ETV Bharat / state

ರಾಮ ಮಂದಿರ ನಿರ್ಮಾಣಕ್ಕೆ ಭಟ್ಕಳ ತಾಲೂಕಿನಲ್ಲಿಯೇ ಅತಿ ಹೆಚ್ಚು ದೇಣಿಗೆ ನೀಡಿದ ಮಾಜಿ ಶಾಸಕ - Former MLA Mankala vaidya

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯ ತಾಲೂಕಿನಾದ್ಯಂತ ಭರದಿಂದ ಸಾಗುತ್ತಿದೆ. ಮಾಜಿ ಶಾಸಕ ಮಂಕಾಳ ವೈದ್ಯ ವೈಯಕ್ತಿಕವಾಗಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ದೇಣಿಗೆ ನೀಡುವ ಮೂಲಕ ಭಟ್ಕಳ ತಾಲೂಕಿನಲ್ಲಿಯೇ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ಸಾಲಿಗೆ ಮೊದಲಿಗರಾಗಿದ್ದಾರೆ.

Former MLA Mankala vaidya donated largest amount for  Ram Mandir construction
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮಾಜಿ ಶಾಸಕ ಮಂಕಾಳ ವೈದ್ಯ
author img

By

Published : Feb 28, 2021, 9:37 AM IST

ಭಟ್ಕಳ: ರಾಮ ಮಂದಿರ ನಿರ್ಮಾಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ವೈಯಕ್ತಿಕವಾಗಿ ಒಂದು ಲಕ್ಷಕ್ಕೂ ಅಧಿಕ ದೇಣಿಗೆ ನೀಡುವ ಮೂಲಕ ತಾಲೂಕಿನಲ್ಲಿಯೇ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರಲ್ಲಿ ಮೊದಲಿಗರಾಗಿದ್ದಾರೆ.

ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯ ತಾಲೂಕಿನಾದ್ಯಂತ ಭರದಿಂದ ಸಾಗುತ್ತಿದೆ. ವಿವಿಧ ಸಂಘಟನೆಗಳು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುತ್ತಿವೆ. ಈ ಸಂದರ್ಭ ರಾಮ ಜನ್ಮಭೂಮಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಕರ ಶೆಟ್ಟಿ ಇವರ ತಂಡ ಮಾಜಿ ಶಾಸಕ ಮಂಕಾಳ ವೈದ್ಯ ಮನೆಗೆ ತೆರಳಿದೆ. ಸಂಘಟನೆಯ ಸದಸ್ಯರನ್ನು ಆದರದಿಂದ ಬರಮಾಡಿಕೊಂಡು 1 ಲಕ್ಷದ 8 ರೂ.ಗಳನ್ನು ದೇಣಿಗೆ ನೀಡಿ ಶುಭ ಹಾರೈಸಿ, ಚೆಕ್‌ನ್ನು ಹಸ್ತಾಂತರಿಸಿದರು.

ಈ ವೇಳೆ ಜನ್ಮ ಭೂಮಿ ಘಟಕದ ವತಿಯಿಂದ ಪರಮೇಶ್ವರ ಕೋಣಿಮನೆ, ಜಿಎಸ್‌ಬಿ ಸಮಾಜದ ಪ್ರಮುಖ ನರೇಂದ್ರ ನಾಯಕ, ಸುನೀಲ ಕಾಮತ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.