನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.