ETV Bharat / state

ಮಹಾರಾಷ್ಟ್ರದಿಂದ ಬಂದವರಿಗೆ ಸರ್ಕಾರಿ ಕ್ವಾರಂಟೈನ್ ಜೊತೆಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ! - 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ

ಮಹಾರಾಷ್ಟ್ರದಿಂದ ಬಂದವರಿಗೆ ಸರ್ಕಾರಿ ಕ್ವಾರಂಟೈನ್ ಬಳಿಕ ಹೋಂ ಕ್ವಾರಂಟೈನ್ ಮಾಡಲಿದ್ದು, ಉಳಿದ ರಾಜ್ಯಗಳಿಂದ ಬಂದವರಿಗೆ ನೇರವಾಗಿ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಕ್ವಾರಂಟೈನ್ ಇದ್ದವರ ಮನೆಗೆ ಭಿತ್ತಿ ಪತ್ರ ಅಂಟಸಲಾಗುವುದು ಎಂದು ಸಹಾಯಕ ಆಯುಕ್ತ ಭರತ್ ಎಸ್. ಹೇಳಿದರು.

Home Quarantine Compulsory with Government Quarantine from Maharashtra
ಮಹಾರಾಷ್ಟ್ರದಿಂದ ಬಂದವರಿಗೆ ಸರಕಾರಿ ಕ್ವಾರಂಟೈನ್ ಜೊತೆಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ: ಭಟ್ಕಳ ಸಹಾಯಕ ಆಯುಕ್ತ
author img

By

Published : Jun 4, 2020, 7:59 PM IST

ಭಟ್ಕಳ: ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ಸದಸ್ಯರನ್ನೊಳಗೊಂಡ ಸಭೆ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಭರತ್ ಎಸ್., ಕಳೆದ ಎರಡು ತಿಂಗಳಲ್ಲಿ ಭಟ್ಕಳದಲ್ಲಿ ಕೊರೊನಾ ನಿಯಂತ್ರಣ ಒಂದು ಹಂತದ್ದಾಗಿದ್ದರೆ, ಇನ್ನು ಮುಂದೆ ಆಡಳಿತದ ಜೊತೆಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಸಹ ಜವಾಬ್ದಾರಿ ವಹಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕಾಗಿದೆ. ಈಗಾಗಲೇ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯಾಧಿಕಾರಿ, ಸದಸ್ಯರು, ಆಶಾ ಕಾರ್ಯಕರ್ತೆಯರು, ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು, ಬೀಟ್ ಪೊಲೀಸರ ತಂಡವಿದ್ದು, ಅವರಿಗೆ ಮಾಹಿತಿ ನೀಡಬೇಕು.

ಮುಖ್ಯವಾಗಿ ಪುರಸಭೆ ವ್ಯಾಪ್ತಿ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಮುಕ್ತವಾಗಬೇಕೆಂಬ ಉದ್ದೇಶಕ್ಕೆ ಸದಸ್ಯರ ಸಹಕಾರ ಅವಶ್ಯಕವಿದೆ. ಮಹಾರಾಷ್ಟ್ರದಿಂದ ಬಂದವರಿಗೆ ಸರ್ಕಾರಿ ಕ್ವಾರಂಟೈನ್ ಬಳಿಕ ಹೋಂ ಕ್ವಾರಂಟೈನ್ ಮಾಡಲಿದ್ದು, ಉಳಿದ ರಾಜ್ಯಗಳಿಂದ ಬಂದವರಿಗೆ ನೇರವಾಗಿ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಕ್ವಾರಂಟೈನ್ ಇದ್ದವರ ಮನೆಗೆ ಭಿತ್ತಿ ಪತ್ರ ಅಂಟಿಸಲಾಗುವುದು ಎಂದರು.

ಎಎಸ್ಪಿ ನಿಖಿಲ್ ಬಿ. ಮಾತನಾಡಿ, ಕೊರೊನಾ ಆರಂಭದಿಂದ ಇಲ್ಲಿಯ ತನಕ ಕೆಲಸ ಮಾಡಿದ ಎಲ್ಲರೂ ಅವರದ್ದೇ ರೀತಿಯಲ್ಲಿ ಉತ್ತಮವಾಗಿ ಕಾರ್ಯ ಮಾಡಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್, ಹೋಟೆಲ್, ರೆಸ್ಟೋರೆಂಟ್ ತೆರೆಯಲಿವೆ. ಈ ವೇಳೆ ಜನದಟ್ಟಣೆ ಹೆಚ್ಚಾಗಲಿದ್ದು, ಆಗ ಆಡಳಿತದ ಜೊತೆಗೆ ಪುರಸಭೆ ಹಾಗೂ ಪಟ್ಟಣ ಪಂಚಾಯತ್​ ಸದಸ್ಯರು ಸಹ ಜನರಿಗೆ ಮಾಹಿತಿ ನೀಡುವಲ್ಲಿ ಕೈಜೋಡಿಸಿದ್ದಲ್ಲಿ ಆದಷ್ಟು ಬೇಗ ಕೊರೊನಾದಿಂದ ಮುಕ್ತರಾಗಲಿದ್ದೇವೆ. ಬೇರೆ ರಾಜ್ಯದಿಂದ ಯಾರಾದರು ಬಂದಿದ್ದಲ್ಲಿ ಅಂತಹವರ ಬಗ್ಗೆ ತಕ್ಷಣ ಸಹಾಯವಾಣಿಗೆ ಕರೆ ಮಾಡಿ ಸಾಮಾಜಿಕ ವರದಿಯನ್ನು ಚಾಚು ತಪ್ಪದೇ ಮಾಡಬೇಕಾಗಿದೆ. ಇದರೊಂದಿಗೆ ಮಳೆಗಾಲದಲ್ಲಿಯೂ ಸಹ ಆಡಳಿತಕ್ಕೆ ಸಹಕಾರ ನೀಡಬೇಕಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.