ETV Bharat / state

ಜೇನು ನೊಣಗಳ ದಾಳಿ : ಅಂಕೋಲಾದಲ್ಲಿ ಮೂವರಿಗೆ ಗಾಯ!

ರಜೆಯ ನಿಮಿತ್ತ ಕಾಲೇಜಿನಿಂದ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಮೂವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ..

honey bee attack
ಜೇನು ನೊಣಗಳ ದಾಳಿ
author img

By

Published : Dec 12, 2021, 6:08 PM IST

ಕಾರವಾರ : ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಾಯಗೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ.

ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಜೇನು ನೊಣಗಳ ದಾಳಿಗೆ ಸಿಲುಕಿ ಅಸ್ವಸ್ಥರಾದವರನ್ನು ಹತ್ತಿರದ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೇನು ದಾಳಿಗೊಳಗಾದವರ ಪೈಕಿ ವಿದ್ಯಾರ್ಥಿನಿ ಗೋವಾ ಮೂಲದವಳಾಗಿದ್ದಾರೆ.

ಇಲ್ಲಿನ ಕೆಎಲ್ಇ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮತ್ತಿಬ್ಬರು ಅವರ ಸಂಬಂಧಿಗಳಾಗಿದ್ದು, ರಜೆಯ ನಿಮಿತ್ತ ಕಾಲೇಜಿನಿಂದ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಮೂವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಂಪೂರ್ಣ ಸಜ್ಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.