ETV Bharat / state

ಲಾಕ್ ಡೌನ್ ಭಯ ಬೇಡ, ಸರ್ಕಾರದ ಮಾರ್ಗಸೂಚಿ ಪಾಲಿಸಿ.. ಸಚಿವ ಶಿವರಾಮ್ ಹೆಬ್ಬಾರ್

author img

By

Published : Apr 22, 2021, 10:18 PM IST

ಕೋವಿಡ್ ಎರಡನೇ ಅಲೆಯ ಬಗ್ಗೆ ಉತ್ತರಕನ್ನಡ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು ಈಗಾಗಲೇ ಜಿಲ್ಲೆಯಲ್ಲಿ 2103 ಬೆಡ್‍ಗಳ ವ್ಯವಸ್ಥೆ ಮಾಡಿದೆ. 19 ಮಂದಿ ಆಕ್ಸಿಜನ್ ಚಿಕಿತ್ಸೆಗೆ ಒಳಗಾಗಿದ್ದು, 55 ಮಂದಿ ಸಾಮಾನ್ಯ ಬೆಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ 74 ಬೆಡ್ ಗಳು ಉಪಯೋಗವಾಗಿದ್ದು ವೈದ್ಯಕೀಯ ಸೇವೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸಚಿವ ಶಿವರಾಮ್​ ಹೆಬ್ಬಾರ್​ ಹೇಳಿದ್ದಾರೆ.

Shivaram hebbar
Shivaram hebbar

ಕಾರವಾರ: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರಕನ್ನಡದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದು, ಜನರು ಸಹಕಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ನಗರದಲ್ಲಿ ನಡೆಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯ ಬಗ್ಗೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ಈಗಾಗಲೇ ಜಿಲ್ಲೆಯಲ್ಲಿ 2103 ಬೆಡ್‍ಗಳ ವ್ಯವಸ್ಥೆ ಮಾಡಿದೆ. 19 ಮಂದಿ ಆಕ್ಸಿಜನ್ ಚಿಕಿತ್ಸೆಗೆ ಒಳಗಾಗಿದ್ದು, 55 ಮಂದಿ ಸಾಮಾನ್ಯ ಬೆಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ 74 ಬೆಡ್ ಗಳು ಉಪಯೋಗವಾಗಿದ್ದು, ವೈದ್ಯಕೀಯ ಸೇವೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.

ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಪಿಡಿಓ, ತಹಶೀಲ್ದಾರ್, ಎಸಿ ಒಳಗೊಂಡ 115 ಸೆಕ್ಟರ್ ತಂಡಗಳನ್ನು ಮಾಡಲಾಗಿದೆ. ಕೋವಿಡ್ ಸೋಂಕಿತರಿಗೋಸ್ಕರ ಬಳಸುವ ಆ್ಯಂಬುಲೆನ್ಸ್ ಗಳಿಗೆ ಆಕ್ಸಿಜನ್ ಕಡ್ಡಾಯ ಮಾಡಲಾಗಿದ್ದು, ಒಬ್ಬ ನರ್ಸ್ ಅನ್ನು ಕೂಡ ನಿಯೋಜಿಸಲಾಗಿದೆ. ಇದರಿಂದಾಗಿ ಸಕಾಲಕ್ಕೆ ಜನತೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ದವಾಗಿದೆ. ಜನತೆ ಕೋವಿಡ್ ಬಗ್ಗೆ ನಿರ್ಲಕ್ಷ್ಯ ತೋರದೇ ಜಾಗರೂಕರಾಗಿರಬೇಕು. ಲಾಕ್ ಡೌನ್ ಬಗ್ಗೆ ಕೂಡ ಭಯ ಪಡುವ ಅಗತ್ಯ ಇಲ್ಲ ಸರ್ಕಾರ ಜನತೆಯೊಂದಿಗೆ ಇದೆ ಎಂದು ಭರವಸೆ ನೀಡಿದರು.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ನಮ್ಮ ಜಿಲ್ಲೆಯು ಸಾಕಷ್ಟು ನಿಯಂತ್ರಣದಲ್ಲಿದೆ. ಆದರೂ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವತ್ತ ಗಮನ ನೀಡಬೇಕು. ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅಂತಹ ಆಸ್ಪತ್ರೆಗಳು ಕೋವಿಡ್ ನೆಪದಲ್ಲಿ ಶೋಷಣೆ ಮಾಡದೇ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ವಾರದ ಸಂತೆ, ಜಾತ್ರೆ ಉತ್ಸವಗಳನ್ನ ರದ್ದು ಮಾಡಲಾಗಿದ್ದು, ಮದುವೆಗಳಿಗೆ 50 ಜನರು ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದೆ. ಮದುವೆಯಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಹೋಗುವ ದಂಪತಿಗಳಿಗೆ ಕೋವಿಡ್ ನಿಯಂತ್ರಣ ನಿಯಮಗಳೊಂದಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಕಾರ್ಮಿಕರು ಕೂಡ ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ಅವರು ಎಲ್ಲೇ ಹೋದರು ಕೂಡ ಕೋವಿಡ್ ಸನ್ನಿವೇಶ ಎದುರಿಸಬೇಲಾಗುತ್ತದೆ. ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಹೋದರೆ ಸಮಸ್ಯೆಯೇ ಉದ್ಭವಿಸುತ್ತದೆ ವಿನಃ ಪರಿಹಾರ ಆಗುವುದಿಲ್ಲ. ಆದ್ದರಿಂದ ಅವರು ಇದ್ದಲ್ಲಿಯೇ ಇದ್ದು ಸಹಕಾರ ನೀಡಬೇಕು. ಅವರಿಗಾಗಿಯೇ ಉಚಿತ ಸಹಾಯವಾಣಿ ಕೂಡ ಇರುತ್ತದೆ. ಕೊರೊನಾದ ಬಗ್ಗೆ ಭಯ ಪಡದೇ ಎಚ್ಚರಿಕೆಯಿಂದಿರಬೇಕಾಗಿದೆ. ಸರ್ಕಾರ ಸದಾ ಕಾರ್ಮಿಕರೊಂದಿಗೆ ಇದೆ ಎಂದು ಸಚಿವರು ಅಭಯ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.