ಭಟ್ಕಳ: ಉದ್ವೇಗ ಹಾಗೂ ಖಿನ್ನತೆಗೆ ಒಳಗಾದ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ವಿದ್ಯಾ ಅಣ್ಣಪ್ಪ ನಾಯ್ಕ (46) ಮೃತ ಗೃಹಿಣಿ. ಇವರು ಮುಗಳಿಹೊಂಡ ಪುರವರ್ಗ ನಿವಾಸಿ ಎಂದು ತಿಳಿದು ಬಂದಿದೆ. ಮೃತ ಗೃಹಿಣಿ ಅತಿಯಾದ ಮಡಿವಂತಿಕೆಯವರಾಗಿದ್ದರು. ಉದ್ವೇಗ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು. ಇಂದು ಮನೆ ಹಿಂಬದಿಯ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಮೃತ ಮಹಿಳೆಯ ಕುಟುಂಬಸ್ಥರು ದೂರು ದಾಖಲಿದ್ದಾರೆ.