ಭಟ್ಕಳ: ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಎರಡ್ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿದ್ದವು. ಆದರೆ, ಇಂದು ಒಂದೇ ದಿನ 20 ಪ್ರಕರಣ ಪತ್ತೆಯಾಗಿವೆ.
ತಾಲೂಕಿನ 61, 65, 70, 85 ವರ್ಷದ ವೃದ್ಧ ವ್ಯಕ್ತಿಗಳು 32, 39, 55, 56, ವರ್ಷದ ಪುರುಷ ಹಾಗೂ 48 ವರ್ಷದ ಮಹಿಳೆ 3, 8 ವರ್ಷದ ಗಂಡು ಮಕ್ಕಳು, 29, 29 ವರ್ಷದ ಯುವಕರು ಹಾಗೂ 15,19 ವರ್ಷ ಬಾಲಕಿಯರು ಹಾಗೂ ಮುರುಡೇಶ್ವರದ 28, 29 ವರ್ಷದ ಯುವಕರು, ಬೈಲೂರಿನ 19ರ ಯುವಕ ಹಾಗೂ 39 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿದೆ.
ತಾಲೂಕಿನ ದೇವಸ್ಥಾನವೊಂದರ 43 ವರ್ಷದ ಅರ್ಚಕರಿಗೂ ಸೋಂಕು ಪತ್ತೆಯಾಗಿದೆ.