ETV Bharat / state

ಅಂಗಡಿಗಳ ತೆರವುಗೊಳಿಸಿದ ಜಿಪಂ ಸಿಇಒ.. ಸ್ಥಳೀಯ ಮಹಿಳಾ ಮೀನುಗಾರರಿಂದ ಪ್ರತಿಭಟನೆ

ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಡೇಶ್ವರ ಮಾತ್ಹೋಬಾರ ಸಮುದ್ರ ತೀರದಲ್ಲಿ ನಿತ್ಯ ಮೀನುಗಳ ಮಾರಾಟದಿಂದ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಸ್ಥಳೀಯರ ಅಂಗಡಿ ತೆರವುಗೊಳಿಸಲಾಗಿದೆ. ಹೊರಗಿನವರಿಗೆ ಅಂಗಡಿಗಳನ್ನು ಇಡಲು ಅವಕಾಶ ಕಲ್ಪಿಸಲಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.

author img

By

Published : Sep 28, 2019, 1:39 PM IST

ಸ್ಥಳೀಯ ಮೀನುಗಾರರ ಅಸಮಾಧಾನ

ಭಟ್ಕಳ: ಸುಮಾರು ವರ್ಷಗಳಿಂದ ಸಣ್ಣ ಅಂಗಡಿ ಇಟ್ಟುಕೊಂಡು ಮೀನುಗಳ ಮಾರಾಟದಿಂದ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು ಈಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳ ಆದೇಶದಿಂದ ಕಂಗಾಲಾಗಿವೆ.

ಸ್ಥಳೀಯ ಮೀನುಗಾರರ ಅಸಮಾಧಾನ..

ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಡೇಶ್ವರ ಮಾತ್ಹೋಬಾರ ಸಮುದ್ರ ತೀರದಲ್ಲಿ ನಿತ್ಯ ಮೀನುಗಳ ಮಾರಾಟದಿಂದ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಸ್ಥಳೀಯರ ಅಂಗಡಿ ತೆರವುಗೊಳಿಸಲಾಗಿದೆ. ಹೊರಗಿನವರಿಗೆ ಅಂಗಡಿಗಳನ್ನು ಇಡಲು ಅವಕಾಶ ಕಲ್ಪಿಸಲಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಒ ಈಚೆಗೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದರು. ಇದರಿಂದ ಸ್ಥಳೀಯರ ಜೀವನೋಪಾಯಕ್ಕೆ ಸಮಸ್ಯೆಯಾಗಿದ್ದರಿಂದ ಮಾನವೀಯತೆ ದೃಷ್ಟಿಯಿಂದ ಸ್ಥಳೀಯರಿಗೆ ಗೂಡಂಗಡಿ ಇಡಲು ಈಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, 94 ಗೂಡಂಗಡಿಗಳಲ್ಲಿ ಶೇ.80ರಷ್ಟು ಹೊರಗಿನ ವ್ಯಾಪಾರಿಗಳಿಗೆ ಸ್ಥಳೀಯ ವಿಳಾಸದ ಹೆಸರಲ್ಲಿ ನೀಡಲಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.

ಪಂಚಾಯತ್ ದಾಖಲೆಗಳಿದ್ದರೂ ಸಹ ನನಗೆ ಅಂಗಡಿ ಸಿಗಲಿಲ್ಲ. ನಾವು ಅಂಗಡಿಗಳನ್ನು ಇಡುತ್ತೇವೆ. ಯಾರಾದರೂ ಆಕ್ಷೇಪವೆತ್ತಿದ್ದರೆ ಅದರ ವಿರುದ್ಧ ನಾವೆಲ್ಲ ಬೀದಿಗಿಳಿಯಬೇಕಾಗುತ್ತದೆ ಎಂದು ಮೀನು ವ್ಯಾಪಾರ ನಡೆಸುವ ಮಹಿಳೆ ಮಾದೇವಿ ಕೃಷ್ಣ ಹರಿಕಾಂತ ಎಚ್ಚರಿಕೆ ನೀಡಿದರು.

Intro:ಭಟ್ಕಳ: ಮುರ್ಡೇಶ್ವರ ಮಾತ್ಹೋಬಾರ ದೇವಸ್ಥಾನದ ಗುಡ್ಡದ ಬಲ ಬದಿಯ ಸಮುದ್ರ ತೀರದಲ್ಲಿ ತಳ್ಳುಗಾಡಿ ಇಟ್ಟು ಕಳೆದ ಸುಮಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಸ್ಥಳೀಯರಿಗೆ ಅವಕಾಸ ಕಲ್ಪಿಸದೇ ಪರ ಊರಿನವರಿಗೆ ಅಂಗಡಿ ಇಡಲು ಸಹಕರಿಸಿದ್ದು, ಈ ಮೊದಲು ಇದ್ದ ಅಂಗಡಿಕಾರರಿಗೆ ಅನ್ಯಾಯ ಮಾಡಿದ ಸ್ಥಳೀಯ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಮುನ್ಸೂಚನೆ ನೀಡಿದ ಸ್ಥಳೀಯ ಗೂಡಾಂಗಡಿಕಾರರು.Body:ಭಟ್ಕಳ: ಮುರ್ಡೇಶ್ವರ ಮಾತ್ಹೋಬಾರ ದೇವಸ್ಥಾನದ ಗುಡ್ಡದ ಬಲ ಬದಿಯ ಸಮುದ್ರ ತೀರದಲ್ಲಿ ತಳ್ಳುಗಾಡಿ ಇಟ್ಟು ಕಳೆದ ಸುಮಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಸ್ಥಳೀಯರಿಗೆ ಅವಕಾಸ ಕಲ್ಪಿಸದೇ ಪರ ಊರಿನವರಿಗೆ ಅಂಗಡಿ ಇಡಲು ಸಹಕರಿಸಿದ್ದು, ಈ ಮೊದಲು ಇದ್ದ ಅಂಗಡಿಕಾರರಿಗೆ ಅನ್ಯಾಯ ಮಾಡಿದ ಸ್ಥಳೀಯ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಮುನ್ಸೂಚನೆ ನೀಡಿದ ಸ್ಥಳೀಯ ಗೂಡಾಂಗಡಿಕಾರರು.

ಮಾವಳ್ಳಿ 1 ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಡೇಶ್ವರ ಮಾತ್ಹೋಬಾರ ದೇವಸ್ಥಾನದ
ಗುಡ್ಡದ ಬಲ ಬದಿಯ ಸಮುದ್ರ ತೀರದಲ್ಲಿನ ಗೂಡಂಗಡಿಗಳನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಆದೇಶಿಸಿದ್ದು, ಅದರಂತೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದಿರುತ್ತದೆ, ನಂತರ ಇಲ್ಲಿನ ಹೈಸ್ಕೂಲ ಒಂದರಲ್ಲಿ ಸ್ಥಳೀಯರೆಲ್ಲರಿಗೂ ಕರೆಸಿ ಮಾನವೀಯತೆ ದೃಷ್ಟಿಯಿಂದ ಜೀವನೋಪಾಯಕ್ಕಾಗಿ ಸ್ಥಳೀಯರಿಗೆ ಗೂಡಾಂಗಡಿ ಇಟ್ಟೂಕೊಳ್ಳಲು ಅಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಸಭೆಯಲ್ಲಿ ಹೇಳಿದ ಹಾಗೇ ಎರಡು ಅಂಗವಿಕಲರನ್ನೂ ಹೊರತುಪಡಿಸಿ ಬೆರಳೆಣಿಕೆಷ್ಟು ಸ್ಥಳೀಯರಿಗೆ ಗೂಡಂಗಡಿ ಇಡಲು ಅವಕಾಶ ಕಲ್ಪಿಸಿಕೋಡಲಾಗಿದೆ. 94 ಗೂಡಾಂಗಡಿಗಳಲ್ಲಿ ಪ್ರತಿಶತ 80% ಗೂಡಾಂಗಡಿಗಳು ಪರ ಊರಿನವರದ್ದಾಗಿರುತ್ತದೆ. ಈ ಮೊದಲು ಇದ್ದ ಸ್ಥಳೀಯ ಗೂಡಾಂಗಡಿಕಾರರಿಗೆ ಅವಕಾಶ ನೀಡದೆ ಬೇರೆಯವರಿಗೆ ನೀಡಿರುತ್ತಾರೆ ಎಂದು ಅಲ್ಲಿನ ಸ್ಥಳೀಯರು ಸತತ ಮೂರು ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಾ ಬಂದಿರುತ್ತಾರೆ.

ಸ್ಥಳೀಯ ಮೀನುಗಾರರ ಮಹಿಳೆಯರು ಈ ಸಂಬಂಧಿತವಾಗಿ ಸಭೆ ಕರೆದು ತಮಗಾದ ನೋವನ್ನು ಮಾದ್ಯಮದ ಮೂಲಕ ಹೇಳಿಕೊಂಡು ನಮಗೆ ನ್ಯಾಯಕೊಡಿ ಎಂದು ಅಂಗಲಾಚಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗೂಡಂಗಡಿ ವಂಚಿತ ಮಹಿಳೆ ಮಾದೇವಿ ಕೃಷ್ಣ ಹರಿಕಾಂತ ಮಾತನ್ನಾಡಿದ್ದು ನಾನು ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ, ಪಂಚಾಯತ ದಾಖಲೆಗಳಿದ್ದರೂ ಸಹ ನನಗೆ ಅಂಗಡಿ ಸೀಗಲಿಲ್ಲ, ಅಂದು ಸಭೆ ನಡೆಸಿ ಮಾನವೀಯತೆ ದೃಷ್ಟಿಯಿಂದ 50 ಅಂಗಡಿಯನ್ನು ಅಲ್ಲಿನ ಸ್ಥಳೀಯರನ್ನು ಹರತುಪಡಿಸಿ ಹೊರಗಿನವರಿಗೆ ಕೊಡಬೇಡಿ ಎಂದು ಸಭೆಯಲ್ಲಿ ನಿರ್ದಾರ ಮಾಡಲಾಗಿತ್ತು. ಹೊರಗಿನವರು 60 ಜನರಿದ್ದಾರೆ, ಸ್ಥಳೀಯರು 40 ಜನರಿದ್ದಾರೆ. ಬೇರೆಯವರ ಹೆಸರನ್ನು ಬಳಸಿ ಇನ್ನೋಬ್ಬರು ತಮ್ಮ ಅಲ್ಲಿನ. ವಾಸ್ತವ್ಯ ತೋರಿಸಿ ತಾವು ಸ್ಥಳೀಯರು ಎಂದು ಅಂಗಡಿಗಳನ್ನು ಪಡೆದಿದ್ದಾರೆ.
ಇನ್ನೂ ಕೆಲವು ದಿನಗಳಲ್ಲಿ ನಾನು ಅಂಗಡಿ ಇಡಲಿದ್ದೇನೆ, ನನಗೆ ಯಾರದರೂ ತೊಂದರೆ ಕೊಟ್ಟಲ್ಲಿ, ಮೀನುಗಾರ ಮಹಿಳೆಯರೆಲ್ಲಾ ಸೇರಿ ಹೋರಾಟ ಮಾಡಲಿದ್ದೇವೆ ಎಂದರು.

ಬೈಟ್:- ಮಾದೇವಿ ಕೃಷ್ಣ ಹರಿಕಾಂತ

ತೆರವುಗೊಳಿಸುವ ಮೊದಲು ಇದ್ದ ಅಂಗಡಿಗಳ ಸುತ್ತಳತೆ ಎಷ್ಟಿದೆ, ಅಂಗಡಿಗಳ ಹೆಸರನ್ನು ತೆಗೆದುಕೊಂಡು ಹೋಗಿದ್ದರು, ಅಂದು ತೆಗೆಯುವಾಗ ಇದ್ದದ್ದು 25 ಅಂಗಡಿ, ಆದರೆ ಇಂದು 96 ಅಂಗಡಿಗಳಿವೆ ಅವು ಯಾವುದು ಇಲ್ಲಿಯ ಸ್ಥಳೀಯರದ್ದಲ್ಲಾ, ಇಲ್ಲಿನ ಹೊಸಹಿತ್ಲ ವಿಳಾಸ ನೀಡಿ  ಭಟ್ಕಳ, ಹೊನ್ನಾವರ ಕಡೆಯಲ್ಲಿನವರಿಗೆ ಅಂಗಡಿ ಇಡಲು ಅವಕಾಶ ಕಲ್ಪಿಸಲಾಗಿದ್ದು ಸ್ಥಳೀಯ ಬಡ ಮೀನುಗಾರರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಸಮುದ್ರ ತಟದಲ್ಲಿ ಎಷ್ಟೂ ಅಂಗಡಿಗಳಿವೆ ಅಷ್ಟೇ ಅಂಗಡಿಗಳನ್ನು ಸ್ಥಳೀಯರಿಗೆ ನೀಡಿ, ಒಂದು ವೇಳೆ ಮೀನುಗಾರರಿಗೆ ಅಲ್ಲಿ ಅಂಗಡಿಗಳನ್ನು ಇಡಲು ಅವಕಾಶ ನೀಡದೆ ಇದ್ದಲ್ಲಿ ನಾವು ಮುಂದೊಂದಿನ ನ್ಯಾಯಯುತ ಹೋರಾಟಕ್ಕೆ ಹೆಜ್ಜೆ ಇಡಬೇಕಾದಿತು ಎಂದು ಸ್ಥಳೀಯ ಮೀನುಗಾರ ಮಹಿಳೆಯರು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಬೈಟ್:- ಜಯಶ್ರೀ ಈಶ್ವರ ಹರಿಕಾಂತ

Conclusion:ಉದಯ ನಾಯ್ಕ.ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.