ETV Bharat / state

ಯಾರದ್ದೊ ತಪ್ಪು, ಇನ್ಯಾರಿಗೋ ಶಿಕ್ಷೆ, ನೀರು ತುಂಬಿ ನಾಟಿ ಮಾಡಬೇಕಿದ್ದ ಪೈರು ನಾಶ! - ನೀರು

ಕಾರವಾರದಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಲ್ಲೋ ರ್ವ ತನ್ನ ಉದ್ಯಮಕೋಸ್ಕರ ಹರಿವ ನೀರನ್ನೆ ಹಿಡಿದು ನಿಲ್ಲಿಸಿದ್ದಾನೆ. ಪರಿಣಾಮ ನೂರಾರು ಎಕರೆ ಭೂಮಿಯಲ್ಲಿ ನೀರು ತುಂಬಿ ನಾಟಿಗೆ ಬಂದಿದ್ದ ಭತ್ತದ ಸಸಿ ಕೊಳೆತು ನಾಶವಾಗುವಂತಾಗಿದೆ.

ಕಾರವಾರ
author img

By

Published : Jul 3, 2019, 4:15 AM IST

ಕಾರವಾರ: ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಲ್ಲೊರ್ವ ತನ್ನ ಉದ್ಯಮಕೋಸ್ಕರ ಹರಿವ ನೀರನ್ನೆ ಹಿಡಿದು ನಿಲ್ಲಿಸಿದ್ದಾನೆ. ಪರಿಣಾಮ ನೂರಾರು ಎಕರೆ ಭೂಮಿಯಲ್ಲಿ ನೀರು ತುಂಬಿ ನಾಟಿಗೆ ಬಂದಿದ್ದ ಭತ್ತದ ಪೈರು ಕೊಳೆತು ನಾಶವಾಗುವಂತಾಗಿದೆ.

ಕಾರವಾರ

ಹೌದು, ಕಾರವಾರ ತಾಲೂಕಿನ ಚಿತ್ತಾಕುಲ ಪಂಚಾಯತಿ ವ್ಯಾಪ್ತಿಯ ಕಣಸಗಿರಿಯಲ್ಲಿ ಈ ಘಟನೆ ನಡೆದಿದ್ದು,ರೈತರು ಕಂಗಾಲಾಗಿದ್ದಾರೆ. ಕೆಲ ದಿನಗಳಲ್ಲಿಯೇ ನಾಟಿ ಮಾಡಬೇಕಿದ್ದ ಭತ್ತದ ಪೈರು ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದ್ದು, ರೈತರು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕಣಸಗಿರಿಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಮಳೆಗಾಲ ಆರಂಭವಾಗುತ್ತಿದ್ದಂತೆ ನೀರು ತುಂಬುತ್ತಿದ್ದು, ಬೆಳೆದ ಬೆಳೆ ಮಣ್ಣುಪಾಲಾಗುತ್ತಿದೆ. ಇದೆ ಪ್ರದೇಶದಲ್ಲಿ ಮೀನು ಸಾಕಾಣಿಕೆ ನಡೆಸುತ್ತಿರುವ ಸುಧಾಕರ್ ದುರ್ಗೇಕರ್ ಎಂಬುವವರು ಮಳೆನೀರು ನದಿಗೆ ಹರಿದು ಹೋಗಲು ಬಿಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಈತ ಮೀನುಸಾಕಾಣಿಕೆಗಾಗಿ ನೀರನ್ನು ಶೇಖರಣೆ ಮಾಡುತ್ತಿದ್ದು,ಆ ನೀರು ಸುತ್ತಮುತ್ತಲಿನ ಭಾಗದ ಕೃಷಿ ಭೂಮಿಗಳಿಗೆ ನುಗುತ್ತಿದೆ. ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣಕ್ಕೆ ಸುತ್ತುಮುತ್ತಲಿನ ಭಾಗದ ರೈತರು ಭೂಮಿಯನ್ನು ಪಾಳು ಬಿಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ನಮ್ಮ ಸಮಸ್ಯೆಯನ್ನು ಸರಿಪಡಿಸಬೇಕು ಅಂತಾರೆ ರೈತರು.

Intro:ಯಾರದ್ದೊ ತಪ್ಪು ಇನ್ಯಾರಿಗೋ ಶಿಕ್ಷೆ... ನಾಟಿ ಮಾಡಬೇಕಿದ್ದ ಸಸಿ ನೀರು ತುಂಬಿ ನಾಶ!
ಕಾರವಾರ: ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಲ್ಲೊರ್ವ ತನ್ನ ಉದ್ಯಮಕ್ಕೊಸ್ಕರ ಹರಿವ ನೀರನ್ನೆ ಹಿಡಿದು ನಿಲ್ಲಿಸಿದ್ದು, ಪರಿಣಾಮ ನೂರಾರು ಎಕರೆ ಭೂಮಿಯಲ್ಲಿ ನೀರು ತುಂಬಿ ನಾಟಿಗೆ ಬಂದಿದ್ದ ಭತ್ತದ ಸಸಿ ಕೊಳೆತು ನಾಶವಾಗುವಂತಾಗಿದೆ.
ಹೌದು, ಕಾರವಾರ ತಾಲ್ಲೂಕಿನ ಚಿತ್ತಾಕುಲ ಪಂಚಾಯತಿ ವ್ಯಾಪ್ತಿಯ ಕಣಸಗಿರಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಇದೀಗ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಇನ್ನೆನು ಕೆಲ ದಿನಗಳಲ್ಲಿಯೇ ನಾಟಿ ಮಾಡಬೇಕಿದ್ದ ಸಸಿ ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದ್ದು, ಮುಂದೇನು ಎಂಬ ಚಿಂತೆ ಇದೀಗ ಇಲ್ಲಿನ ರೈತರನ್ನು ಕಾಡತೊಡಗಿದೆ.
ಕಾರವಾರ ತಾಲ್ಲೂಕಿನಾದ್ಯಂತ ಸಾವಿರಾರು ಎಕರೆ ಕೃಷಿ ಭೂಮಿ ಪಾಳು ಬಿದ್ದಿದೆ. ಉಪ್ಪುನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಯಲ್ಲಿ ನಿರಾಶಕ್ತಿ ಕಾರಣವಾಗಿದೆ. ಆದರೆ ಕಣಸಗಿರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಕೆಲ ರೈತರು ಕೃಷಿ ಚಟುವಟಿಕೆಯನ್ನು ಮುಂದುವರಿಸಿದ್ದು, ಪ್ರತಿ ವರ್ಷ ಒಂದು ಇಲ್ಲವೇ ಎರಡು ಬೆಳೆ ತೆಗೆಯುತ್ತಾರೆ.
ಆದರೆ ಕಣಸಗಿರಿಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ನೀರು ತುಂಬುತ್ತಿದ್ದು, ಮಾಡಿದ ಕೃಷಿ ಪ್ರತಿ ಬಾರಿ ಮಣ್ಣುಪಾಲಾಗುತ್ತಿದೆ. ಇದೆ ಪ್ರದೇಶದಲ್ಲಿ ಮೀನುಸಾಕಾಣಿಕೆ ನಡೆಸುತ್ತಿರುವ ಸುಧಾಕರ್ ದುರ್ಗೇಕರ್ ಎಂಬುವವರು ಮಳೆನೀರು ನದಿಗೆ ಹರಿದು ಹೋಗಲು ಬಿಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ಈತ ಮೀನುಸಾಕಾಣಿಕೆಗಾಗಿ ಬಾಂದರು ಬಳಿ ಗೇಟ್ ತೆರವುಗೊಳಿಸದೇ ನೀರು ಶೇಕರಣೆ ಮಾಡುತ್ತಿದ್ದು, ಇದು ಸುತ್ತಮುತ್ತಲಿನ ಭಾಗದ ಕೃಷಿ ಭೂಮಿಗಳಿಗೆ ನುಗುತ್ತಿದೆ. ಈ ಭಾರಿ ಕೂಡ ಕಳೆದ ಕೆಲ ದಿನಗಳ ಹಿಂದೆ ಹಾಕಿದ್ದ ಅಗೆ ಗದ್ದೆಗಳಿಗೆ ನೀರು ತುಂಬಿದ ಕಾರಣ ಬೆಳೆದು ನಿಂತಿದ್ದ ಭತ್ತದ ಸಸಿಗಳು ಸಂಪೂರ್ಣ ಕೊಳೆತು ನಾಶವಾಗಿದ್ದು, ಇಲ್ಲಿನ ರೈತರು ಇದೀಗ ಕಂಗಾಲಾಗಿದ್ದಾರೆ.
ಎರಡ್ಮೂರು ವೃಷಗಳಿಂದ ಉದ್ಬವಿಸಿದ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣಕ್ಕೆ ಸುತ್ತುಮುತ್ತಲಿನ ಭಾಗದ ರೈತರು ಭೂಮಿಯನ್ನು ಪಾಳುಬಿಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚುತ್ತುಕೊಂಡು ಕೃಷಿ ಮಾಡುವ ರೈತರಿಗಾದರು ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಗ್ರಾಮದ ರೈತ ಉದಯ ಗಂಗಾಧರ ನಾಯ್ಕ.
ಮೀನುಸಾಕಾಣಿಕೆಯ ಸ್ವಾರ್ಥಕ್ಕಾಗಿ ನಮ್ಮ ಕೃಷಿ ಭೂಮಿ ಜಾಳುಗೆಡವಲಾಗುತ್ತಿದೆ. ಅಲ್ಲದೆ ನೀರು ಮನೆಗಳಿಗೂ ನುಗ್ಗುತ್ತಿದ್ದು, ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಆತನಿಗೆ ಹೇಳಿದರೇ ಬೇದರಿಕೆಯೊಡ್ಡುತ್ತಾನೆ. ನದಿಯಿಂದ ಬರುವ ಉಪ್ಪುನೀರಿಗಾಗಿ ಈ ರಿತಿ ಮಾಡುತ್ತಿದ್ದು, ಕೆಳಗಡೆ ಇರುವ ಬಾಂದಾರ್ ಗೇಟ್ ತೆಗೆದರೆ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರು ಮುತುವರ್ಜಿ ವಹಿಸಿ ಸಮಸ್ಯೆ ಬಗಿಹರಿಸಬೇಕು ಎನ್ನುತ್ತಾರೆ ಗ್ರಾಮದ ಮಹಿಳೆ ಅಮಿಶಾ ಮಾಳ್ವೇಕರ್.
ಇನ್ನು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ ರಾಜೇಶ ನಾಯ್ಕ ಬಳಿ ಕೇಳಿದಾಗ ಸಮಸ್ಯೆ ಗ್ರಾಮಸ್ಥರು ದೂರು ನೀಡಿದ್ದು, ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈಗಾಗಲೇ ಸಂಬಂಧಪಟ್ಟವರಿಗೆ ತಿಳಿಸಿದ್ದು, ಅವರು ಸರಿಪಡಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನಕ್ಕೂ ತಂದಿರುವುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಕಾರವಾರದಂತ ತಾಲ್ಲೂಕಿನಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೃಷಿ ಮಾಡುವವರಿಗೆ ಪ್ರೋತ್ಸಾಹ ಮಾಡಬೇಕಿದ್ದವರು ಈ ರಿತಿ ಸಮಸ್ಯೆ ಎಂದೂ ದೂರಿದಾಗಲು ಕಣ್ಮುಚ್ಚಿಕುಳಿತಿರುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಿ ಕೃಷಿಕರನ್ನು ಕೃಷಿಚಟುವಟಿಕೆಯಲ್ಲಿ ಪ್ರೋತ್ಸಾಹಿಸಬೇಕಿದೆ.

ಬೈಟ್ ೧ ಉದಯ ಗಂಗಾಧರ ನಾಯ್ಕ, ರೈತ
ಬೈಟ್ ೨ ಅಮಿಶಾ ಮಾಳ್ವೇಕರ್, ಗ್ರಾಮದ ಮಹಿಳೆ
ಬೈಟ್ ೩ ರಾಜೇಶ ನಾಯ್ಕ, ಗ್ರಾ.ಪಂ ಪಿಡಿಓ

Body:ಕ

Conclusion:ಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.