ಕಾರವಾರ: ಕೋವಿಡ್ ಪರೀಕ್ಷೆ ಮಾಡೋದನ್ನೇ ಕಾರವಾರ ಜಿಲ್ಲಾಡಳಿತ ನಿಲ್ಲಿಸಿಬಿಟ್ಟಿದೆ ಎನ್ನುವ ಆರೋಪಗಳು ಕೇಳಿಬಂದಿದೆ.
ಕೋವಿಡ್ ಎರಡನೇ ಅಲೆ ಉತ್ತರಕನ್ನಡದಲ್ಲೂ ಜೋರಾಗಿದೆ. ನಿತ್ಯ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ ಸಾವಿರದ ಗಡಿ ಸಮೀಪಿಸಿತ್ತು. ಇನ್ನೊಂದೆಡೆ ಸಾವಿನ ಸಂಖ್ಯೆ ಸಹ ಎಗ್ಗಿಲ್ಲದೇ ಏರಿದೆ.
ಇದನ್ನೂ ಓದಿ: ಅಥಣಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು: ಇನ್ನೂ ತಾಲೂಕಿನ ಕಡೆ ಮುಖ ಮಾಡದ ಜನಪ್ರತಿನಿಧಿಗಳು!
ಈ ನಡುವೆ ಜಿಲ್ಲಾಡಳಿತ ಕೋವಿಡ್ ತಪಾಸಣೆ ಮಾಡೋದನ್ನೇ ನಿಲ್ಲಿಸಿಬಿಟ್ಟಿದೆ. ಇದರಿಂದಾಗಿ ಜನರು ಪರದಾಡುವಂತಾಗಿದ್ದು, ಒಮ್ಮೆಲೆ ಕೋವಿಡ್ ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.