ETV Bharat / state

ಅವಧಿ ಪೂರ್ವ ಜನಿಸಿದ ಗಂಡಾನೆ ಮರಿ ಸಾವು - ಅವಧಿಗೂ ಮೊದಲೆ ಜನಿಸಿದ ಕಾರಣ ಆನೆ ಮರಿ ಸಾವು

ಯಲ್ಲಾಪುರದ ಕಾತೂರು ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯ ಬೊಮ್ಮನಳ್ಳಿ ಬಳಿ ಅವಧಿಗೂ ಮೊದಲೆ ಜನಿಸಿದ ಕಾರಣ ಮರಿ ಸಾವನ್ನಪ್ಪಿದ್ದು, ಅಧಿಕಾರಿಗಳು ಮೃತ ಮರಿಯಾನೆಯ ಅಂತ್ಯಕ್ರಿಯೆ ನಡೆಸಿದ್ದಾರೆ.

Elephant died because of Preterm birth
ಅವಧಿ ಪೂರ್ವ ಪ್ರಸವ: ಗಂಡಾನೆ ಮರಿ ಅಂತ್ಯಸಂಸ್ಕಾರ!
author img

By

Published : Dec 27, 2020, 5:30 PM IST

ಕಾರವಾರ: ಅವಧಿಪೂರ್ವ ಪ್ರಸವದಿಂದ ಜನಿಸಿದ ಗಂಡಾನೆ ಮರಿಯೊಂದು ಸಾವನ್ನಪ್ಪಿರುವ ಘಟನೆ ಯಲ್ಲಾಪುರದ ಬೊಮ್ಮನಳ್ಳಿ ಅರಣ್ಯದಲ್ಲಿ ನಡೆದಿದೆ.

ಯಲ್ಲಾಪುರದ ಕಾತೂರು ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯ ಬೊಮ್ಮನಳ್ಳಿ ಬಳಿ ಅವಧಿಗೂ ಮೊದಲೇ ಜನಿಸಿದ ಕಾರಣ ಮರಿ ಸಾವನ್ನಪ್ಪಿದೆ. ಬಳಿಕ ಈ ಬಗ್ಗೆ ತಿಳಿದ ಕಾತೂರು ಅರಣ್ಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮೃತ ಮರಿಯಾನೆಯ ಅಂತ್ಯಕ್ರಿಯೆ ನಡೆಸಿದ್ದಾರೆ.

ಕಳೆದ ಕೆಲ ದಿನಗಳಿಂದ ಯಲ್ಲಾಪುರ, ಮುಂಡಗೋಡು ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಹಾನಿ ನಡೆಸಿತ್ತು. ಇದೇ ಹಿಂಡಿನಲ್ಲಿದ್ದ ಆನೆಗೆ ಪ್ರಸವವಾಗಿರಬಹುದು ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.