ETV Bharat / state

ಕೋವಿಡ್ ವಾರ್ಡ್ ನಿರ್ಮಿಸಿದವನಿಗೆ ಬಾರದ ಹಣ : ಗುತ್ತಿಗೆದಾರನನ್ನು ಸತಾಯಿಸುತ್ತಿರುವ ಅಧಿಕಾರಿಗಳು?

ಕ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರ ಬಳಿ ಹಣ ಬಿಡುಗಡೆ ಮಾಡಲು ವಿನಂತಿ ಮಾಡಿದರಂತೂ ತಮ್ಮಲ್ಲಿ ಹಣ ಇಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ವೈದ್ಯಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ತಿಳಿಸಿದ್ರೂ ಯಾವುದೇ ಸ್ಪಂದನೆ ದೊರಕಿಲ್ಲ..

ಮನ್ಸೂರ್
ಮನ್ಸೂರ್
author img

By

Published : Apr 30, 2021, 1:00 PM IST

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಕೋವಿಡ್ ವಾರ್ಡ್ ನಿರ್ಮಾಣ ಮಾಡಿದ ಗುತ್ತಿಗೆದಾರನಿಗೆ ಲಕ್ಷಗಟ್ಟಲೇ ಹಣ ಬಾಕಿಯಿರಿಸಿ ಸತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಒಂದು ವರ್ಷದಿಂದ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿಗೆ ಅಲೆದಾಡಿ ಸೋತಿರುವ ಗುತ್ತಿಗೆದಾರ, ಒಮ್ಮೆ ನನ್ನ ಹಣ ಬಿಡುಗಡೆ ಮಾಡಿ ಎಂದು ಗೋಗರೆಯುತ್ತಿದ್ದಾನೆ.

ಕಳೆದ ಬಾರಿ ಕೊರೊನಾ ಕಾಲಿಟ್ಟಾಗ ಜನರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಾರವಾರದ ಕ್ರೀಮ್ಸ್ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿತ್ತು.

200 ಹಾಸಿಗೆಯುಳ್ಳ ದೊಡ್ಡ ಕೋವಿಡ್ ವಾರ್ಡ್​ ನಿರ್ಮಾಣ ಮಾಡಿ ಜಿಲ್ಲಾಡಳಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಕೋವಿಡ್ ಕೇಂದ್ರ ​ ನಿರ್ಮಾಣ ಮಾಡಲು ಸೈಯದ್ ಮನ್ಸೂರ್ ಎಂಬಾತನಿಗೆ ಗುತ್ತಿದೆ ನೀಡಲಾಗಿತ್ತು.

ಗುತ್ತಿಗೆದಾರನನ್ನು ಸತಾಯಿಸುತ್ತಿರುವ ಅಧಿಕಾರಿಗಳು

ಹೈ ರಿಸ್ಕ್‌ ಇದ್ದರೂ ಮನ್ಸೂರ್ ತನ್ನ ಕಾರ್ಮಿಕರನ್ನು ಬಳಸಿಕೊಂಡು ಅಲ್ಯೂಮಿನಿಯಂ ಉಪಯೋಗಿಸಿ ಡಾಕ್ಟರ್ ಕ್ಯಾಬಿನ್, ವಿವಿಧ ವಿಭಾಗಗಳ ರೋಗಿಗಳಿಗೆ ಪಾರ್ಟಿಷನ್‌ ತಯಾರಿಸಿ ಸುಸಜ್ಜಿತ ವಾರ್ಡ್‌ಗಳನ್ನು ನಿರ್ಮಾಣ ಮಾಡಿದ್ರು.

ನಿರ್ಮಿತಿ ಕೇಂದ್ರದಡಿ ಗುತ್ತಿಗೆ ಪಡೆದು ಕೆಲಸ ಮಾಡುವುದರಿಂದ 15 ದಿನದೊಳಗೆ ಹಣ ಬರುವುದಾಗಿ ಅಧಿಕಾರಿಗಳು ನಂಬಿಸಿದ್ದರಿಂದ ಮನ್ಸೂರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸುಮಾರು 19.75 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ ನಿರ್ಮಿಸಿ ವೈದ್ಯರ ಸೇವೆಗೆ ಬಿಟ್ಟುಕೊಟ್ಟಿದ್ದರು.

ಈ ಕೆಲಸ ನಡೆಸಿ ಬರೋಬ್ಬರಿ ಒಂದು ವರ್ಷ ಕಳೆದಿದ್ರೂ ಅಧಿಕಾರಿಗಳು ಮಾತ್ರ ಈವರೆಗೆ ಹಣ ನೀಡಿಲ್ಲ ಎಂದು ಮನ್ಸೂರ್​​ ಆರೋಪಿಸಿದ್ದಾರೆ. ಈ ಸಂಬಂಧ ಸೈಯ್ಯದ್ ದೂರನ್ನು ಜಿಲ್ಲಾ ಪಂಚಾಯತ್ ಸಿಇಒ ಮುಂದಿರಿಸಿದಾಗ ಅವರು ಮತ್ತೆ ಅಧಿಕಾರಿಗಳ ಮೂಲಕ ಕೆಲಸದ ವ್ಯಾಲ್ಯುಯೇಷನ್ ನಡೆಸಿದ್ದರು.

ಆಗ ಗುತ್ತಿಗೆದಾರ ಸೈಯ್ಯದ್ ಪ್ರಸ್ತುತ ದರಕ್ಕನುಗುಣವಾಗಿ 20.26 ಲಕ್ಷ ರೂ.ನಷ್ಟು ವೆಚ್ಚದ ಕೆಲಸ ನಡೆಸಿದ್ದಾರೆಂದು ಸಾಭೀತಾಗಿದೆ. ಅಲ್ಲದೇ, ಅವರಿಗೆ 19.75 ಲಕ್ಷ ರೂ. ನೀಡಲು ಯಾವುದೇ ಅಭ್ಯಂತರವಿಲ್ಲ ಎಂಬ ವರದಿಯನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರ ಬಳಿ ಹಣ ಬಿಡುಗಡೆ ಮಾಡಲು ವಿನಂತಿ ಮಾಡಿದರಂತೂ ತಮ್ಮಲ್ಲಿ ಹಣ ಇಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ವೈದ್ಯಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ತಿಳಿಸಿದ್ರೂ ಯಾವುದೇ ಸ್ಪಂದನೆ ದೊರಕಿಲ್ಲ.

ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ವಿಚಾರ ಸರಿಯಾಗಿ ನನ್ನ ಗಮನಕ್ಕೆ ಬಂದಿಲ್ಲ. ಶೀಘ್ರದಲ್ಲಿ ಹಣ ಬಿಡುಗಡೆ ಮಾಡಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.