ETV Bharat / state

ನಾಣ್ಯ, ಅಂಚೆ ಚೀಟಿ ಸಂಗ್ರಹಿಸುವ ಕೃಷಿಕನ ಹವ್ಯಾಸ: ಗಮನ ಸೆಳೆದ ಚೋಳರ, ಗಂಗರ ಗತಕಾಲದ ನಾಣ್ಯಗಳು!

ಭಾರತೀಯ ನಾಣ್ಯದ ಜೊತೆಗೆ ದೇಶ ವಿದೇಶದ ನಾಣ್ಯಗಳೂ ಇವರ ಬಳಿ ಇವೆ. 5, 6ನೇ ಜಾರ್ಜ್ ಕಿಂಗ್ ಕಾಲದ ನಾಣ್ಯಗಳು, ವಿಕ್ಟೋರಿಯಾದ 1900ನೇ ಇಸ್ವಿಯ ನಾಣ್ಯ, ಅಮೆರಿಕನ್ ಡಾಲರ್, ಜಪಾನ್, ಜರ್ಮನಿ, ನೈಜೀರಿಯಾ, ಸಿಂಗಾಪುರ್ ಹೀಗೆ ನೂರಾರು ದೇಶಗಳ ನಾಣ್ಯಗಳನ್ನು ಇವರು ಕಾಪಿಟ್ಟುಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Chidananda Hegade
ಚಿದಾನಂದ ಹೆಗಡೆ
author img

By

Published : Dec 13, 2022, 2:14 PM IST

Updated : Dec 13, 2022, 5:16 PM IST

ಚಿದಾನಂದ ಹೆಗಡೆ

ಕಾರವಾರ: ನಿತ್ಯದ ಕೆಲಸ ಕಾರ್ಯಗಳ ನಡುವೆಯೂ ಬಹುತೇಕ ವ್ಯಕ್ತಿಗಳು ಒಂದಲ್ಲ ಒಂದು ಹವ್ಯಾಸದಲ್ಲಿ ತೊಡಗಿಕ್ಕೊಳ್ಳುತ್ತಾರೆ. ಕೆಲವರು ಉತ್ತಮ ಹವ್ಯಾಸಗಳ ಮೂಲಕ ಗುರುತಿಸಿಕೊಂಡರೇ ಇನ್ನು ಕೆಲವರು ಕೆಟ್ಟ ಹವ್ಯಾಸಗಳಲ್ಲಿಯೂ ತಲ್ಲೀನರಾಗುತ್ತಾರೆ. ಆದರೆ ಇಲ್ಲೋರ್ವ ಕೃಷಿಕರು ಬಾಲ್ಯದಿಂದಲೇ ನಾಣ್ಯ ಹಾಗೂ ಅಂಚೆ ಚೀಟಿಗಳ ಸಂಗ್ರಹಕ್ಕೆ ಬಿದ್ದು ಚೋಳರ, ಗಂಗರ ಗತಕಾಲದ ನಾಣ್ಯಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರದರ್ಶನ ನೀಡುತ್ತಿದ್ದಾರೆ.

ಹೌದು ಹವ್ಯಾಸವೇ ಹಾಗೆ ಒಬ್ಬೊಬ್ಬರಲ್ಲೂ ವಿಭಿನ್ನ ವಾಗಿರುತ್ತದೆ. ಸಾಹಿತ್ಯ, ಛಾಯಾಗ್ರಹಣ, ಕಲೆ, ರಂಗಭೂಮಿ ಹೀಗೆ ತಮ್ಮದೇ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲ್ಲಬ್ಬೆಯ ಕೃಷಿಕ ಚಿದಾನಂದ ಹೆಗಡೆ ಅವರು ಗತಕಾಲದಿಂದ ಹಿಡಿದು ಪ್ರಸ್ತುತವರೆಗಿನ ಸಾವಿರಾರು ನಾಣ್ಯಗಳ ಸಂಗ್ರಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಶಾಲಾ ದಿನಗಳಲ್ಲಿ ಸ್ಕೌಟ್ಸ್ ಗೈಡ್ಸ್​ ಕ್ಯಾಂಪ್ ನಲ್ಲಿ ವಿದ್ಯಾರ್ಥಿಯೋರ್ವ ಬೆಳ್ಳಿ ನಾಣ್ಯ ಮುಟ್ಟಲು ಬಿಡದಿರುವುದನ್ನೇ ಛಲವಾಗಿ ಸ್ವೀಕರಿಸಿದ ಚಿದಾನಂದ ಹೆಗಡೆ ಇದೀಗ ಹಳೆಕಾಲದ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿದಂತೆ ಹಳೆ ಕಾಲದ ನಾಣ್ಯಗಳ ಕಣಜವನ್ನೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಕ್ರಿಸ್ತ ಶಕ 950 ರ ಚೋಳರ ಕಾಲದ ಚಿನ್ನದ ಕಿರು ನಾಣ್ಯದಿಂದ ಹಿಡಿದು ವಿಜಯನಗರದ ಕಾಲದ ವರಹಗಳು, ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆ ಮಾಡಿದ್ದ ನಾಣ್ಯಗಳು, ಪೈಸೆಗಳೂ ಇವರ ಬಳಿ ಇವೆ.

ದೇಶ ವಿದೇಶಗಳ ನಾಣ್ಯಗಳೂ ಇಲ್ಲುಂಟು: ಭಾರತೀಯ ನಾಣ್ಯದ ಜೊತೆಗೆ ದೇಶ-ವಿದೇಶದ ನಾಣ್ಯಗಳೂ ಇವರ ಬಳಿ ಇವೆ. 5, 6ನೇ ಜಾರ್ಜ್ ಕಿಂಗ್ ಕಾಲದ ನಾಣ್ಯಗಳು, ವಿಕ್ಟೋರಿಯಾದ 1900ನೇ ಇಸವಿಯ ನಾಣ್ಯ, ಅಮೆರಿಕನ್ ಡಾಲರ್, ಜಪಾನ್, ಜರ್ಮನಿ, ನೈಜೀರಿಯಾ, ಸಿಂಗಾಪುರ್ ಹೀಗೆ ನೂರಾರು ದೇಶಗಳ ನಾಣ್ಯಗಳನ್ನು ಇವರು ಕಾಪಿಟ್ಟುಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇನ್ನು ಕೇವಲ ನಾಣ್ಯಗಳು ಮಾತ್ರವಲ್ಲದೆ ಹಳೆ ಕಾಲದ ಭಾರತೀಯ ಹಾಗೂ ವಿದೇಶಿ ನೋಟುಗಳು, ಪೋಸ್ಟಲ್ ಸ್ಟಾಂಪ್ಸ್​ ಗಳನ್ನೂ ಸಂಗ್ರಹಿಸಿರುವ ಇವರು, ಮೊದಲೆಲ್ಲ ಶಾಲಾ- ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳಿ, ಜನರಿಗೆ ಪ್ರದರ್ಶನ ನೀಡಿ ಮಾಹಿತಿಗಳನ್ನು ಉಚಿತವಾಗಿ ಕೊಡುವ ಕಾರ್ಯ ಮಾಡುತ್ತಿದ್ದರು.

ಆದರೆ ಇದೀಗ ವಯಸ್ಸಾದ ಕಾರಣಕ್ಕೆ ಹಾಗೂ ನಾಣ್ಯಗಳು ಹಾಳಾಗುವ ಅಥವಾ ಕದಿಯುವ ಆತಂಕದಿಂದಾಗಿ ಶಾಲೆಗಳಿಂದ ಆಹ್ವಾನ ಬಂದರೆ ಮಾತ್ರ ತೆರಳಿ ಉಚಿತವಾಗಿ ಪ್ರದರ್ಶನ ನೀಡಿ ಬರುತ್ತಿದ್ದಾರೆ. ತುಂಬಾ ಪುರಾತನ ನಾಣ್ಯಗಳು ಇರುವ ಕಾರಣ ವಿದ್ಯಾರ್ಥಿಗಳಲ್ಲಿಯೂ ಕುತೂಹಲ ಇದೆ. ಇದಲ್ಲದೆ ಹಳೆ ವಸ್ತುಗಳ ಸಂಗ್ರಹ ಕೂಡ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ವಿಶಿಷ್ಟ ಸಂಗ್ರಹವೊಂದಕ್ಕೆ ರೆಕಾರ್ಡ್: ಇನ್ನು ಚಿದಾನಂದ ಅವರ ಬಳಿ ಇರುವ ಮತ್ತೊಂದು ವಿಶಿಷ್ಟ ಸಂಗ್ರಹವೊಂದಕ್ಕೆ ರೆಕಾರ್ಡ್ ಕೂಡ ಪಡೆದಿದ್ದಾರೆ. ಇವರ ತೋಟದಲ್ಲಿ ಬೆಳೆದ 10.6 ಸೆಂ.ಮೀ. ಸುತ್ತಳತೆಯ, 4 ಸೆಂ.ಮೀ. ಉದ್ದದ ಅಡಕೆಯೊಂದು ದೇಶದ ಅತಿದೊಡ್ಡ ಅಡಕೆ ಎಂಬ ಹೆಗ್ಗಳಿಕೆ ಪಡೆದಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಇದಲ್ಲದೇ ಮೂರು ಕಣ್ಣಿನ ಅಡಿಕೆ ಕೂಡ ಇದ್ದು 25 ವರ್ಷಗಳಿಂದ ಜೋಪಾನ ಮಾಡಿಕೊಂಡು ಬಂದಿದ್ದಾರೆ.

ಒಟ್ಟಾರೆ ವಿದ್ಯಾರ್ಥಿ ಜೀವನದಿಂದಲೇ ನಾಣ್ಯ ಸಂಗ್ರಹಕ್ಕೆ ಬಿದ್ದು ಕೃಷಿ ಕೆಲಸ ಕಾರ್ಯಗಳ ನಡುವೆ ಸಾವಿರಾರು ನಾಣ್ಯಗಳನ್ನು ಜೋಪಾನ ಮಾಡಿರುವ ಚಿದಾನಂದ ಹೆಗಡೆ ಅವರ ಹವ್ಯಾಸ ಮೆಚ್ಚಲೇ ಬೇಕು. ಅದೇಷ್ಟೇ ಹಣ ಕೊಡುತ್ತೇನೆ ಎಂದರು ಕೊಡದೆ ಇನ್ನಷ್ಟು ಸಂಗ್ರಹಕ್ಕೆ ಮುಂದಾಗಿರುವ ಅವರ ಹವ್ಯಾಸ ಯುವ ಸಮುದಾಯಕ್ಕೆ ಮಾದರಿಯಾಗಿದೆ.

ಇದನ್ನೂ ಓದಿ: ಭಾರತ ಹೆಣ್ಣು ಮಕ್ಕಳ ಸುರಕ್ಷಿತ ತಾಣ: ನಿರೂಪಣೆಗಾಗಿ ಸೈಕಲ್ ಮೂಲಕ ದೇಶ ಪರ್ಯಟನೆ ಹೊರಟ ಯುವತಿ!

Last Updated : Dec 13, 2022, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.