ETV Bharat / state

ಐದು ವರ್ಷದ ಬಳಿಕ ದೇವಾಲಯದ ಹಣ ದೋಚಿದ ಆರೋಪಿ ಅರೆಸ್ಟ್‌

ಅಂಕೋಲಾದ ಹೊನ್ನಾರಕಾ ದೇವಾಲಯದಲ್ಲಿ ಐದು ವರ್ಷಗಳ ಹಿಂದೆ ಕಳ್ಳತನ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿಆರೋಪಿ ಪತ್ತೆಯಾಗಿರಲಿಲ್ಲ.

ದೇವಾಲಯದ ಹಣ ದೋಚಿದ ಆರೋಪಿ ಪತ್ತೆ
Police arrested accused at Karwar
author img

By

Published : Dec 24, 2020, 9:54 AM IST

ಕಾರವಾರ: ಅಂಕೋಲಾದಲ್ಲಿನ ಹೊನ್ನಾರಕಾ ದೇಗುಲದ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿ ಕೊನೆಗೂ ಪತ್ತೆಯಾಗಿದ್ದಾನೆ.

ಗೋವಾ ಮೂಲದ ನೂರ್ ಮಹ್ಮದ್ ಬಂಧಿತ ಆರೋಪಿ. ಈತ 2015ರ ಜುಲೈ 31 ರಂದು ತಾಲೂಕಿನ ವಂದಿಗೆ ಗ್ರಾಮದ ಹೊನ್ನಾರಕಾ ದೇವಸ್ಥಾನದ ಬೀಗ ಮುರಿದು ಹುಂಡಿ ಕಾಣಿಕೆ ಕಳವು ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತಾದರೂ ಆರೋಪಿಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ಆದರೆ 2020ರ ಮಾರ್ಚ್ ತಿಂಗಳಲ್ಲಿ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ನೂರ್ ಮಹ್ಮದ್, ಹೊನ್ನಾರಕಾ ದೇವಾಲಯ ಕಳ್ಳತನ ಪ್ರಕರಣದಲ್ಲಿಯೂ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದ. ಅದರಂತೆ ಅಂಕೋಲಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.