ಶಿರಸಿ: ಕಳೆದ ಮೂರ್ನಾಲ್ಕು ದಿನ ಬಿಡುವು ನೀಡಿದ್ದ ಮಳೆರಾಯ ಶಿರಸಿ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಭಾನುವಾರ ಮತ್ತೆ ಬಿಡುವು ನೀಡದೇ ಆರ್ಭಟಿಸಿದ್ದಾನೆ.
ಅತಿಯಾದ ಮಳೆಯ ಕಾರಣದಿಂದ ತಾಲೂಕಿನ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆ ತೋಟ, ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಬನವಾಸಿಯ ವರದೆಯ ಒಡಲಿನಲ್ಲಿಯೂ ಭರ್ಜರಿಯಾಗಿ ನೀರು ಹರಿಯುತ್ತಿದ್ದು, ಅಕ್ಕ ಪಕ್ಕದ ಗದ್ದೆಗಳ ರೈತರು ಆತಂಕದಲ್ಲಿದ್ದಾರೆ.
ಇನ್ನು ಬೇಡ್ತಿ, ಶಾಲ್ಮಲಾ ನದಿಗಳು ತುಂಬಿ ಹರಿಯುತ್ತಿವೆ.