ಕಾರವಾರ: ಮೀನು ಹಿಡಿಯಲು ತೆರಳಿದ ವಿದೇಶಿಗನೋರ್ವ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಇಂಗ್ಲೆಂಡ್ ಮೂಲದ ಗ್ರೆಗೊರಿ ರಾಬರ್ಟ್ ರೈಟ್ (44) ಮೃತಪಟ್ಟ ವಿದೇಶಿಗ. ಕುಟುಬಂದ ಜೊತೆ ಕಳೆದ ಕೆಲ ವರ್ಷದಿಂದ ಗೋಕರ್ಣದಲ್ಲಿ ನೆಲೆಸಿದ್ದ ಈತ ಮಂಗಳವಾರ ಸಂಜೆ ಕುಡ್ಲ ಬೀಚಿನಲ್ಲಿ ಗಾಳಹಾಕಲು ತೆರಳಿದ್ದು, ಈ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗಿದೆ.
ಈತನ ಮೃತದೇಹ ಇಂದು ಬೆಳಿಗ್ಗೆ ಮುಖ್ಯ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.