ETV Bharat / state

ಹೊಲದಲ್ಲಿ ಬೆಳೆ ಕಾಯಲು ಮಲಗಿದ್ದ ವೇಳೆ ಆನೆ ದಾಳಿ, ಪ್ರಾಣಾಪಾಯದಿಂದ ರೈತ ಪಾರು - ರೈತನ ಮೇಲೆ ಆನೆ ದಾಳಿ

ಶಿರಸಿಯಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಬೆಳೆ ಕಾಯಲು ಹೊಲದಲ್ಲಿ ಮಲಗಿದ್ದ ರೈತನ ಮೇಲೆ ಆನೆ ದಾಳಿ ಮಾಡಿರುವ ಘಟನೆ ನಡೆದಿದೆ.

ಆನೆ ದಾಳಿ
ಆನೆ ದಾಳಿ
author img

By

Published : Jan 3, 2020, 8:12 AM IST

ಶಿರಸಿ (ಉತ್ತರ ಕನ್ನಡ) : ಬೆಳೆಯನ್ನು ಇತರೆ ಪ್ರಾಣಿ, ಪಕ್ಷಿಗಳ ಉಪಟಳದಿಂದ ಕಾಯಲು ಹೊಲದಲ್ಲಿ ಮಲಗಿದ್ದ ರೈತನ ಮೇಲೆ ಆನೆ ದಾಳಿ ಮಾಡಿರುವ ಘಟನೆ ಮುಂಡಗೋಡು ತಾಲೂಕಿನ ಬಸನಾಳ ಗ್ರಾಮದಲ್ಲಿ ನಡೆದಿದೆ.

ದೊಂಡುವಿಟ್ಟು ಏಡಗೆ (65) ಆನೆ ದಾಳಿಗೆ ಸಿಲುಕಿದ ರೈತ.

ಇವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬಿತ್ತಿದ್ದು, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸುವ ಸಲುವಾಗಿ ರಾತ್ರಿ ಹೊಲದಲ್ಲಿ ಮಲಗಿದ್ದರು. ಹೊಲ ಅರಣ್ಯದ ಪಕ್ಕದಲ್ಲಿರುವುದರಿಂದ ಆಕಸ್ಮಿಕವಾಗಿ ಒಂಟಿಸಲಗ ಭತ್ತದ ಕಾಳಿನ ಬಣವಿಯೆಂದು ಭಾವಿಸಿ ಬಣವಿಯತ್ತ ಬಂದಿದೆ. ಹುಲ್ಲಿನ ಬಣವಿ ಆಗಿದ್ದರಿಂದ ಹುಲ್ಲನ್ನು ತನ್ನ ಸೊಂಡಿಲಿನಿಂದ ತಿವಿದು ಹಾಳು ಮಾಡಿದೆ. ಜೊತೆಗೆ ಪಕ್ಕದಲ್ಲಿ ಮಲಗಿದ್ದ ರೈತನನ್ನು ಕೂಡಾ ಸೊಂಡಿಲಿನಿಂದ ದೂಡಿದೆ. ಈ ವೇಳೆ ಎಚ್ಚರಗೊಂಡು ಅಲ್ಲಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.

ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

Intro:Body:

state 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.