ETV Bharat / state

ವಾರದ ಹಿಂದೆ ಮದುವೆಯಾಗಿ ನಿನ್ನೆ ಮೃತಪಟ್ಟಿದ್ದ ನವ ವಿವಾಹಿತನಿಗಿತ್ತು ಸೋಂಕು

ಆತ ವಾರದ ಹಿಂದಷ್ಟೇ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ. ಆದ್ರೆ ಮಹಾಮಾರಿ ಕೊರೊನಾ ಆತನ ಜೀವನವನ್ನು ಬಲಿ ಪಡೆದುಕೊಂಡಿದೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದಿದೆ.

corona confirm, corona confirm on dead man, corona confirm on dead man in Uttar Kannada, uttar kannada corona news, ಕೊರೊನಾ ದೃಢ, ಮೃತ ವ್ಯಕ್ತಿಗೆ ಕೊರೊನಾ ದೃಢ, ಉತ್ತರಕನ್ನಡದಲ್ಲಿ ಮೃತ ವ್ಯಕ್ತಿಗೆ ಕೊರೊನಾ ದೃಢ, ಉತ್ತರ ಕನ್ನಡ ಕೊರೊನಾ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Jul 1, 2020, 3:04 PM IST

ಭಟ್ಕಳ (ಉತ್ತರ ಕನ್ನಡ): ಹೊಸ ಬಾಳಿಗೆ ಕಾಲಿಟ್ಟು ವಾರ ಕಳೆದಿಲ್ಲ. ಅಷ್ಟರಲ್ಲಿಯೇ ಆತನ ಬಾಳನ್ನು ಕೊರೊನಾ ಬಲಿ ಪಡೆದಿದೆ.

ಜೂನ್​ 25ರಂದು ಯುವಕನೊಬ್ಬ ಗೃಹಸ್ಥ ಜೀವನಕ್ಕೆ ಕಾಲಿಟ್ಟಿದ್ದ. ದುರಾದೃಷ್ಟವಶಾತ್ ನಿನ್ನೆ ಬೆಳಗ್ಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಈಗ ಆ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರ ಬಗ್ಗೆ ವರದಿ ಬಂದಿದೆ.

ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಈತ ವಾರದ ಹಿಂದೆ ಭಟ್ಕಳಕ್ಕೆ ಬಂದಿದ್ದನಂತೆ. ಮದುವೆಯ ಕಾರಣಕ್ಕೆ ನಾಲ್ಕೈದು ದಿನ ಭಟ್ಕಳದಲ್ಲಿದ್ದು, ಬಳಿಕ ಮಂಗಳೂರಿಗೆ ತೆರಳಿದ್ದಾನೆ.

ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಈತನ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ವೈದ್ಯಕೀಯ ಕಾರಣಕ್ಕಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಟ್ಕಳ ಮೂಲದ ವೃದ್ಧರೊಬ್ಬರಿಗೂ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ ಅನೇಕರಿಗೂ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.