ETV Bharat / state

ತೌಕ್ತೆ ಹಾನಿ: ಉ.ಕನ್ನಡ, ಉಡುಪಿ ಡಿಸಿಯಿಂದ ಮಾಹಿತಿ ಪಡೆದ ಕೇಂದ್ರ ತಂಡ - ‘ತೌಕ್ತೆ ಚಂಡಮಾರುತದ ಹಾನಿ ಬ

ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಹಾಗೂ ಮಾಹಿತಿ ಪಡೆಯಲು ಕೇಂದ್ರದ ಅಧಿಕಾರಿಗಳ ತಂಡ ಆಗಮಿಸಿದೆ.

karawara
ತೌಕ್ತೆ ಚಂಡಮಾರುತದ ಹಾನಿ ಬಗ್ಗೆ ಮಾಹಿತಿ ಪಡೆದ ಕೇಂದ್ರ ತಂಡ
author img

By

Published : Jun 17, 2021, 12:25 PM IST

ಕಾರವಾರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಹಾಗೂ ಮಾಹಿತಿ ಪಡೆಯಲು ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಕೇಂದ್ರ ಅಧಿಕಾರಿಗಳ ತಂಡ ಭೇಟಿ ನೀಡಿತು. ಈ ವೇಳೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಜಗದೀಶ್​ ತಮ್ಮ ಜಿಲ್ಲೆಗಳಲ್ಲಿ ಸಂಭವಿಸಿದ ಹಾನಿಗಳ ಕುರಿತು ವಿವರಿಸಿದರು.

ತೌಕ್ತೆ ಚಂಡಮಾರುತದ ಹಾನಿ ಬಗ್ಗೆ ಮಾಹಿತಿ ಪಡೆದ ಕೇಂದ್ರ ತಂಡ

ರಾಜ್ಯ ವಿಪತ್ತು ಪರಿಹಾರ ನಿಧಿ ಹಾಗೂ ಕೇಂದ್ರ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ 27.71 ಕೋಟಿ ಮತ್ತು ಸಮುದ್ರ ಕೊರೆತದಿಂದ 77.40 ಕೋಟಿಯಂತೆ ಒಟ್ಟು ಅಂದಾಜು 105.11 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿರುತ್ತದೆ. 164.58 ಹೆಕ್ಟೇರ್ ಕೃಷಿಭೂಮಿ, 164 ಮನೆ, 33 ಸೇತುವೆಗಳು, ಭಾಗಶಃ 230 ಬೋಟ್‍ಗಳು, ಶಾಲಾ ಮತ್ತು ಸರ್ಕಾರಿ ಕಟ್ಟಡಗಳು ಸೇರಿದಂತೆ 22 ಕಟ್ಟಡಗಳು ತೌಕ್ತೆ ಚಂಡಮಾರುತದಿಂದ ಹಾನಿಗೊಂಡಿವೆ. ಜೊತೆಗೆ ಭಟ್ಟಳ ಹಾಗೂ ಕುಮಟಾದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆಂದು ಮುಲ್ಲೈ ಮುಹಿಲನ್ ತಿಳಿಸಿದರು.

ಉಡಪಿ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದಿಂದಾಗಿ ಓರ್ವ ಸಾವನ್ನಪ್ಪಿದ್ದಾನೆ. 8 ಮನೆಗಳು ಸಂಪೂರ್ಣ ಮತ್ತು ಭಾಗಶಃ 158 ಮನೆಗಳು, 5 ಜಾನುವಾರು, ಮೀನುಗಾರರ 33 ಬೋಟ್‍ಗಳು, 14 ದೊಡ್ಡ ಬಲೆಗಳು, 32 ಹೆಕ್ಟರ್ ಕೃಷಿ ಭೂಮಿ, ಸಮುದ್ರ ಕೊರೆತದಿಂದ 5.271 ಕಿ.ಮೀ ಪ್ರದೇಶ, ಶಾಲೆಗಳು ಹಾಗೂ ಸರ್ಕಾರಿ ಕಟ್ಟಡಗಳು ಸೇರಿದಂತೆ 18 ಕಟ್ಟಡಗಳು, 39 ಸೇತುವೆಗಳು ಸೇರಿದಂತೆ ಒಟ್ಟು 7017.79 ಲಕ್ಷ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಆರೋಪಿಯನ್ನು 3ನೇ ಬಾರಿ ವಿಚಾರಣೆಗೆ ಕರೆದ ಎಸ್​ಐಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.