ETV Bharat / state

ಉದ್ಯೋಗ ಕೊಡಿಸುವುದಾಗಿ ಉದ್ಯಮಿಗೆ ಲಕ್ಷಾಂತರ ರೂ. ಮೋಸ: ಕಾರವಾರಕ್ಕೆ ಬಂದು ಸಿಕ್ಕಿಬಿದ್ದ ಜೋಡಿ

ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾರವಾರದ ಉದ್ಯಮಿಯೊಬ್ಬರಿಗೆ ಲಕ್ಷ ಲಕ್ಷ ಹಣ ಮೋಸ ಮಾಡಿದ್ದ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ವಂಚನೆ; ಕಾರವಾರಕ್ಕೆ ಬಂದು ಸಿಕ್ಕಿಬಿದ್ದ ಜೋಡಿ
author img

By

Published : Aug 21, 2019, 4:30 PM IST

ಕಾರವಾರ: ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾರವಾರದ ಉದ್ಯಮಿಯೊಬ್ಬರಿಗೆ ಲಕ್ಷ ಲಕ್ಷ ಮೋಸ ಮಾಡಿದ್ದ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಸೂರ್ಯಪ್ರಕಾಶ ಸಿಂಗ್ ಮತ್ತು ಮನ್ ಮೀತ್ ಕೌರ್ ಬಂಧಿತ ಆರೋಪಿಗಳು. ಈ ಇಬ್ಬರು ಪ್ರೇಮಿಗಳು ಎನ್ನಲಾಗಿದ್ದು, 2018ರ ಸೆಪ್ಟೆಂಬರ್ 15ರಂದು ಕಾರವಾರದ ಉದ್ಯಮಿ ಜಗದೀಪ್ ಎಂ ಗೋವೆಕರ್ ಎಂಬುವವರಿಗೆ ಕರೆ ಮಾಡಿ, ತಾವು ದೆಹಲಿಯ ಓವರ್ ಸಿಸ್ ಎಡ್ವೈಸರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ದುಬೈ ಕಂಪನಿಯಲ್ಲಿ ಕೆಲಸ ಮಾಡಲು ಉದ್ಯೋಗಿಗಳು ಬೇಕಾಗಿದ್ದು, ವೀಸಾ ತಾವೇ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

employement-fraud-in-karavara
ಉದ್ಯೋಗ ಕೊಡಿಸುವುದಾಗಿ ವಂಚನೆ; ಕಾರವಾರಕ್ಕೆ ಬಂದು ಸಿಕ್ಕಿಬಿದ್ದ ಜೋಡಿ

ಇದನ್ನು ಒಪ್ಪಿರುವ ಜಗದೀಪ ಅವರು ತಮ್ಮ ಸಹೋದರ ಹಾಗೂ ಇತರ ಸ್ನೇಹಿತರ ಬಳಿ ತಿಳಿಸಿ ಒಟ್ಟು 4.34 ಲಕ್ಷ ಹಣವನ್ನು ಬೇರೆ ಖಾತೆಯಿಂದ ಆರೋಪಿಗಳ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ನಾಲ್ಕೈದು ತಿಂಗಳು ಕಳೆದರು ವೀಸಾ ಬಾರದ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸುವಂತೆ ಕೇಳಿದರೆ ಅದು ಕೂಡ ನೀಡದೆ ವಂಚನೆ ಮಾಡಿದ್ದಾರೆ.

ಇದರಿಂದ ಆತಂಕಕ್ಕೊಳಗಾಗಿ ಪೊಲೀಸರ ಬಳಿ ದೂರು ದಾಖಲಿಸಿದ್ದರು. ಬಳಿಕ ತನಿಖೆಗೆ ಇಳಿದ ಪೊಲೀಸರು ದೆಹಲಿ‌ ಸುತ್ತಿ ಬಂದಿದ್ದರಾದರು ಆರೋಪಿಗಳು ಸಿಕ್ಕಿರಲಿಲ್ಲ. ಆದರೆ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ೮೦ ಸಾವಿರ ಹಣ ಜಪ್ತಿ ಮಾಡಲಾಗಿದೆ.ಆದರೆ ಆರೋಪಿಗಳು ಮಂಗಳವಾರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ದೆಹಲಿಯ ಕಟ್ಟಡವೊಂದರಲ್ಲಿ ಕಚೇರಿ ತೆರೆದಿರುವ ಇವರು ಇದೇ ರೀತಿ ಹಲವರಿಗೆ ವಂಚನೆ ಮಾಡಿದ್ದರು, ಆದರೆ ಈ ಖತರ್ನಾಕ್ ಜೋಡಿ ಇದೀಗ ಜೈಲು ಪಾಲಾಗಿದ್ದಾರೆ.

Intro:Body:ಉದ್ಯೋಗ ಕೊಡಿಸುವುದಾಗಿ ವಂಚನೆ... ಕಾರವಾರಕ್ಕೆ ಬಂದು ಸಿಕ್ಕಿಬಿದ್ದ ಜೋಡಿ

ಕಾರವಾರ: ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾರವಾರದ ಉದ್ಯಮಿಯೋರ್ವರಿಂದ ಲಕ್ಷ ಲಕ್ಷ ಪೀಕಿದ್ದ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಸೂರ್ಯಪ್ರಕಾಶ ಸಿಂಗ್ ಮತ್ತು ಮನ್ ಮೀತ್ ಕೌರ್ ಬಂಧಿತ ಆರೋಪಿಗಳು. ಈ ಇಬ್ಬರು ಲವರ್ ಎನ್ನಲಾಗಿದ್ದು, ೨೦೧೮ ರ ಸೆಪ್ಟೆಂಬರ್ ೧೫ರಂದು ಕಾರವಾರದ ಉದ್ಯಮಿ ಜಗದೀಪ್ ಎಂ ಗೋವೆಕರ್ ಎಂಬುವವರಿಗೆ ಕರೆ ಮಾಡಿ ತಾವು ದೆಹಲಿಯ ಓವರ್ ಸಿಸ್ ಎಡ್ವೈಸರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದರು. ಅಲ್ಲದೆ ತಮ್ಮ ದುಬೈ ಕಂಪನಿಯಲ್ಲಿ ಕೆಲಸ ಮಾಡಲು ಉದ್ಯೋಗಿಗಳು ಬೇಕಾಗಿದ್ದು, ವೀಸಾ ತಾವೇ ಮಾಡಿಕೊಡುವುದಾಗಿ ತಿಳಿಸಿದ್ದರು.
ಅದರಂತೆ ಇದಕ್ಕೆ ಒಪ್ಪಿದ ಜಗದೀಪ ತಮ್ಮ ಅಣ್ಣ ಹಾಗೂ ಇತರ ಸ್ನೇಹಿತರ ಬಳಿ ತಿಳಿಸಿ ಒಟ್ಟು ೪.೩೪ ಲಕ್ಷ ಹಣವನ್ನು ಬೆರೆ ಬೆರೆ ಖಾತೆಯಿಂದ ಆರೋಪಿಗಳ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ನಾಲ್ಕೈದು ತಿಂಗಳು ಕಳೆದರು ವೀಸಾ ಬಾರದ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸುವಂತೆ ಕೇಳಿದರೇ ಅದು ಕೂಡ ನೀಡದೆ ವಂಚನೆ ಮಾಡಿದ್ದರು.
ಇದರಿಂದ ಆತಂಕಕ್ಕೊಳಗಾದ ಜಗದೀಪ ಪೊಲೀಸ್ ದೂರು ದಾಖಲಿಸಿದ್ದರು. ಬಳಿಕ ತನಿಖೆಗೆ ಇಳಿದ ಪೊಲೀಸರು ದೆಹಲಿ‌ಸುತ್ತಿ ಬಂದಿದ್ದರಾದರು ಆರೋಪಿಗಳು ಸಿಕ್ಕಿರಲಿಲ್ಲ. ಆದರೆ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ೮೦ ಸಾವಿರ ಹಣ ಜಪ್ತು ಮಾಡಲಾಗಿದೆ.
ಆದರೆ ಆರೋಪಿಗಳು ಮಂಗಳವಾರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ದೇಹಲಿಯ ಕಟ್ಟಡವೊಂದರಲ್ಲಿ ಕಚೇರಿ ತೆರೆದಿರುವ ಇವರುಗಳು ಇದೇ ರಿತಿ ಹಲವರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಜಾಮೀನು ಪಡೆಯಲು ಬಂದ ಕತರ್ನಾಕ್ ಜೋಡಿ ಇದೀಗ ಜೈಲು ಪಾಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.