ETV Bharat / state

ಮತ್ತೆ ಮಳೆರಾಯನ ಅಬ್ಬರ: ಕಾರವಾರ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು - ವೈದ್ಯಕೀಯ ಮಹಾವಿದ್ಯಾಲಯ

ಕರಾವಳಿ ಮತ್ತು ಮಲೆನಾಡಿನ ಎಲ್ಲಾ ತಾಲೂಕುಗಳಲ್ಲಿಯೂ ಮಳೆ ಮುಂದುವರೆದಿದ್ದು, ಕಾರವಾರದ ಬಿಣಗಾ ಬಳಿ ಗುಡ್ಡ ಕುಸಿತ ಸಂಭವಿಸಿದೆ.‌ ಅಲ್ಲದೇ ಮಳೆಯ ರಭಸಕ್ಕೆ ಕಾರವಾರ ಜಿಲ್ಲಾಸ್ಪತ್ರೆಗೆ ನೀರು ನುಗ್ಗಿ ರೋಗಿಗಳು ಹಾಗೂ ಸಿಬ್ಬಂದಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು
author img

By

Published : Aug 15, 2019, 11:52 PM IST

ಕಾರವಾರ: ವಾರಗಳ ಕಾಲ ಪ್ರವಾಹ ಸೃಷ್ಟಿಸಿ ತಣ್ಣಗಾಗಿದ್ದ ಮಳೆ ಮತ್ತೆ ಜೋರಾಗಿದ್ದು, ಮಳೆಯ ರಭಸಕ್ಕೆ ಕಾರವಾರ ಜಿಲ್ಲಾಸ್ಪತ್ರೆಗೆ ನೀರು ನುಗ್ಗಿ ರೋಗಿಗಳು ಹಾಗೂ ಸಿಬ್ಬಂದಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು

ಹೌದು, ಮತ್ತೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾಸ್ಪತ್ರೆಯ ಸುತ್ತಮುತ್ತಲಿನ‌ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ನೀರು ನುಗ್ಗಿದೆ. ಒಂದು ಅಡಿಯಷ್ಟು ನೀರು ತುಂಬಿಕೊಂಡ ಕಾರಣ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಗಿದೆ. ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡದ ಕಾಮಗಾರಿ ವೇಳೆ ಆಸ್ಪತ್ರೆಯಿಂದ ಹೊರ ಹೋಗುವ ನೀರನ್ನು ಬ್ಲಾಕ್ ಮಾಡಿದ್ದರಿಂದ ಈ ರೀತಿಯ ಸಮಸ್ಯೆ ಎದುರಾಗಿದೆ. ಡಯಾಲಿಸಿಸ್ ಕೇಂದ್ರದಲ್ಲಿ ಸುಮಾರು 12 ಬೆಡ್​ಗಳಿದ್ದು, ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳು ಹಾನಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತಂತೆ ಆಸ್ಪತ್ರೆಯ ಸರ್ಜನ್ ಡಾ. ಶಿವಾನಂದ ಕುಡ್ತಲ್ಕರ್ ಮಾತನಾಡಿ, ಕಾರವಾರದಲ್ಲಿ ತಡರಾತ್ರಿಯಿಂದಲೂ ಭಾರೀ ಮಳೆಯಾದ ಕಾರಣ ನೀರು ಹೊರ ಹೋಗದೇ ಬ್ಲಾಕ್ ಆಗಿದೆ. ಈಗಾಗಲೇ ಪಂಪ್ ಮೂಲಕ ನೀರನ್ನು ಹೊರಹಾಕಲಾಗುತ್ತಿದೆ. ಇಂದು ಆಸ್ಪತ್ರೆಗೆ ರಜೆ ಇರುವ ಕಾರಣ ನಾಳೆ ಒಳಗೆ ಎಲ್ಲವನ್ನು ಸರಿಪಡಿಸಲಾಗುವುದು ಎಂದರು.

ಇನ್ನು ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನ ಎಲ್ಲಾ ತಾಲೂಕುಗಳಲ್ಲಿಯೂ ಮಳೆ ಮುಂದುವರೆದಿದ್ದು, ಕಾರವಾರದ ಬಿಣಗಾ ಬಳಿ ಗುಡ್ಡ ಕುಸಿತ ಸಂಭವಿಸಿದೆ.‌ ಅಲ್ಲದೆ ಬಿಣಗಾ ಬಳಿ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಕಾರಣ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಸವಾರರು ಕೆಲ ಕಾಲ ತೊಂದರೆ ಅನುಭವಿಸುವಂತಾಯಿತು.

Intro:ಕಾರವಾರ: ವಾರಗಳ ಕಾಲ ಪ್ರವಾಹ ಸೃಷ್ಟಿಸಿ ತಣ್ಣಗಾಗಿದ್ದ ಮಳೆ ಮತ್ತೆ ಜೋರಾಗಿದ್ದು, ಮಳೆಯ ರಭಸಕ್ಕೆ ಕಾರವಾರ ಜಿಲ್ಲಾಸ್ಪತ್ರೆಗೆ ನೀರು ನುಗ್ಗಿ ರೋಗಿಗಳು ಹಾಗೂ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ತಡರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಕಾರವಾರದ ಜಿಲ್ಲಾಸ್ಪತ್ರೆಯ ಸುತ್ತಮುತ್ತಲಿನ‌ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ಇದೆ ನೀರು ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ನುಗ್ಗಿದ್ದು, ಒಂದು ಅಡಿಯಷ್ಟು ನೀರು ತುಂಬಿಕೊಂಡ ಕಾರಣ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಗಿದೆ.
ಡಯಾಲಿಸಿಸ್ ಕೇಂದ್ರದಲ್ಲಿ ಸುಮಾರು ೧೨ ಬೆಡ್ ಗಳಿದ್ದು, ನಿತ್ಯವೂ ಇಲ್ಲಿ ಸಿಪ್ಟ್ ಮೇಲೆ ಡಯಾಲಿಸಿಸ್ ಮಾಡಲಾಗುತ್ತದೆ. ಅಲ್ಲದರ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳಿದ್ದು, ಮಳೆ ಮುಂದುವರಿದಲ್ಲಿ ನೀರು ಹೆಚ್ಚಾಗಿ ಹಾನಿಯಾಗುವ ಸಾಧ್ಯತೆ ಇದೆ. ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ಕಾಮಗಾರಿ ವೇಳೆ ಆಸ್ಪತ್ರೆಯಿಂದ ಹೊರ ಹೋಗುವ ನೀರನ್ನು ಬ್ಲಾಕ್ ಮಾಡಿದ್ದರಿಂದ ಈ ರಿತಿಯಾಗಿರುವ ಸಾಧ್ಯತೆ ಇದೆ. ಈಗಾಗಲೇ ಆಸ್ಪತ್ರೆ ಸಿಬ್ಬಂದಿ ಹಾಗೂ ಪಂಪಸೆಟ್ ಮೂಲಕ ನೀರನ್ನು ಹೊರಹಾಕಲಾಗುತ್ತಿದೆ. ಆದರೆ ಬೇಗ ನೀರನ್ನು ಖಾಲಿ ಮಾಡದೆ ಇದ್ದಲ್ಲಿ ಇನ್ನಷ್ಟು ಭಾಗಗಳಿಗೆ ನುಗ್ಗಿ ಹಾನಿಯಾಗುವ ಆತಂಕ ಇದೆ. ಜತೆಗೆ ಡಯಾಲಿಸಿಸ್ ರೋಗಿಗಳಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಮಾಧವ ನಾಯಕ.
ಕಾರವಾರದಲ್ಲಿ ತಡರಾತ್ರಿಯಿಂದಲೂ ಭಾರಿ ಮಳೆಯಾದ ಕಾರಣ ನೀರು ಹೊರ ಹೋಗದೆ ಬ್ಲಾಕ್ ಆಗಿದೆ. ಎಂದೂ ಕೂಡ ಈತರಹದ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಈಗಾಗಲೇ ಸಿಬ್ಬಂದಿ ಮತ್ತು ಪಂಪ್ ಮೂಲಕ ಹೊರಹಾಕಲಾಗಿದೆ. ಇಂದು ಆಸ್ಪತ್ರೆಗೆ ರಜೆ ಇರುವ ಕಾರಣ ಡಯಾಲಿಸಿಸ್ ಗೆ ದಿನಾಂಕ ನೀಡಿರಲಿಲ್ಲ. ನಾಳೆ ಡಯಾಲಿಸಿಸ್ ಗೆ ಬರಲಿದ್ದು, ಅಷ್ಟರಲ್ಲಿ ಸರಿಪಡಿಸಲಾಗುವುದು. ಯಂತ್ರಕ್ಕೂ ಕೂಡ ಯಾವುದೇ ಹಾನಿಯಾಗಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಸರ್ಜನ್ ಡಾ. ಶಿವಾನಂದ ಕುಡ್ತಲ್ಕರ್.
ಇನ್ನು ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನ ಎಲ್ಲ ತಾಲ್ಲೂಕುಗಳಲ್ಲಿಯೂ ಮಳೆ ಮುಂದುವರಿದಿದ್ದು, ಕಾರವಾರದ ಬಿಣಗಾ ಬಳಿ ಗುಡ್ಡ ಕುಸಿತ ಸಂಭವಿಸಿದೆ.‌ ಅಲ್ಲದೆ ಬಿಣಗಾ ಬಳಿ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಕಾರಣ ಹೆದ್ದಾರಿಯಲ್ಲಿ ನೀರು ತುಂಬುಲಿಕೊಂಡ ಕೆಲ ಕಾಲ ತೊಂದರೆ ಅನುಭವಿಸುವಂತಾಯಿತು.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೆಲ ದಿನಗಳು ತಣ್ಣಗಾಗಿದ್ದ ಮಳೆ ಮತ್ತೆ ಅಬ್ಬರಿಸತೊಡಗಿದೆ. ಇನ್ನೆ ಮಳೆ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಟ್ಟು ಮನೆ ಸೇರಿಕೊಂಡಿದ್ದ ಪ್ರವಾಹ ಸಂತ್ರಸ್ತರು ಆತಂಕಗೊಂಡಿದ್ದಾರೆ. ಅಲ್ಲದೆ ಹವಮಾನ ಇಲಾಖೆ ಕೂಡ ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಬಿಳ್ಳುವ ಬಗ್ಗೆ ಮುನ್ಸೂಚನೆ ನೀಡಿದ್ದು, ಮತ್ತೆಲ್ಲಿ ಅನಾಹುತ ಸೃಷ್ಟಿಯಾಗುವುದೋ ಎನ್ನುವ ಆತಂಕ ಇದೀಗ ಜನರನ್ನು ಕಾಡತೊಡಗಿದೆ.

ಬೈಟ್ ೧ ಮಾಧವ ನಾಯಕ, ಸ್ಥಳೀಯರು

ಬೈಟ್ ೨, ಡಾ. ಶಿವಾನಂದ ಕುಡ್ತಲ್ಕರ್, ಜಿಲ್ಲಾಸ್ಪತ್ರೆ ಸರ್ಜನ್

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.