ETV Bharat / state

ರಾಜ್ಯದಲ್ಲಿ ಕಾಂಗ್ರೆಸ್ ಬರುವುದು ಗ್ಯಾರಂಟಿ ಇಲ್ಲ, ಇದರಿಂದ ಜನರಿಗೆ ಗ್ಯಾರಂಟಿ ಕಾರ್ಡ್​ ವಿತರಣೆ - ನಳಿನ್ ಕುಮಾರ ಕಟೀಲ್

ಸಿದ್ದರಾಮಯ್ಯನಿಗೆ ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಭಯವಾಗುತ್ತಿದೆ. ಬಾದಾಮಿಯಿಂದ ಸ್ಪರ್ಧಿಸಲು ಮನಸ್ಸು ಒಪ್ಪುತ್ತಿಲ್ಲ. ಕೋಲಾರದಿಂದ ಸ್ಪರ್ಧಿಸಿದರೆ ಸೋಲು ಖಚಿತ. ಹೀಗಾಗಿ ಮಾಜಿ ಮುಖ್ಯಮಂತ್ರಿಗೆ ಕ್ಷೇತ್ರವಿಲ್ಲದ ಹೀನಾಯ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್ ಕುಮಾರ ಕಟೀಲ್ ವ್ಯಂಗ್ಯವಾಡಿದ್ದಾರೆ.

BJP state president Naleel Kumar Kateel spoke at the press conference.
ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್ ಕುಮಾರ ಕಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Mar 21, 2023, 8:09 PM IST

Updated : Mar 22, 2023, 6:20 AM IST

ಭಟ್ಕಳ(ಉತ್ತರ ಕನ್ನಡ): ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ಕೈಗೊಂಡ ವಿಜಯ ಸಂಕಲ್ಪ ಯಾತ್ರೆಯು ಅಭೂತಪೂರ್ವ ಯಶಸ್ಸು ಕಂಡಿದೆ. ಜನರಲ್ಲಿ ಸಾಮಾಜಿಕ ನ್ಯಾಯದ ಭದ್ರತೆ ಜತೆಗೆ ದೇಶದ ಭದ್ರತೆಯ ದೃಷ್ಟಿಯಿಂದ ಪಿಎಫ್​ಐ ಸಂಘಟನೆ ನಿಷೇಧ ಬಳಿಕ ಸಹ ಬಿಜೆಪಿ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ ಕಟೀಲ್ ಹೇಳಿದರು.

ಇಲ್ಲಿನ ಚನ್ನಪಟ್ಟಣ ಹನುಮಂತ ದೇವಸ್ಥಾನದ ಶ್ರೀ ವೀರಾಂಜನೇಯ ಧರ್ಮಛತ್ರದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ, ಸಂಕಲ್ಪ ಅಭಿಯಾನ ಈಗ ದೊಡ್ಡ ಮಟ್ಟದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಸದ್ಯ ಆರಂಭಿಸಿದ್ದೇವೆ. ಮಾರ್ಚ್​ 25ಕ್ಕೆ ದಾವಣಗೆರೆಯಲ್ಲಿ ಮಹಾಸಂಕಲ್ಪದೊಂದಿಗೆ ಸಮಾರೋಪ ಆಗಲಿದೆ ಎಂದು ತಿಳಿಸಿದರು.

ಈ ಯಾತ್ರೆಗೆ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಸತತ ಸಮಾವೇಶ ಆಗುತ್ತಿದ್ದಂತೆ ಕಾಂಗ್ರೆಸ್​ದಿಂದ ಪ್ರಜಾ ಧ್ವನಿ ಹಾಗೂ ಜೆಡಿಎಸ್ ಯಿಂದ ಪಂಚ ರತ್ನ ಯಾತ್ರೆಯ ಅಬ್ಬರ ಅಡಗಿ ಹೋಗಿದೆ. ಸದ್ಯಕ್ಕೆ ಜನಮಾನಸದಲ್ಲಿ ನಮ್ಮ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಮಾತ್ರ ಶಾಶ್ವತವಾಗಿದೆ. ಇವೆಲ್ಲದ ಫಲವಾಗಿ ನಮ್ಮ ಪಕ್ಷವು ಮತ್ತೆ ರಾಜ್ಯದಲ್ಲಿ ಗೆದ್ದು ಮತ್ತೊಮ್ಮೆ ಡಬಲ್ ಎಂಜಿನ ಸರ್ಕಾರ ಬರಲಿದೆ. ಸರ್ಕಾರದ ಯೋಜನೆಗಳು ಜನರ ಮನೆಗೆ ತಲುಪಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಣ್ಣ ಕಂಗಾಲು- ಕಟೀಲ್​: ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಣ್ಣನಿಗೆ ಯಾವ ಕ್ಷೇತ್ರದಿಂದ ನಿಲ್ಲಬೇಕೆಂಬ ಗೊಂದಲದ ಜತೆಗೆ ಭಯ ಕಾಡುತ್ತಿದೆ. ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಭಯ, ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮನಸ್ಸು ಒಪ್ಪುತ್ತಿಲ್ಲ, ಕೋಲಾರದಿಂದ ಸ್ಪರ್ಧೆ ಮಾಡಿದರೆ ಸೋಲು ಖಚಿತ ಎಂಬ ವರದಿ ಕೇಳಿ ಕಂಗಾಲಾಗಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಣ್ಣ ಕ್ಷೇತ್ರವಿಲ್ಲ, ಕಾಂಗ್ರೆಸ್​ ಸಹ ಹೀನಾಯ ಸ್ಥಿತಿಗೆ ಬಂದಿದೆ ಎಂದು ಅಪಾದಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಕ್ಷೇತ್ರ ಯಾವುದೇ ಎಂಬ ಭಯದಲ್ಲಿಯೇ ಲೆಕ್ಕಾಚಾರ ಹಾಕಿ ಕ್ಷೇತ್ರ ಆಯ್ದುಕೊಳ್ಳುವ ನತದೃ ಷ್ಟ ನಾಯಕರು ಕಾಂಗ್ರೆಸ್ನಲ್ಲಿದ್ದಾರೆ. ಅವರಲ್ಲಿನ ಆಂತರಿಕ ಕಲಹ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ. ಮುಖ್ಯಮಂತ್ರಿಗಳ ಸ್ಥಾನಕ್ಕೆ ಸದ್ಯ ಅವರ ಪಕ್ಷದಲ್ಲಿ ಮುಖಂಡರಲ್ಲಿಯೇ ಹೊಡೆದಾಟ ಆರಂಭವಾಗಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಲು ಶರ್ಟ್​ ಹೊಲಿಸಿದ್ದಾರೆ.

ಆದರೂ ಅದು ಅವರು ಇನ್ನು ಮುಖ್ಯಮಂತ್ರಿ ಆಗುವ ಮರುಳಿನಲ್ಲಿದ್ದಾರೆ. ಅವರ ಸರ್ಕಾರ ಗ್ಯಾರಂಟಿ ಬರುವುದಿಲ್ಲ ಎಂಬ ಹಿನ್ನೆಲೆ ಜನರಿಗೆ ಗ್ಯಾರಂಟಿ ಕಾರ್ಡ್​ ನೀಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಮರೆಯಾಗುತ್ತಿದ್ದು, ಸದ್ಯದಲ್ಲೇ ಕಾಂಗ್ರೆಸ್ ಮುಕ್ತ ರಾಜ್ಯ ಆಗಲಿದೆ ಎಂದು ಟೀಕಿಸಿದರು. ಇದೇ ವೇಳೆ ಜೆಡಿಎಸ್​ ಪಂಚರತ್ನ ಯಾತ್ರೆ ಪಂಕ್ಚರ್​ ಆಗಿದೆ. ಹೀಗಾಗಿ ‌ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರ ಕುಟುಂಬದಲ್ಲಿಯೇ ಸಮಸ್ಯೆ ಎದುರಾಗಿದೆ ಎಂದು ವ್ಯಂಗ್ಯವಾಗಿ ಕುಟುಕಿದರು.

ಟಿಕೆಟ್ ಹಂಚಿಕೆ ಬಿಜೆಪಿ ಪಕ್ಷದ ನಿರ್ಧಾರ ಹೊರತು ಸಂಘ ಪರಿವಾರ ಆಲ್ಲ: ಸಂಘ ಪರಿವಾರದವರಿಗೆ ಟಿಕೆಟ್ ನೀಡಬೇಕೆಂಬುದು ರಾಜಕೀಯ ಪಕ್ಷದ ನಿರ್ಧಾರ ಹೊರತು ಸಂಘ ಪರಿವಾರದವರದಲ್ಲ. ರಾಜ್ಯದ ಕರಾವಳಿ ಭಾಗಗಳಲ್ಲಿ ಕಾಂಗ್ರೆಸ್ ಮುಕ್ತ ಕರಾವಳಿ ಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಭಟ್ಕಳದ ಶಾಸಕ ಸುನೀಲ ನಾಯ್ಕ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎನ್ನುವ ಮಾಜಿ ಯುವ ಮೋರ್ಚಾ ಅಧ್ಯಕ್ಷ ಶಂಕರ ನಾಯ್ಕ ಆರೋಪಕ್ಕೆ ಉತ್ತರಿಸಿ ಕಟೀಲ್, ಹೊರಗೆ ನಿಂತವರಿಗೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಮಾಜಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಹಾಗೂ ಸಾಮಾನ್ಯ ಕಾರ್ಯಕರ್ತನಿಂದ ರಾಜೀನಾಮೆ ನೀಡಿದ ಮೇಲೆ ಬಿಜೆಪಿಯ ಬಗ್ಗೆ ಅಥವಾ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮೋಗೇರ ಸಮುದಾಯದ ವಿಚಾರದಲ್ಲಿ ಸಾಂವಿಧಾನಿಕ ಚರ್ಚೆ: ಮೋಗೇರ ಸಮುದಾಯದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಸಾಂವಿಧಾನಿಕ ಚರ್ಚೆ ಹಾಗೂ ಸಭೆ ನಡೆದಿದ್ದು, ಈಗಾಗಲೇ 4 ಸಭೆ ನಡೆದಿದೆ. ಇನ್ನು ಕೆಲವು ಹಂತದಲ್ಲಿ ಸಮುದಾಯದೊಂದಿಗೆ ಸಂಬಂಧಿಸಿದ ಚರ್ಚೆಗಳು ನಡೆಯುವುದರ ಬಗ್ಗೆ ಸಚಿವರು ಹಾಗೂ ಸರಕಾರ ಅತ್ತ ಗಮನ ಹರಿಸಲಿದೆ. ಜೊತೆಗೆ ಈ ಬಾರಿ ಟಿಕೆಟ್ ವಿಚಾರದಲ್ಲಿ ಮಾನದಂಡದ ಅಳತೆಯೆಲ್ಲವು ಪಕ್ಷದ ಹೈಕಮಾಂಡ್​ ನಿರ್ಧರಿಸಲಿದೆ ಎಂದರು.

ಉರಿಗೌಡ ನಂಜೇಗೌಡ ಸತ್ಯಾಸತ್ಯತೆ ಹೊರಬರಲಿ: ಉರಿಗೌಡ, ನಂಜೇಗೌಡ ವಿವಾದ ವಿಚಾರ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ ಸರಕಾರ ಹತ್ತಾರು ಇತಿಹಾಸ ತಿರುಚಿದೆ. ಉರಿಗೌಡ, ನಂಜೇಗೌಡರ ವಿಚಾರದಲ್ಲೂ ನಡೆದಿರಬಹುದು. ಈ ಬಗ್ಗೆ ಹೇಳಿಕೆ ನೀಡಲು ನಾನು ಇತಿಹಾಸ ತಜ್ಞನಲ್ಲ. ಇತಿಹಾಸದ ವಿಚಾರದ ಬಗ್ಗೆ ಚರ್ಚೆಗಳಾಗಲೀ, ಸತ್ಯಾಸತ್ಯತೆಗಳು ಹೊರಗೆ ಬರಲಿ ಎಂದರು.

ಕೊನೆ ಗಳಿಗೆಯಲ್ಲಿ ಅಭಿವೃದ್ಧಿ: ಚುನಾವಣೆಯ ಕೊನೆಯಗಳಿಗಯಲ್ಲೂ ಬಿಜೆಪಿಯಿಂದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ಧಿ ಮಾಡಲಾಗ್ತಿಲ್ಲ, ಈ ಹಿಂದಿನಿಂದಲೂ ಬಿಜೆಪಿ ಅಭಿವೃದ್ಧಿ ಮಾಡಲಾಗುತ್ತಿದೆ. ಸರ್ಕಾರ ಈ ಹಿಂದೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದಿಂದ ಅನುದಾನ ಬಿಡುಗಡೆ ಹಿನ್ನೆಲೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗ್ತಿದೆ ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಇದ್ದರು.

Last Updated : Mar 22, 2023, 6:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.