ETV Bharat / state

ಹೆದ್ದಾರಿ ಕಾಮಗಾರಿ ತಂದ ಸಂಕಷ್ಟ; ಗುಡ್ಡ ಕುಸಿತದಿಂದ ಮನೆ ಕುಸಿಯುವ ಆತಂಕ! - Fear of house collapse due to Uttarkannada highway work

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಗುಡ್ಡ ಕುಸಿಯಲು ಆರಂಭಿಸಿದೆ. ಇದರಿಂದಾಗಿ ಗುಡ್ಡದ ಮೇಲಿನ ಮನೆಗೆ ಕುಸಿತದ ಭೀತಿಯುಂಟಾಗಿದ್ದು, ಕುಟುಂಬವು ಅತಂತ್ರ ಪರಿಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ.

fear-of-house-collapse-due-to-uttarkannada-highway-work
ಹೆದ್ದಾರಿ ಕಾಮಗಾರಿ ತಂದ ಸಂಕಷ್ಟ; ಗುಡ್ಡ ಕುಸಿತದಿಂದ ಮನೆ ಕುಸಿಯುವ ಆತಂಕ!
author img

By

Published : Jul 14, 2022, 10:54 PM IST

ಕಾರವಾರ: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ವರುಣನ ಅಬ್ಬರ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಒಂದೆಡೆ ಮಳೆಯ ನೀರು ತುಂಬಿ ಅಪಾಯ ಎದುರಾಗುವ ಆತಂಕವಿದ್ದರೆ ಇನ್ನೊಂದೆಡೆ ಗುಡ್ಡ ಕುಸಿಯುವ ಭಯದಲ್ಲೇ ಜನರು ಜೀವನ ಸಾಗಿಸುವಂತಾಗಿದೆ. ಅದರಲ್ಲೂ ಹೆದ್ದಾರಿ ಅಗಲೀಕರಣದಿಂದಾಗಿ ಜಿಲ್ಲೆಯ ಕರಾವಳಿಯಲ್ಲಿ ಸೃಷ್ಟಿಯಾಗಿರುವ ಅವಾಂತರಗಳು ಒಂದೆರಡಲ್ಲ.

ಇದೀಗ ಹೆದ್ದಾರಿಗಾಗಿ ತೆರವುಗೊಳಿಸಿದ್ದ ಗುಡ್ಡ ಕುಸಿದ ಪರಿಣಾಮ ಮನೆಯೊಂದು ಮುರಿದು ಬೀಳುವ ಸ್ಥಿತಿ ತಲುಪಿದ್ದು ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ.

ಹೆದ್ದಾರಿ ಕಾಮಗಾರಿ ತಂದ ಸಂಕಷ್ಟ; ಗುಡ್ಡ ಕುಸಿತದಿಂದ ಮನೆ ಕುಸಿಯುವ ಆತಂಕ!

ಒಂದೆಡೆ ಭಾರಿ ಮಳೆ ಸುರಿದ ಪರಿಣಾಮ ರಸ್ತೆಯಂಚಿಗೇ ಕುಸಿದುಬಿದ್ದಿರುವ ಗುಡ್ಡದ ಮಣ್ಣು. ಇನ್ನೊಂದೆಡೆ ರಸ್ತೆಗೆ ಕುಸಿದ ಮಣ್ಣನ್ನು ತೆರವುಗೊಳಿಸುತ್ತಿರುವ ಐಆರ್‌ಬಿ ಸಿಬ್ಬಂದಿ. ಮತ್ತೊಂದೆಡೆ ಕುಸಿಯುತ್ತಿರುವ ಗುಡ್ಡದ ತುದಿಯಲ್ಲಿ ಈಗಲೋ ಆಗಲೋ ಬೀಳುವ ಹಂತದಲ್ಲಿರುವ ಮನೆ. ಈ ದೃಶ್ಯಗಳು ಕಂಡು ಬರುವುದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಾದನಗೇರಿ ಕ್ರಾಸ್ ಬಳಿ.

ಇಲ್ಲಿನ ಹೆದ್ದಾರಿ ಅಗಲೀಕರಣ ನಡೆಸುತ್ತಿರುವ ಐಆರ್‌ಬಿ ಕಾಮಗಾರಿಯಿಂದಾಗಿ ಗುಡ್ಡ ಕುಸಿಯಲು ಕಾರಣವಾಗಿದೆ. ಜಿಲ್ಲೆಯ ಕಾರವಾರ ಗೋವಾ ಗಡಿ ಮಾಜಾಳಿಯಿಂದ ಹಿಡಿದು ಭಟ್ಕಳ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಕ್ಕೇರಿಸುವ ಕಾಮಗಾರಿಯನ್ನು ಐಆರ್‌ಬಿ ಸಂಸ್ಥೆ ನಡೆಸುತ್ತಿದೆ. ಹೀಗೆ ರಸ್ತೆ ಅಗಲೀಕರಣ ವೇಳೆ ಹೆದ್ದಾರಿಯ ಅಂಚಿನಲ್ಲಿರುವ ಗುಡ್ಡಗಳನ್ನು ನೇರವಾಗಿ ಕೊರೆದಿರುವುದು, ಮಳೆ ಹೆಚ್ಚಾದಂತೆ ಗುಡ್ಡ ಕುಸಿಯಲು ಕಾರಣವಾಗಿದೆ.

ಹಾಗೆಯೇ ಮಾದನಗೇರಿ ಬಳಿ ಹೆದ್ದಾರಿಗಾಗಿ ತೆರವುಗೊಳಿಸಿದ್ದ ಗುಡ್ಡ ಕಳೆದ ಕೆಲ ದಿನಗಳ ಹಿಂದೆ ಕುಸಿದುಬಿದ್ದಿದ್ದು ಗುಡ್ಡದ ಮೇಲೆ ಇದ್ದ ವೆಂಕಮ್ಮ ಹಳ್ಳೇರ್ ಎಂಬುವವರ ಮನೆಯವರೆಗೆ ಗುಡ್ಡ ಕುಸಿತ ಉಂಟಾಗಿದೆ. ಇದರ ಪರಿಣಾಮ ಅವರ ಮನೆಯೂ ಕುಸಿಯುವ ಆತಂಕ ಎದುರಾಗಿದ್ದು, ಮನೆಯಲ್ಲಿದ್ದವರಿಗೆ ಬೇರೆಡೆಗೆ ಸ್ಥಳಾಂತರವಾಗುವಂತೆ ಅಧಿಕಾರಿಗಳು ತಿಳಿಸಿ ಖಾಲಿ ಮಾಡಿಸಿದ್ದಾರೆ.

ಗುಡ್ಡ ಕುಸಿತದಿಂದ ಅತಂತ್ರರಾಗಿರುವ ಕುಟುಂಬ : ಇನ್ನು ವೆಂಕಮ್ಮರ ಮನೆ ಗುಡ್ಡದ ಮೇಲಿದ್ದು ಹೆದ್ದಾರಿಯಿಂದ ದೂರದಲ್ಲಿತ್ತು. ಆದರೆ, ಹೆದ್ದಾರಿ ಅಗಲೀಕರಣ ನಿಟ್ಟಿನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಐಆರ್‌ಬಿ ಗುಡ್ಡವನ್ನ ತೆರವು ಮಾಡಿತ್ತು. ಇದೀಗ ಸುರಿದ ಭಾರಿ ಮಳೆಗೆ ಗುಡ್ಡ ಮೇಲಿನಿಂದ ನೀರು ಹರಿದು ಮಣ್ಣು ಸಡಿಲಗೊಂಡಿದ್ದು ಇದೀಗ ಹಂತ ಹಂತವಾಗಿ ಕುಸಿದು ಬೀಳುತ್ತಿದೆ. ಮಳೆ ಹೀಗೆ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಮನೆಯೂ ಕುಸಿಯುವ ಆತಂಕ ಎದುರಾಗಿದೆ. ಮನೆ ಕುಸಿಯುವ ಭೀತಿಯಿಂದ ಈ ಮನೆಯವರು ನೆರೆಮನೆಯಲ್ಲಿ ಆಶ್ರಯ ಪಡೆದುಕೊಳ್ಳುವಂತಾಗಿದೆ.

ಯಾವುದೇ ಪರಿಹಾರ ಲಭ್ಯವಾಗಿಲ್ಲ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾದರೂ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಇನ್ನು ಸದ್ಯ ನೆರೆಮನೆಯಲ್ಲಿ ಆಶ್ರಯ ಪಡೆದುಕೊಂಡಿರುವ ಕುಟುಂಬಸ್ಥರಿಗೆ ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಬಹಳ ದಿನಗಳವರೆಗೆ ಇತರರನ್ನು ಆಶ್ರಯಿಸುವುದು ಸಾಧ್ಯವಿಲ್ಲವಾಗಿದೆ. ಹೀಗಾಗಿ ಬೀದಿಗೆ ಬಿದ್ದಿರುವ ಕುಟುಂಬಸ್ಥರಿಗೆ ಸೂಕ್ತ ಪರಿಹಾರವನ್ನಾದರೂ ಒದಗಿಸಿ ನೆಲೆ ಕಂಡುಕೊಳ್ಳಲು ನೆರವಾಗಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.

ಒಟ್ಟಾರೇ ಯಾರದೋ ನಿರ್ಲಕ್ಷ್ಯಕ್ಕೆ ಬಡ ಕುಟುಂಬವೊಂದು ಆಧಾರವಾಗಿದ್ದ ಮನೆಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿರೋದು ನಿಜಕ್ಕೂ ದುರಂತವೇ. ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸೂಕ್ತ ನೆರವು ಒದಗಿಸಬೇಕಿದೆ.

ಓದಿ : ಮುಂಗಡ ಹಣ ಪಡೆದು ನಿವೇಶನ ನೀಡದ 'ಟಾಪ್ ಒನ್ ಡೆವಲಪರ್ಸ್'ಗೆ ಬಿಸಿ ಮುಟ್ಟಿಸಿದ ಗ್ರಾಹಕರ ಆಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.