ETV Bharat / state

ಕಾರವಾರದಲ್ಲಿ ಅನುಮಾನಸ್ಪದವಾಗಿ ತಿರುಗುತ್ತಿದ್ದ ನಾಲ್ವರು ಕಾಶ್ಮೀರಿಗರ ವಿಚಾರಣೆ - ಕಾರವಾರ ಪೊಲೀಸ್

ಕಾರವಾರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ಕಾಶ್ಮೀರಿಗರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಾಶ್ಮೀರಿಗರ ವಿಚಾರಣೆ
author img

By

Published : Sep 14, 2019, 6:53 AM IST

ಕಾರವಾರ: ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ಕಾಶ್ಮೀರಿಗರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಘಟನೆ ನಡೆದಿದೆ.

ಕಾಶ್ಮೀರ ಮೂಲದ ರಜಾಕ್ ಅಹ್ಮದ್, ಜುಬೇರ್, ರಫಾಕ್, ಮುಸ್ತಾಕ್ ಎಂಬುವರು ಗುರುವಾರ ನಗರದಲ್ಲಿ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡು ನಗರದಲ್ಲಿ ತಡರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅಲ್ಲದೆ ಕೆಲವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಾರವಾರದಲ್ಲಿ ಕಾಶ್ಮೀರಿಗರ ವಿಚಾರಣೆ

ನಾಲ್ವರು ಕಾಶ್ಮೀರ ಮೂಲದವರು ಕಳೆದ ಐದು ವರ್ಷದಿಂದ ಮುಂಬೈನಲ್ಲಿ ವಾಸವಾಗಿದ್ದರು. ಇವರು ಸಂಘಟನೆಯೊಂದರ ಹೆಸರಿನಲ್ಲಿ ಚಂದಾ ವಸೂಲಿಗೆ ಪ್ರತಿ ವರ್ಷದಂತೆ ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ನಾಲ್ವರನ್ನು ವಿಚಾರಣೆ ನಡೆಸಿದ್ದು, ಇವರ ಬಗ್ಗೆ ಎಲ್ಲ ಕಡೆಯಿಂದಲೂ ಮಾಹಿತಿ ತರಿಸಿಕೊಂಡು ವಿಚಾರಿಸಲಾಗಿದೆ. ಇವರು ಯಾರೂ ಕೂಡ ಕ್ರಿಮಿನಲ್ ಹಿನ್ನೆಲೆಯುಳ್ಳವರಲ್ಲ. ಚಂದಾವಸೂಲಿಗೆ ಬಂದಿದ್ದರು. ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

Intro:Body:ಅನುಮಾನಸ್ಪದವಾಗಿ ತಿರುಗುತ್ತಿದ್ದ ನಾಲ್ವರು ಕಾಶ್ಮಿರಿಗಳ ವಿಚಾರಣೆ...!

ಕಾರವಾರ: ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ಕಾಶ್ಮಿರಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಘಟನೆ ನಡೆದಿದೆ.
ಕಾಶ್ಮಿರ ಮೂಲದ ರಜಾಕ್ ಅಹ್ಮದ್, ಜುಬೇರ್, ರಫಾಕ್, ಮುಸ್ತಾಕ್ ಎಂಬುವವರು ಗುರುವಾರ ನಗರದಲ್ಲಿ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡು ನಗರದಲ್ಲಿ ತಡರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅಲ್ಲದೆ ಕೆಲವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಾಲ್ವರು ಕಾಶ್ಮೀರ ಮೂಲದವರು ಕಳೆದ ಐದು ವರ್ಷದಿಂದ ಮುಂಬೈನಲ್ಲಿ ವಾಸವಾಗಿದ್ದರು. ಇವರು ಸಂಘಟನೆಯೊಂದರ ಹೆಸರಿನಲ್ಲಿ ಚಂದಾ ವಸೂಲಿಗೆ ಪ್ರತಿ ವರ್ಷದಂತೆ ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ನಾಲ್ವರನ್ನು ವಿಚಾರಣೆ ನಡೆಸಿದ್ದು, ಇವರ ಬಗ್ಗೆ ಎಲ್ಲ ಕಡೆಯಿಂದಲೂ ಮಾಹಿತಿ ತರಿಸಿಕೊಂಡು ವಿಚಾರಿಸಲಾಗಿದೆ. ಇವರ್ಯಾರು ಕ್ರಿಮಿನಲ್ ಹಿನ್ನೆಲೆಯುಳ್ಳವರಲ್ಲ. ಚಂದಾವಸೂಲಿಗೆ ಬಂದಿದ್ದರು. ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿರುವುದಾಗಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.