ETV Bharat / state

ಉತ್ತರ ಕನ್ನಡ: ಅತಿವೃಷ್ಟಿಯಿಂದ ಈ ಗ್ರಾಮ ನಲುಗಿ ವರ್ಷಗಳದ್ರೂ ಪರಿಹಾರ ಮಾತ್ರ ಮರೀಚಿಕೆ - ಈಟಿವಿ ಭಾರತ್​ ಕನ್ನಡ

ಭಾರಿ ಮಳೆಗೆ ಪ್ರವಾಹ ತಲೆದೋರಿ ನೂರಾರು ಎಕರೆ ಭೂಮಿ, ಆಸ್ತಿ ಕಳೆದುಕೊಂಡು ವರ್ಷ ಕಳೆದರೂ ಯಲ್ಲಾಪುರದ ಕಳಚೆ ಗ್ರಾಮಸ್ಥರಿಗೆ ಸರಿಯಾದ ವ್ಯವಸ್ಥೆಯನ್ನು ಸರ್ಕಾರ ಇನ್ನೂ ಕಲ್ಪಿಸಿಲ್ಲ. ಪರಿಹಾರವನ್ನೂ ಸಹ ನೀಡಿಲ್ಲ.

landslide-problem-of-kalache-village
ಕಳಚೆ ಗ್ರಾಮ
author img

By

Published : Aug 24, 2022, 4:39 PM IST

ಶಿರಸಿ(ಉತ್ತರ ಕನ್ನಡ): ಕಳೆದ ವರ್ಷ ಸುರಿದ ಭಾರಿ ಮಳೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅನಾಹುತಗಳು ಸಂಭವಿಸಿದ್ದವು. ಗುಡ್ಡ ಕುಸಿದು ನೂರಾರು ಎಕರೆ ಅಡಿಕೆ ತೋಟ, ಮನೆಗಳು ನೀರು ಪಾಲಾಗಿ ಜನರ ಬದುಕೇ ಸರ್ವನಾಶವಾಗಿತ್ತು. ಈ ಪ್ರಕೃತಿ ವಿಕೋಪ ನಡೆದು ಒಂದು ವರ್ಷ ಕಳೆದರೂ ಜನರಿಗೆ ಪರಿಹಾರವೆಂಬುದು ಮಾತ್ರ ಇನ್ನೂ ಮರಿಚೀಕೆಯಾಗಿದ್ದು, ಸರ್ಕಾರ ಕನಿಷ್ಠ ಕನಿಕರವನ್ನೂ ತೋರದಿರುವುದು ವಿಪರ್ಯಾಸವಾಗಿದೆ.

2021 ರಲ್ಲಿ ಜಿಲ್ಲೆಯ ಬಹುತೇಕ ಭಾಗ ಅತಿವೃಷ್ಟಿಯಿಂದ ನಲುಗಿದ್ದು, ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ ಹೆಚ್ಚು ಹಾನಿಗೊಳಗಾಗಿತ್ತು. ಇಲ್ಲಿ ನೂರಾರು ಎಕರೆ ಕೃಷಿ ಭೂಮಿ ನಾಶವಾಗಿ ಹತ್ತಾರು ಮನೆಗಳು ಬಿದ್ದು ಹೋಗಿದ್ದವು. ಬೇಡ್ತಿ ನದಿ ಉಕ್ಕಿ ಹರಿದು ಅನೇಕ ಪ್ರದೇಶಗಳು ಮುಳುಗಡೆಯಾಗಿದ್ದವು.

ಇದರಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವೇ ಬೊಮ್ಮಾಯಿ ಅವರು ಕಾರ್ಮಿಕ ಸಚಿವ ಹೆಬ್ಬಾರೊಂದಿಗೆ ಕಳಚೆಗೆ ಭೇಟಿ ನೀಡಿ, ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರದ ಆಶ್ವಾಸನೆ ನೀಡಿದ್ದರು. ಆದರೆ ಸರ್ಕಾರ ಒಂದು ವರ್ಷ ಆಚರಿಸಿಕೊಂಡರೂ ಸಹ ಕಳಚೆ ಜನರಿಗೆ ಮಾತ್ರ ಬದುಕಿನಲ್ಲಿ ಸಂಭ್ರಮ ಎಂಬುದು ಇಲ್ಲದಂತಾಗಿದೆ.

ಈ ಗ್ರಾಮದಲ್ಲಿ ಬಹುತೇಕರು ಕೃಷಿ ನಂಬಿಕೊಂಡು ಬದುಕು ಮಾಡುತ್ತಿದ್ದಾರೆ. ಹೋದ ವರ್ಷದ ಮಳೆಗೆ ಹತ್ತಾರು ವರ್ಷದ ಹಿಂದಿನ ಶ್ರಮ ಮತ್ತು ಮುಂದಿನ ವರ್ಷಗಳ ಕನಸು ಎರಡೂ ನೀರುಪಾಲಾಗಿತ್ತು. ಇಷ್ಟೆಲ್ಲಾ ಸಂಭವಿಸಿದರೂ ಹುಟ್ಟೂರು ಬಿಡಲು ಅಲ್ಲಿನ ಜನರು ತಯಾರಿಲ್ಲ. ಪರ್ಯಾಯ ವ್ಯವಸ್ಥೆ ಅಥವಾ ಪರಿಹಾರ ನೀಡಲು ಸರ್ಕಾರದ ಬಳಿ ನಿಯಮಗಳಿಲ್ಲ.

ಅತಿವೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಳಚೆ ಗ್ರಾಮ ನಲುಗಿ ವರ್ಷಗಳದರೂ ಸಿಗದ ಪರಿಹಾರ

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಭೂ ಕುಸಿತ : ಅಧ್ಯಯನಕ್ಕೆ ಆಗ್ರಹ

ಇದರಿಂದ ಹೊಸ ಕಾನೂನು ಮೂಲಕವೇ ಪರಿಹಾರ ಕಂಡುಹಿಡಿಯಬೇಕಾಗಿದೆ. ಅಲ್ಲದೇ ಹಣಕಾಸು ಇಲಾಖೆಯ ಅನುಮತಿಯೂ ಬೇಕಾಗಿರುವ ಕಾರಣ ಇನ್ನೂ ಒಂದಷ್ಟು ಸಮಯ ಇದಕ್ಕೆ ತಗಲಬಹುದಾಗಿದೆ.‌ ಇದು ಜನರು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ.

ಕಳಚೆ ಪ್ರದೇಶ ಹೋದ ವರ್ಷದ ಮಳೆಗೆ ಸಂಪೂರ್ಣವಾಗಿ ಹಾನಿಯಾಗಿತ್ತು. ಇದನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು 200 ಕೋಟಿ ರೂ ಪರಿಹಾರ ಘೋಷಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ಅಲ್ಲಿನ ಜನರಿಗೆ ಪರಿಹಾರ ದೊರೆತಿಲ್ಲ. ಅಲ್ಲದೇ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಈ ಜನರಿಗೆ ಪರಿಹಾರವನ್ನು ಆದಷ್ಟು ಬೇಗ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಕಳಚೆ ಪ್ರದೇಶಕ್ಕಾದ ಹಾನಿ ಪರಿಶೀಲಿಸಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಕಳಚೆ ಪ್ರದೇಶವನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ಕಾನೂನು ಮಾಡಲು ಸಾಧ್ಯವಿಲ್ಲ. ಸರ್ಕಾರ ಇತರೆ ಪ್ರದೇಶದ ಮಳೆ ಹಾನಿಯ ಬಗ್ಗೆಯೂ ಅಧ್ಯಯನ ಮಾಡಿ ಒಂದೇ ರೀತಿ ಪರಿಹಾರಕ್ಕೆ ಮುಂದಾಗಿದೆ. ಸೂಕ್ತ ಪರಿಹಾರ ನೀಡುವುದಂತೂ ಖಂಡಿತ. ಆದರೆ ಬೃಹತ್​ ಮೊತ್ತದ ಪರಿಹಾರವಾಗಿದ್ದರಿಂದ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​​ ಹೇಳುತ್ತಾರೆ.

ಹೀಗೆ ನೂರಾರು ವರ್ಷಗಳಿಂದ ಹಿರಿಯರು ಮಾಡಿಟ್ಟ ಮನೆ, ಭೂಮಿಯನ್ನು ಕಳೆದುಕೊಂಡ ದುಃಖ ಕಳಚೆ ಗ್ರಾಮಸ್ಥರದ್ದಾದರೆ, ಪರಿಹಾರ ನೀಡಲು ಹೊಸ ಕಾನೂನು ತರಬೇಕಾದ ಹೊಣೆ ಸರ್ಕಾರದ್ದು. ಇಷ್ಟಾಗಿಯೂ ವಿಶೇಷ ಅನುದಾನ, ಹಣಕಾಸು ಯೋಜನೆ ಅಡಿ ಕಳಚೆ ಅಭಿವೃದ್ಧಿ ಆಗಲಿ, ಪರಿಹಾರ ಸಿಗಲಿ ಎನ್ನುವುದು ಎಲ್ಲರ ಬೇಡಿಕೆ.

ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಕೇಂದ್ರ ಭೂ ವಿಜ್ಞಾನಿಗಳ ತಂಡ: ಗುಡ್ಡ ಕುಸಿತ ಪ್ರದೇಶಗಳ ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.